ಅರ್ಹತೆಗಿಂತ ಹೆಚ್ಚು ಹೊಗಳುತ್ತಾರೆ; KGF 2, RRR ಸಕ್ಸಸ್ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಮಾತು

ನವಾಜುದ್ದೀನ್ ಸಿದ್ದಿಕಿ  ಕೆಜಿಎಫ್-2 ಮತ್ತು ಆರ್ ಆರ್ ಆರ್ ಸಿನಿಮಾಗಳ ಸಕ್ಸಸ್ ಬಗ್ಗೆ ಮಾತನಾಡಿ, ಒಂದು ಸಿನಿಮಾ ಹಿಟ್ ಆದರೇ ಸಾಕು ಎಲ್ಲರೂ ಒಟ್ಟಾಗುತ್ತಾರೆ. ಅರ್ಹತೆಗಿಂತ ಹೆಚ್ಚಾಗಿ ಹೊಗಳುತ್ತಾರೆ. ಅದೇ ರೀತಿ ಒಂದು ಸಿನಿಮಾ ಸೋತರೂ ಸಹ ಜನ ಅರ್ಹತೆಗಿಂತ ಹೆಚ್ಚಾಗಿ ಟೀಕಿಸುತ್ತಾರೆ. ಇದು ಫ್ಯಾಷನ್ ಆಗಿದೆ ಎಂದಿದ್ದಾರೆ.

Nawazuddin Siddiqui about RRR and KGF 2 Success he says Everyone Praises It More Than It Deserves sgk

ಬಾಲಿವುಡ್ ನಲ್ಲಿ ಈಗ ಸೌತ್ ಸಿನಿಮಾಗಳದ್ದೆ ಹವಾ. ಬ್ಯಾಕ್ ಟು ಬ್ಯಾಕ್ ಸೌತ್ ಸಿನಿಮಾಗಳು ಬಾಲಿವುಡ್ ನಲ್ಲಿ ಬ್ಲಾಕ್ ಬಾಸ್ಟರ್ ಆಗುತ್ತಿವೆ. ಇದು ಬಾಲಿವುಡ್ ಮಂದಿಗೆ ನಿದ್ದೆಗೆಡಿಸಿವೆ. ಬಾಲಿವುಡ್ ಭದ್ರ ಕೋಟೆಯೊಳಗೆ ನುಗ್ಗಿರುವ ಸೌತ್ ಸಿನಿಮಾಗಳು ಅಬ್ಬರ ಜೋರಾಗಿದೆ. ದಕ್ಷಿಣದ ಸಿನಿಮಾ ಆರ್ಭಟಕ್ಕೆ ಬಾಲಿವುಡ್ ಮಂದಿ ಥಂಡಾ ಹೊಡೆದಿದ್ದಾರೆ. ಆರ್ ಆರ್ ಆರ್(RRR), ಕೆಜಿಎಫ್-2, (KGF 2), ಪುಷ್ಪ(Pushp) ಸಿನಿಮಾಗಳು ಬಾಲಿವುಡ್ ಘಟಾನುಘಟಿ ಸ್ಟಾರ್ ಗಳ ಸಿನಿಮಾ ದಾಖಲೆಗಳನ್ನು ಪುಡಿ ಪುಡಿ ಮಾಡಿರುವ ಮೂಲಕ ಭಯ ಹುಟ್ಟಿಸಿವೆ. ಇದೀಗ ಸೌತ್ ಮತ್ತು ಬಾಲಿವುಡ್ ಸಿನಿಮಾ ಎನ್ನುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.

ಈ ನಡುವೆ ಬಾಲಿವುಡ್ ಸ್ಟಾರ್ ಮನೋಜ್ ಬಾಜಪೇಯಿ ದಕ್ಷಿಣದ ಸಿನಿಮಾಗಳು ಬಾಲಿವುಡ್ ಮೇಲೆ ಪರಿಣಾಮ ಬೀರಿದೆ ಎಂದು ಒಪ್ಪಿಕೊಂಡಿದ್ದರು. ಅಲ್ಲದೇ ಸೌತ್ ಸಿನಿಮಾಗಳ ಸಕ್ಸಸ್ ಬಾಲಿವುಡ್ ಮಂದಿಯಲ್ಲಿ ನಡುಕ ಹುಟ್ಟಿಸಿವೆ ಎಂದಿದ್ದರು. ಇದೀಗ ಸೌತ್ ಸಿನಿಮಾ ಸಕ್ಸಸ್ ಬಗ್ಗೆ ಬಾಲಿವುಡ್‌ನ ಮತ್ತೋರ್ವ ನಟ ಮಾತನಾಡಿ ಗೆದ್ದ ಸಿನಿಮಾಗಳನ್ನು ಅತಿಯಾಗಿ ಹೊಗಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅದು ಮತ್ಯಾರು ಅಲ್ಲ ನಟ ನವಾಜುದ್ದೀನ್ ಸಿದ್ಧಿಕಿ(Nawazuddin Siddiqui). ಇತ್ತೀಚೆಗಷ್ಟೆ ಸೌತ್ ಸಿನಿಮಾಗಳನ್ನು ನೋಡಲ್ಲ ಎಂದಿದ್ದ ಸಿದ್ದಕಿ ಇದೀಗ ಸೌತ್ ಸಿನಿಮಾ ಸಕ್ಸಸ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಏಪ್ರಿಲ್ 29ರಂದು ತೆರೆಗೆ ಬಂದಿರುವ ಟೈಗರ್ ಶ್ರಾಫ್ ನಾಯಕನಾಗಿ ನಟಿಸಿರುವ ಹೀರೋಪಂಕ್ತಿ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಕೂಡ ನಟಿಸಿದ್ದಾರೆ. ಸಿನಿಮಾ ಪ್ರಮೋಷನ್ ವೇಳೆ ಕೆಜಿಎಫ್-2 ಮತ್ತು ಆರ್ ಆರ್ ಆರ್ ಸಿನಿಮಾಗಳ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ.

'ಒಂದು ಸಿನಿಮಾ ಹಿಟ್ ಆದರೇ ಸಾಕು ಎಲ್ಲರೂ ಒಟ್ಟಾಗುತ್ತಾರೆ. ಅರ್ಹತೆಗಿಂತ ಹೆಚ್ಚಾಗಿ ಹೊಗಳುತ್ತಾರೆ. ಅದೇ ರೀತಿ ಒಂದು ಸಿನಿಮಾ ಸೋತರೂ ಸಹ ಜನ ಅರ್ಹತೆಗಿಂತ ಹೆಚ್ಚಾಗಿ ಟೀಕಿಸುತ್ತಾರೆ. ಇದು ಫ್ಯಾಷನ್ ಆಗಿದೆ. ಈಗ ಬಾಲಿವುಡ್ ಸಿನಿಮಾವೊಂದು ಸೂಪರ್ ಹಿಟ್ ಆದಲ್ಲಿ ಈ ಮಾತುಗಳೆಲ್ಲಾ ಬದಲಾಗುತ್ತವೆ. ಇದು ಕೇವಲ ಟ್ರೆಂಡ್ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

ಸೌತ್ ಸಿನಿಮಾ ಸಕ್ಸಸ್ ಬಾಲಿವುಡ್‌ಗೆ ನಡುಕ ಹುಟ್ಟಿಸಿದೆ, ಇದು ದೊಡ್ಡ ಪಾಠ- ಮನೋಜ್ ಬಾಜಪೇಯಿ

ಹೀರೋಪಂಕ್ತಿ ಸಿನಿಮಾ ಮೊದಲ ದಿನ ನಿರೀಕ್ಷೆಯ ಕಲೆಕ್ಷನ್ ಮಾಡುವಲ್ಲಿ ವಿಫಲವಗಿದೆ. ಬಾಕ್ಸ್ ಆಫೀಸ್ ವಿಶ್ಲೇಷಕರ ಪ್ರಕಾರ ಹೀರೋಪಂಕ್ತಿ ಮೊದಲ ದಿನ 7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅದೇ ದಿನ ಬಿಡುಗಡೆಯಾದ ಬಾಲಿವುಡ್‌ನ ಮೊತ್ತೊಂದು ಸಿನಿಮಾ ಅಜಯ್ ದೇವಗನ್ ನಟನೆಯ ರನ್‌ವೇ 34 ಸಿನಿಮಾ ಕೇವಲ 3 ಕೋಟಿ ಬಾಚಿಕೊಂಡಿದೆ. ಬಾಲಿವುಡ್ ಸಿನಿಮಾಗಿಂತ ಕೆಜಿಎಫ್-2 ಹೆಚ್ಚು ಕಲೆಕ್ಷನ್ ಮಾಡಿದೆ.

2500 ರೂಪಾಯಿ ಕೊಡದ ನಿರ್ಮಾಪಕನಿಂದ ನವಾಜುದ್ದೀನ್ ಸಿದ್ದಿಕಿ ವಸೂಲಿ ಮಾಡಿದ್ದು ಹೀಗೆ!

ಕೆಜಿಎಫ್-2 1000 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿ 4ನೇ ಸ್ಥಾನದಲ್ಲಿದೆ. ಬಾಲಿವುಡ್‌ನಲ್ಲಿ ಇನ್ನೂ ಕೆಜಿಎಫ್-2 ಕಲೆಕ್ಷನ್ ಅಬ್ಬರ ಮುಂದುವರೆದಿದೆ. 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಕೆಜಿಎಫ್-2 ಇನ್ನೆಷ್ಟು ಕೋಟಿ ಗಳಿಕೆ ಮಾಡಲಿದೆ ಎಂದು ಕಾದುನೋಡಬೇಕು.

Latest Videos
Follow Us:
Download App:
  • android
  • ios