ಕಿತ್ತಾಟ, ಬೀದಿ ರಂಪಾಟ, ಬಡಿದಾಟ, ಕೋರ್ಟ್ನಲ್ಲಿ ಕಾದಾಟ... ಮತ್ತೆ ಒಂದಾದ ಬಿಗ್ಬಾಸ್ ಆಲಿಯಾ-ಸಿದ್ದಿಕಿ!
ಕಳೆದ ವರ್ಷ ಕಿತ್ತಾಟ, ಆರೋಪ-ಪ್ರತ್ಯಾರೋಪ, ಬಡಿದಾಟದಿಂದಲೇ ಕಳೆದು ಹೋಗಿದ್ದ ಬಿಗ್ಬಾಸ್ ಆಲಿಯಾ ಹಾಗೂ ನಟ ನವಾಜುದ್ದೀನ್ ಸಿದ್ದಿಕಿ ಮತ್ತೆ ಒಂದಾಗಿದ್ದಾರೆ!
ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಅವರ ಪತಿ ಆಲಿಯಾ ಕಳೆದ ವರ್ಷ ಸೃಷ್ಟಿಸಿದ್ದ ಹಂಗಾಮಾ ಅಷ್ಟಿಷ್ಟಲ್ಲ. ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದರೂ ಇವರಿಬ್ಬರ ಕಿತ್ತಾಟ ಬೀದಿ ರಂಪಾಟವಾಗಿತ್ತು. ದಿನನಿತ್ಯವೂ ಮಾಧ್ಯಮಗಳ ಮುಂದೆ ಬಂದು ಆರೋಪ-ಪ್ರತ್ಯಾರೋಪ ಮಾಡುತ್ತಲೇ ಇದ್ದರು. ಬಿಗ್ಬಾಸ್ ಓಟಿಟಿಗೆ ಹೋಗಿದ್ದ ಆಲಿಯಾ ಅಂತೂ ಅಲ್ಲಿ ತಮ್ಮ ಪತಿ ವಿರುದ್ಧ ಬಳಸದ ಪದಗಳೇ ಇಲ್ಲ. ತಮ್ಮ ಮೇಲೆ ಹಲ್ಲೆ ಮಾಡಿ ಹಿಂಸೆ ನೀಡುತ್ತಿರುವ ಕುರಿತು ಆಲಿಯಾ ಕಥೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು. ನಂತರ ಆಲಿಯಾ ಅವರು ನವಾಜ್ ವಿರುದ್ಧ ಅತ್ಯಾಚಾರ (Rape) ಆರೋಪ ಹೊರಿಸಿ ಮತ್ತೊಂದು ಪೊಲೀಸ್ ದೂರು ದಾಖಲಿಸಿದ್ದರು.
ಪತಿ ಮತ್ತು ಅವರ ಕುಟುಂಬಸ್ಥರು ತಮಗೆ ಮನೆಯಿಂದ ಹೊರಹಾಕಲು ಏನೆಲ್ಲಾ ಮಾಡಬೇಕೋ, ಅದೆಲ್ಲವನ್ನೂ ಮಾಡಿದ್ದಾರೆ. ತಮಗೆ ಆಹಾರ, ಹಾಸಿಗೆ ಮತ್ತು ಕನಿಷ್ಠ ಬಾತ್‌ರೂಮ್, ಟಾಯ್ಲೆಟ್ ಹೋಗುವುದಕ್ಕೂ ಸಹ ಅವಕಾಶ ನೀಡುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು. ನಂತರ ನೇರಾನೇರ ರೇಪ್ ಆರೋಪ ಹೊರಿಸಿದ್ದರು. ನವಾಜ್ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆಲಿಯಾ ಕಣ್ಣೀರಿಟ್ಟಿದ್ದರು. 'ಆಗಾಗ್ಗೆ ನವಾಜ್ ಮಹಾನ್ ವ್ಯಕ್ತಿಯಾಗಲು ಪ್ರಯತ್ನಿಸುತ್ತಾರೆ. ನನ್ನ ಮುಗ್ಧ ಮಗುವನ್ನು ಅಕ್ರಮ ಎಂದು ಕರೆಯುತ್ತಾರೆ. ಅವರ ಹೃದಯಹೀನತೆಯ ಬಗ್ಗೆ ಏನು ಮಾತನಾಡಲಿ' ಎಂದು ನೋವಿನಿಂದ ಹೇಳಿಕೊಂಡಿದ್ದ ಆಲಿಯಾ (Aaliya), ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಲಕ್ಷದ್ವೀಪವೀಗ ಹಾಟ್ ಬೆಡಗಿಯರ ತಾಣ- ಏನಂದ್ರು ಕೇಳಿ ಈ ಬಾಲಿವುಡ್ ಸುಂದರಿಯರು
ಆದಾದ ಬಳಿಕ ಆಲಿಯಾ ವಿರುದ್ಧ ನವಾಜುದ್ದೀನ್ ಸಿದ್ದಿಕಿ ₹100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ನಂತರ ಮತ್ತೊಂದು ಮದ್ವೆಯಾಗುವ ಪ್ಲ್ಯಾನ್ ಇದೆಯಾ ಎನ್ನುವ ಪ್ರಶ್ನೆಗೆ ಒಂದು ಸಲ ಮದ್ವೆಯಾಗಿ ಮೋಸ ಹೋಗಿದ್ದೆ. ಇಂಥ ಪತಿಯಿಂದ ನನ್ನ ಬದುಕೇ ನಷ್ಟವಾಯಿತು ಎಂದೆಲ್ಲಾ ಗೋಳಾಡಿದ್ದ ಆಲಿಯಾ, ಈ ಜನ್ಮದಲ್ಲಿ ನಾನು ಮತ್ತೆ ಮದುವೆಯಾಗುವುದಿಲ್ಲ' ಎಂದು ಕಡ್ಡಿ ತುಂಡಾಗುವ ಹಾಗೆ ಹೇಳಿದ್ದರು.
ಇದೀಗ ಕುತೂಹಲದ ಸನ್ನಿವೇಶದಲ್ಲಿ ಈ ಇಬ್ಬರು ದಂಪತಿ ಮತ್ತೆ ಒಂದಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ! ಆಲಿಯಾ ತಮ್ಮ ಮಕ್ಕಳಾದ ಶೋರಾ ಮತ್ತು ಯಾನಿಯೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ. ಹೊಸ ವರ್ಷವನ್ನು ದುಬೈನಲ್ಲಿ ಆಚರಿಸಿದ್ದ ಆಲಿಯಾ ಅಲ್ಲಿ ತಮ್ಮ ಪತಿ ಸಿದ್ದಿಕಿ ಅವರನ್ನೂ ಬರಮಾಡಿಕೊಂಡಿದ್ದಾರೆ. “ನವಾಜ್ ಮತ್ತು ನಾನು ಬಹಳ ವರ್ಷಗಳ ನಂತರ ಮೊದಲ ಬಾರಿಗೆ ಹೊಸ ವರ್ಷವನ್ನು ಆಚರಿಸಿದೆವು ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ನಾವು ಎಂದಿಗೂ ಒಟ್ಟಿಗೆ ಹೊಸ ವರ್ಷವನ್ನು ಸ್ವಾಗತಿಸಿಲ್ಲ, ಆದ್ದರಿಂದ ಇದು ನಮಗಿಬ್ಬರಿಗೂ ವಿಶೇಷ ಎಂದಿದ್ದು, ಹಿಂದಿನ ವೈಮನಸ್ಸು ಮರೆತಿದ್ದೇವೆ ಎಂದಿದ್ದಾರೆ. ಏನೋ ಕೆಲವು ಕಾರಣಕ್ಕೆ ನಮ್ಮಿಬ್ಬರ ನಡುವೆ ಜಗಳವಾಗಿತ್ತು. ಇದೀಗ ಮಕ್ಕಳಿಂದಾಗಿ ಒಂದಾಗಿದ್ದೇವೆ ಎಂದೂ ಹೇಳಿದ್ದಾರೆ. ಇವರಿಬ್ಬರ ಈ ಹೊಸ ಕಥೆ ನೋಡಿ ಫ್ಯಾನ್ಸ್ ಹುಬ್ಬೇರಿಸುತ್ತಿದ್ದಾರೆ.
ಹಸಿ ಮೆಣಸಿನಕಾಯಿ ಥರ ಕಾಣಿಸ್ತಿದ್ದೀನಾ ಎಂದು ಕೇಳಿದ ನಟಿ ಶೆರ್ಲಿನ್ ಚೋಪ್ರಾ: ಫ್ಯಾನ್ಸ್ ಏನ್ ಹೇಳಿದ್ರು ಕೇಳಿ...