ಮಂಗಳಮುಖಿಯಾಗಿ ಬದಲಾದ ಖ್ಯಾತ ನಟ; ಯಾರೆಂದು ಗುರುತಿಸಬಲ್ಲಿರಾ?
ಬಾಲಿವುಡ್ ಖ್ಯಾತ ನಟ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಹಸಿರು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿರುವ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಿನಿಮಾ ಕಲಾವಿದರೂ ಪಾತ್ರಕ್ಕಾಗಿ ಹೇಗೆ ಬೇಕಾದರೂ ಬದಲಾಗುತ್ತಾರೆ. ದಪ್ಪ, ಸಣ್ಣ, ಯಂಗ್ ಆಗಿ ಆಗುವುದು ಹೀಗೆ ವಿವಿಧ ಲುಕ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ಪ್ರಯತ್ನ ಮಾಡುತ್ತಾರೆ. ಇದೀಗ ಬಾಲಿವುಡ್ ಸ್ಟಾರ್ ನಟರೊಬ್ಬರು ಮಂಗಳಮುಖಿಯಾಗಿ ಬದಲಾಗಿದ್ದಾರೆ. ಅಂದಹಾಗೆ ಮಂಗಳಮುಖಿಯರ ಬಗ್ಗೆ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಸಂಚಾರಿ ವಿಜಯ್, ವಿಜಯ್ ಸೇತುಪತಿ ಸೇರಿದಂತೆ ಅನೇಕರು ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಮತ್ತೋರ್ವ ಸ್ಟಾರ್ ನಟ ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಮಂಗಳಮುಖಿಯಾಗಿ ಬದಲಾಗಿದ್ದು ಮಾತ್ಯಾರು ಅಲ್ಲ ನವಾಜುದ್ದೀನ್ ಸಿದ್ದಿಕಿ. ಸಿನಿಮಾ, ವೆಬ್ ಸೀರಿಸ್ ಅಂತ ಬ್ಯುಸಿ ಇರುವ ನವಾಜುದ್ದೀನ್ ಸಿದ್ದಿಕಿ ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಹೊಸ ಲುಕ್‌ನ ಫೋಟೋವನ್ನು ನವಾಜುದ್ದೀನ್ ಸಿದ್ದಿಕಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸ್ಟಾರ್ ನಟನ ಲುಕ್ ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ನವಾಜುದ್ದೀನ್ ಅವರೇ ಎಂದು ಗುರುತು ಹಿಡಿಯಲು ಸಾಧ್ಯವಾಗದೇ ಇರುವ ಮಟ್ಟಕ್ಕೆ ಬದಲಾಗಿದ್ದಾರೆ. ಅಂದಹಾಗೆ ಈ ಲುಕ್ ಹಡ್ಡಿ ಸಿನಿಮಾದಾಗಿದೆ. ಈಗಾಗಲೇ ನವಾಜುದ್ದೀನ್ ಸಿದ್ದಿಕಿ ಅವರ ಮೊದಲ ನೋಟ ರಿವೀಲ್ ಆಗಿತ್ತು. ಇದೀಗ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿ ನಿಜವಾದ ಮಂಗಳಮುಖಿಯರ ಜೊತೆ ನಟಿಸಿದ್ದ ಅನುಭವ ಬಿಚ್ಚಿಟ್ಟಿದ್ದಾರೆ. ಹಸಿರು ಬಣ್ಣದ ಜರಿ ಸೀರೆ ಧರಿಸಿರುವ ನವಾಜುದ್ದೀನ್ ಸಿದ್ದಿಕಿ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ನವಾಜುದ್ದೀನ್ ಸಿದ್ದಿಕಿ ಎಂದು ಯಾರು ಸಹ ಊಹಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಲುಕ್ ಬದಲಾಯಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನವಾಜುದ್ದೀನ್ ನಿಜವಾದ ಮಂಗಳಮುಖಿಯರ ಜೊತೆ ನಟಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಅರ್ಹತೆಗಿಂತ ಹೆಚ್ಚು ಹೊಗಳುತ್ತಾರೆ; KGF 2, RRR ಸಕ್ಸಸ್ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಮಾತು
'ಹಡ್ಡಿ ಸಿನಿಮಾದಲ್ಲಿ ನಿಜ ಜೀವನದ ಟ್ರಾನ್ಸ್ ಮಹಿಳೆಯರೊಂದಿಗೆ ಕೆಲಸ ಮಾಡಿರುವುದು ನಂಬಲಾಗದ ಅನುಭವವಾಗಿದೆ. ಅವರ ಜೊತೆ ಕೆಲಸ ಮಾಡಿದ್ದು ಶಕ್ತಿಯುತವಾಗಿತ್ತು' ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಮಂಗಳಮುಖಿಯಾಗಿ ನಟಿಸಲು ನವಾಜುದ್ದೀನ್ 80ಕ್ಕೂ ಅಧಿಕ ಮಂಗಳಮುಖಿಯರ ಜೊತೆ ಕೆಲಸ ಮಾಡಿದ್ದಾರೆ.
ಹಡ್ಡಿ ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿದ ನವಾಜುದ್ದೀನ್, ತನ್ನ ಮಗಳು ಈ ಪಾತ್ರ ಮಾಡಿದ್ದಕ್ಕೆ ಅಪ್‌ಸೆಟ್ ಆಗಿದ್ದಳು ಎಂದು ಹೇಳಿದರು. ಅಲ್ಲದೇ ನಟಿಯರು ಯಾಕೆ ವ್ಯಾನಿಟಿ ವ್ಯಾನ್‌ನಿಂದ ಹೊರಬರುವುದು ತಡವಾಗುತ್ತದೆ ಎಂದು ನನಗೆ ಈಗ ಗೊತ್ತಾಯಿತು ಎಂದು ತಮಾಷೆ ಮಾಡಿದರು.&
2500 ರೂಪಾಯಿ ಕೊಡದ ನಿರ್ಮಾಪಕನಿಂದ ನವಾಜುದ್ದೀನ್ ಸಿದ್ದಿಕಿ ವಸೂಲಿ ಮಾಡಿದ್ದು ಹೀಗೆ!
'ನನ್ನ ಮಗಳು ನನ್ನನ್ನು ಈ ವೇಷದಲ್ಲಿ ನೋಡಿದಾಗ ತುಂಬಾ ನೊಂದಿದ್ದಳು. ಆದರೀಗ ಇದೊಂದು ಪಾತ್ರಕ್ಕಾಗಿ ಎಂದು ಗೊತ್ತಾಗಿದೆ ಮತ್ತು ಚೆನ್ನಾಗಿದೆ ಎಂದು ಅವಳು ಈಗ ತಿಳಿದಿದ್ದಾಳೆ. ನಾನು ಇದನ್ನು ಹೇಳಲೇಬೇಕು, ಪ್ರತಿದಿನ ಈ ಪಾತ್ರ ಮಾಡುವಾಗ ನಟಿಯರ ಬಗ್ಗೆ ನನಗೆ ಗೌರವ ಹೆಚ್ಚಾಗುತ್ತಿತ್ತು. ಮೇಕಪ್, ಡ್ರೆಸ್, ಉಗುರು ಪ್ರತಿಯೊಂದು ಸರಿಯಾಗಿ ನೋಡಿಕೊಳ್ಳಬೇಕು. ನಟಿರು ತನ್ನ ವ್ಯಾನಿಟಿ ವ್ಯಾನ್‌ನಿಂದ ಹೊರಬರಲು ನಟಿರಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಈಗ ನನಗೆ ತಿಳಿದಿದೆ. ನಾನು ಈಗ ಹೆಚ್ಚು ತಾಳ್ಮೆಯಿಂದಿರುತ್ತೇನೆ' ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.