ಸಂದೀಪ್ ರೆಡ್ಡಿ ವಂಗ ಈ ಮೊದಲು 'ಅರ್ಜನ್  ರೆಡ್ಡಿ' ಸಿನಿಮಾ ನಿರ್ದೇಶನ ಮಾಡಿದ್ದರು. ಅದರಲ್ಲಿ ನಾಯಕನ ಜತೆ ನಾಯಕಿಗೆ ಕೂಡ ಹೆಚ್ಚಿನ ಸ್ಕೋಪ್ ಕೊಡಲಾಗಿತ್ತು. ಇದೇ ನಿರ್ದೇಶಕರ 'ಅನಿಮಲ್' ಚಿತ್ರ ಸದ್ಯವೇ ತೆರೆಗೆ ಬರುತ್ತಿದ್ದು, ಇದರಲ್ಲೂ ನಾಯಕಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆಯೇ ಎಂಬುದು ಸದ್ಯದ ಚರ್ಚೆಯ ಸಂಗತಿಯಾಗಿದೆ.  

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು 'ಗೃಹಿಣಿ' ಪಾತ್ರದಲ್ಲಿ ಮಿಂಚುತ್ತಿರುವ 'ಪೋಸ್ಟರ್‌' ಒಂದನ್ನು ತಮ್ಮ ಸೋಷಿಯಲ್ ಮೀಡಿಯಾ 'X' ಮೂಲಕ ಹಂಚಿಕೊಂಡಿದ್ದಾರೆ. ಅವರ ಇಂದಿನ (ಸೆಪ್ಟೆಂಬರ್ 23) ಪೋಸ್ಟರ್ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಕೆರಿಯರ್‌ನಲ್ಲಿ ಇಲ್ಲಿಯವರೆಗೂ ಹೆಚ್ಚಾಗಿ 'ಗ್ಲಾಮರ್ ರೋಲ್‌' ನಿರ್ವಹಿಸಿದ್ದ ರಶ್ಮಿಕಾ, ಇದೀಗ ಅಪ್ಪಣ 'ಗೃಹಿಣಿ ಲುಕ್‌'ನಲ್ಲಿ ಮಿಂಚುತ್ತಿದ್ದು, ಹಲವರು ಭಾರೀ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತಮ್ಮ ಪೋಸ್ಟರ್ ಹಂಚಿಕೊಂಡು ರಶ್ಮಿಕಾ 'ನಿಮ್ಮ ಗೀತಾಂಜಲಿ' ಎಂದು ಕ್ಯಾಪ್ಶನ್ ನೀಡಿದ್ದಾರೆ. 

ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಅನಿಮಲ್' ಚಿತ್ರದಲ್ಲಿ ನಾಯಕರಾಗಿ ಬಾಲಿವುಡ್ ನಟ ರಣಬೀರ್ ಕಪೂರ್ ನಟಿಸಿದ್ದಾರೆ. ನಾಯಕಿಯಾಗಿ ನಟಿಸುತ್ತಿರುವ ನಟಿ ರಶ್ಮಿಕಾ ಈ ಚಿತ್ರದಲ್ಲಿ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಬಿಡುಗಡೆಯಾಗಿರುವ ಪೋಸ್ಟರ್‌ ಸಹ ರಶ್ಮಿಕಾರ ಲುಕ್ ಹೊಸ ರೀತಿಯಲ್ಲಿದೆ ಎಂಬುದಕ್ಕೆ ಸಾಕ್ಷಿ ನುಡಿಯುವಂತಿವೆ. ವೃತ್ತಿ ಜೀವನದಲ್ಲಿ ಗ್ಲಾಮರಸ್‌ ಆಗಿ ಹೆಚ್ಚಾಗಿ ಮಿಂಚಿದ್ದ ರಶ್ಮಿಕಾರ ಈ ಹೊಸ ಲುಕ್‌ ಬಗ್ಗೆ ಹೆಚ್ಚಿನ ಕುತೂಹಲ ಸೃಷ್ಟಿಯಾಗಿದೆ.

ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ; ರಕ್ಷಿತ್ ಶೆಟ್ಟಿಗೆ ಎಚ್ಚರಿಗೆ ಕೊಟ್ಟ ನೆಟ್ಟಿಗರು!

ಸಂದೀಪ್ ರೆಡ್ಡಿ ವಂಗ ಈ ಮೊದಲು 'ಅರ್ಜನ್ ರೆಡ್ಡಿ' ಸಿನಿಮಾ ನಿರ್ದೇಶನ ಮಾಡಿದ್ದರು. ಅದರಲ್ಲಿ ನಾಯಕನ ಜತೆ ನಾಯಕಿಗೆ ಕೂಡ ಹೆಚ್ಚಿನ ಸ್ಕೋಪ್ ಕೊಡಲಾಗಿತ್ತು. ಇದೇ ನಿರ್ದೇಶಕರ 'ಅನಿಮಲ್' ಚಿತ್ರ ಸದ್ಯವೇ ತೆರೆಗೆ ಬರುತ್ತಿದ್ದು, ಇದರಲ್ಲೂ ನಾಯಕಿಗೆ ಹೆಚ್ಚಿನ ಪ್ರಾಶಸ್ತ್ಯ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ. ಸುದ್ದಿ ನಿಜವಾಗಿದ್ದರೆ, ನಾಯಕಿ ರಶ್ಮಿಕಾ ಹಾಗೂ ಅವರ ಅಭಿಮಾನಿಗಳು ಹೆಚ್ಚಿನ ಸಂತೋಷ ಪಡುವುದು ಗ್ಯಾರಂಟಿ!

ಟಿಆರ್‌ಪಿ ರೇಸ್‌ನಲ್ಲಿ ಧಾರಾವಾಹಿಗಳ ಮಧ್ಯೆ ತೀವ್ರ ಪೈಪೋಟಿ: ಸೆಕೆಂಡ್ ಟಾಪ್ ಯಾವುದು?

ಅನಿಮಲ್ ಚಿತ್ರದ ಈ ಹೊಸ ಪೋಸ್ಟರ್‌ನಲ್ಲಿ ರಶ್ಮಿಕಾ ಮೆರೂನ್ ಬಣ್ಣದ ರೇಷ್ಮೆ ಸೀರೆ ಉಟ್ಟಿದ್ದಾರೆ. ಕತ್ತಿನಲ್ಲಿ ತಾಳಿ ಸರವೂ ಕಾಣಿಸುತ್ತಿದೆ. ಅಪ್ಪಟ ಗೃಹಿಣಿ ರೂಪದಲ್ಲಿ ಕಂಗೊಳಿಸುತ್ತಿರುವ ರಶ್ಮಿಕಾ ಮಂದಣ್ಣ, ಈ ಚಿತ್ರದ ಪೋಸ್ಟರ್ ಮೂಲಕ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿರುವುದಂತೂ ಪಕ್ಕಾ. ಸಿನಿಮಾ ತೆರೆಗೆ ಬಂದಾಗ ಪ್ರೇಕ್ಷಕರು ರಶ್ಮಿಕಾರ ಈ ಹೊಸ ಅವತಾರವನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಅಂದಹಾಗೆ, ಈ ಚಿತ್ರದಲ್ಲಿ ನಟಿಸಿರುವ ಇನ್ನೊಬ್ಬರು ಬಾಲಿವುಡ್ ಹಿರಿಯ ಸ್ಟಾರ್ ನಟ ಅನಿಲ್ ಕಪೂರ್ ಅವರ ಪೋಸ್ಟರ್ ಕೂಡ ಇತ್ತೀಚೆಗೆ ರಿಲೀಸ್ ಆಗಿದ್ದು, ಹೆಚ್ಚು ಗಮನ ಸೆಳೆದಿದೆ.