ಬಾಲಿವುಡ್‌ನ ಬ್ಯಾಡ್‌ಲಕ್ ಎಂದು 13 ಚಿತ್ರದಿಂದ ರಿಜೆಕ್ಟ್ ಆದ ನಟಿ; ಈಗ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 136 ಕೋಟಿ!
ಬಾಲಿವುಡ್‌ನಲ್ಲಿ ಅವಕಾಶಗಾಗಿ ಅಲೆಯುತ್ತಿದ್ದ ಈ ನಟಿಯನ್ನು ಆರಂಭದಲ್ಲಿ 13 ಚಿತ್ರಗಳಿಂದ ಹೊರಹಾಕಲಾಯಿತು. ನಿರ್ಮಾಪಕರು ಈಕೆಯನ್ನು ಬ್ಯಾಡ್‌ಲಕ್ ಎಂದು ಕರೆದರು. ಆದರೆ ಆಕೆಯೀಗ ಪ್ರಸ್ತುತ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬಾಕೆ. ರಾಷ್ಟ್ರ ಪ್ರಶಸ್ತಿ ಮತ್ತು ಪದ್ಮಶ್ರೀ ಪುರಸ್ಕೃತೆ. ಯಾರು ಆ ನಟಿ?
ಸಿನಿಮಾರಂಗದಲ್ಲಿ ನೇಮ್-ಫೇಮ್ ಗಳಿಸಲು ಹಲವಾರು ವರ್ಷಗಳು ಬೇಕಾಗುತ್ತವೆ. ಪ್ರತಿಭೆಯಿದ್ದರೂ ಕೆಲವೊಮ್ಮೆ ಅವಕಾಶಗಳೇ ಸಿಗುವುದಿಲ್ಲ. ಹೀಗೆ ಬಾಲಿವುಡ್‌ನಲ್ಲಿ ಅವಕಾಶ ವಂಚಿತರಾದ ಹಲವಾರು ನಟ-ನಟಿಯರಿದ್ದಾರೆ. ವರ್ಷಾನುಗಟ್ಟಲೆ ಒಂದು ಛಾನ್ಸ್‌ಗಾಗಿ ಅಲೆದಾಡಿ ಹೈರಾಣಾಗಿರುತ್ತಾರೆ. ಹಾಗೆಯೇ ಬಾಲಿವುಡ್‌ನಿಂದ ತಿರಸ್ಕರಿಸಲ್ಪಟ್ಟ ನಟಿಯರಲ್ಲಿ ಇವರೂ ಒಬ್ಬರು. ಬರೋಬ್ಬರಿ 13 ಚಿತ್ರಗಳಿಂದ ಹೊರ ಹಾಕಲ್ಪಟ್ಟರು. ಯಾವುದೇ ಸಿನಿಮಾಗಳಲ್ಲಿ ಅವಕಾಶಗಳು ಸಿಗಲ್ಲಿಲ್ಲ. ಆದರೆ ಈಗ ಹಿಂದಿ ಸಿನಿಮಾಗಳಲ್ಲಿ ಹೈಯೆಸ್ಟ್ ಸಂಭಾವನೆ ಪಡೆಯೋ ನಟಿಯರಲ್ಲಿ ಒಬ್ಬರು.
ಪ್ರಸ್ತುತ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಈ ನಟಿಯ ಪೋಸ್ಟರ್ ಅಥವಾ ಟೀಸರ್ ರಿಲೀಸ್ ಆದರೆ ಸಾಕು ಪ್ರೇಕ್ಷಕರು ಸಿನಿಮಾಗಾಗಿ ಕಾದು ಕೂರುತ್ತಾರೆ. ತಮ್ಮ ಅಭಿನಯದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಮತ್ತು ಪದ್ಮಶ್ರೀ ಪುರಸ್ಕೃತರು. ಆ ನಟಿ ಮತ್ಯಾರೂ ಅಲ್ಲ ವಿದ್ಯಾ ಬಾಲನ್.
ಮಸಾಜ್ ಮಾಡುವವರಿಂದಲೂ ವಿದ್ಯಾ ಬಾಲನ್ ಬಾಡಿ ಶೇಮಿಂಗ್‌ಗೆ ಗುರಿ!
ವಿದ್ಯಾ ಬಾಲನ್ ಸಿನಿಜರ್ನಿ
ಜನವರಿ 1, 1989ರಂದು ಮಧ್ಯಮ ವರ್ಗದ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ವಿದ್ಯಾ ಬಾಲನ್ ಜನಿಸಿದರು. ಆದರೆ ಬಾಲ್ಯದಲ್ಲಿ ಅವರು ಎಲ್ಲಾ ಮಕ್ಕಳೊಂದಿಗೆ ಆಟವಾಡಲು ಇಷ್ಟಪಡಲಿಲ್ಲ. ಮನೆಯೊಳಗೆ ಕುಳಿತು ತನ್ನ ನೆಚ್ಚಿನ ಆಹಾರವನ್ನು ತಿನ್ನುತ್ತಿದ್ದರು. ಒಂದು ದಿನ, ವಿದ್ಯಾ, ಮಾಧುರಿ ದೀಕ್ಷಿತ್ ಅವರ ಫೇಮಸ್ ಸಾಂಗ್ 'ಏಕ್ ದೋ ತೀನ್' ನೃತ್ಯವನ್ನು ನೋಡಿದರು. ಡ್ಯಾನ್ಸ್ ನೋಡಿ ತಾನೂ ಸಹ ಮಾಧುರಿ ದೀಕ್ಷಿತ್ ಅವರಂತೆ ನಟಿಯಾಗಬೇಕೆಂದು ಬಯಸಿದರು. ಸತತ ಮೂರು ಗಂಟೆಗಳ ಕಾಲ ತಮ್ಮ ಕೋಣೆಯ ಕನ್ನಡಿಯ ಮುಂದೆ ಹಾಡಿಗೆ ನೃತ್ಯ ಮಾಡುತ್ತಿದ್ದರು.
ಕಾಲೇಜಿನಲ್ಲಿ, ವಿದ್ಯಾ ಬಾಲನ್ ನಟನಾ ಕಾರ್ಯಾಗಾರಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಕಾಲೇಜು ಮುಗಿಸಿದ ನಂತರ ವಿದ್ಯಾಗೆ ಏಕ್ತಾ ಕಪೂರ್ ಅವರ ಸಿಟ್ಕಾಮ್ ಹಮ್ ಪಾಂಚ್‌ಗಾಗಿ ಆಫರ್ ಸಿಕ್ಕಿತು. ಹಮ್ ಪಾಂಚ್ ನಂತರ ವಿದ್ಯಾ ಹಲವಾರು ಟಿವಿ ಜಾಹೀರಾತುಗಳನ್ನು ಮಾಡಿದರು. ವಿದ್ಯಾ ಅವರ ಮೊದಲ ಸಂಬಳ ತಿಂಗಳಿಗೆ 1200 ರೂ. ಆಗಿತ್ತು ಜೊತೆಗೆ ಪ್ರಯಾಣ ಭತ್ಯೆ 25 ರೂ. ದೊರಕಿತ್ತು.
'ಡರ್ಟಿ ಪಿಕ್ಚರ್'ನಲ್ಲಿ ಬೆತ್ತಲಾಗಿದ್ದ ವಿದ್ಯಾ ಬಾಲನ್, ಸಿಲ್ಕ್ ಸ್ಮಿತಾ ಪಾತ್ರ ಮಾಡಿದ ನಂತರ ಜೀವನಾನೇ ಬದಲಾಯ್ತಂತೆ!
'ಬ್ಯಾಡ್‌ಲಕ್' ನಟಿಯೆಂದು ಕರೆಸಿಕೊಂಡಿದ್ದ ವಿದ್ಯಾ ಬಾಲನ್
ಜಾಹೀರಾತಿನ ಚಿತ್ರೀಕರಣದ ವೇಳೆ ವಿದ್ಯಾಗೆ ದಕ್ಷಿಣದ ಚಿತ್ರವೊಂದಕ್ಕೆ ಆಫರ್ ಬಂದಿತ್ತು. ಚಕ್ರಂನಲ್ಲಿ ಮೋಹನ್‌ಲಾಲ್‌ಗೆ ನಾಯಕಿಯಾಗಿ ನಟಿಸಲು ವಿದ್ಯಾಗೆ ಆಫರ್ ನೀಡಲಾಯಿತು. ಚಕ್ರಮ್ ಹೊರತಾಗಿ ಇನ್ನೂ 12 ಚಿತ್ರಗಳಿಗೆ ವಿದ್ಯಾ ಸಹಿ ಮಾಡಿದ್ದರು. ಆದರೆ ಅದಾಗಿ ಕೆಲವೇ ದಿನಗಳಲ್ಲಿ ಅವರನ್ನು ಚಿತ್ರದಿಂದ ಕೈ ಬಿಡಲಾಯಿತು. ಆಕೆಯನ್ನು ಬ್ಯಾಡ್‌ಲಕ್ ಎಂದು ದೂರಲಾಯಿತು. ಅದಾಗಿ ಎಲ್ಲಾ 13 ಚಿತ್ರಗಳಿಂದ ವಿದ್ಯಾ ಬಾಲನ್‌ರನ್ನು ಹೊರಹಾಕಲಾಯಿತು.
ವಿದ್ಯಾ ಬಾಲನ್ ಫ್ಯಾಶನ್ ಸೆನ್ಸ್‌ಗಾಗಿ ಬಾಲಿವುಡ್‌ನ ಮಂದಿ ಆಕೆಯನ್ನು ಕೆಟ್ಟದಾಗಿ ಟ್ರೋಲ್ ಮಾಡಿದ ಸಮಯವಿತ್ತು. ಹಲವಾರು ಪ್ರಾಜೆಕ್ಟ್‌ಗಳಿಂದ ವಿದ್ಯಾ ಬಾಲನ್‌ರನ್ನು ತಿರಸ್ಕರಿಸಲಾಯಿತು.
ವಿದ್ಯಾ ಅವರ ಚೊಚ್ಚಲ ಚಿತ್ರವು ಬೆಂಗಾಲಿ ಚಿತ್ರ ಭಲೋ ಥೆಕೋದೊಂದಿಗೆ ಬಂದಿತು. ಬೆಂಗಾಲಿ ಚಲನಚಿತ್ರದಲ್ಲಿ ಅವರ ಪಾತ್ರವನ್ನು ಪ್ರಶಂಸಿಸಲಾಯಿತು ಮತ್ತು ದಿವಂಗತ ನಿರ್ದೇಶಕ ಪ್ರದೀಪ್ ಸರ್ಕಾರ್ ಅವರು ವಿಧು ವಿನೋದ್ ಚೋಪ್ರಾ ಅವರ ನಿರ್ಮಾಣದ ಪರಿಣೀತಾಗೆ ಆಡಿಷನ್ ಮಾಡಲು ಶಿಫಾರಸು ಮಾಡಿದರು. ಪರಿಣೀತಾ ಬಾಕ್ಸಾಫೀಸ್ ಹಿಟ್ ಆಯಿತು. ಆ ನಂತರ ವಿದ್ಯಾ ಬಾಲನ್, ಹೇ ಬೇಬಿ, ಭೂಲ್ ಭುಲೈಯಾ, ನೋ ಒನ್ ಕಿಲ್ಡ್ ಜೆಸ್ಸಿಕಾ, ದಿ ಡರ್ಟಿ ಪಿಕ್ಚರ್, ಕಹಾನಿ, ಶೆರ್ನಿ, ಶಕುಂತಲಾ ದೇವಿ, ಮತ್ತು ಜಲ್ಸಾದಂತಹ ಚಿತ್ರಗಳ ಮೂಲಕ ತಮ್ಮ ನಟನೆಯನ್ನು ಸಾಬೀತುಪಡಿಸಿದರು. ಪ್ರಸ್ತುತ ವಿದ್ಯಾ ಬಾಲನ್ ಅವರ ನಿವ್ವಳ ಮೌಲ್ಯವು 18 ಮಿಲಿಯನ್ ಅಂದರೆ ಬರೋಬ್ಬರಿ 136 ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದೆ.