ತೆಲುಗು , ತಮಿಳು ಚಿತ್ರರಂಗದಲ್ಲಿ 'ದರ್ಬಾರ್' ಮಾಡುತ್ತಿರುವ ನಟಿ ನಯನತಾರ ಮೊದಲ ಬಾರಿಗ್ ಲವ್, ಟ್ರಸ್ಟ್, ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.
ಚಿತ್ರೀಕರಣ ಹಾಗೂ ಅವಾರ್ಡ್ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ನಯನತಾರಾ ಲಾಕ್‌ಡೌನ್ ಆಗುವ ಮುನ್ನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ತಮ್ಮ ಪಾಸ್ಟ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ನಿರ್ದೇಶಕ ವಿಘ್ನೇಶ್ ಜೊತೆ ಮದುವೆಯಾಗುವುದು ಖಚಿತವಾದರೂ ಎಲ್ಲೋ ನಯನತಾರಾ ಹಾಗೂ ಪ್ರಭುದೇವ ಸಂಬಂಧ ಪ್ರಶ್ನೆಯಾಗಿ ಉಳಿಯುತ್ತಿದೆ.
ದಿನಕ್ಕೆ ಇಷ್ಟೊಂದು ಸಂಭಾವನೆ ಪಡೆಯುತ್ತಾರಾ ನಯನತಾರಾ ಸಹಾಯಕರು?
'ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಹುಟ್ಟಲು ಸಾಧ್ಯವಿಲ್ಲ. ನನ್ನ ಹಿಂದಿನ ಸಂಬಂಧದಲ್ಲೂ ಹಾಗೆ ಆಗಿದೆ ಆ ನಂತರ ನನಗೆ ತಿಳಿಯಿತು ನಂಬಿಕೆ ಇಲ್ಲದವರ ಜೊತೆ ಜೀವನ ಮಾಡುವುದಕ್ಕಿಂತ ಒಂಟಿಯಾಗಿ ಬಾಳುವುದು ಮೇಲು' ಎಂದು ಹೇಳಿಕೆ ನೀಡಿದ್ದಾರೆ.
ನಯನತಾರಾ ಎಂದು ಹೆಸರಿಟ್ಟವರು ಯಾರು? ಶುರುವಾಯ್ತು ನಿರ್ದೇಶಕರ ವಾರ್!
ಪ್ರಭುದೇವ ಜೊತೆ ಬ್ರೇಕಪ್ ಆದ ನಂತರ ನಯನತಾರಾಳ ಹೆಸರು ನಟ ಸಿಂಬು ಜೊತೆ ಕೇಳಿ ಬಂದಿತ್ತು. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಸಿಂಬು ಸಿನಿಮಾ ದತ್ತ ಹೆಚ್ಚು ಗಮನಹರಿಸಿ ಗಾಸಿಪ್‌ಗೆ ಬ್ರೇಕ್ ಹಾಕಿದರು. ಸಿಂಗಲ್ ವುಮೆನ್ ಆಗಿ ಸೂಪರ್ ಲೈಫ್ ಲೀಡ್ ಮಾಡುತ್ತಿದ ನಯನತಾರಾಳ ಲೈಫ್‌ಗೆ ಲೈಟ್ ಆಗಿ ಬಂದವರು ನಿರ್ದೇಶಕ ವಿಫ್ನೇಶ್.
Add Asianetnews Kannada as a Preferred Source

