ರಾಮಾ ರಾಮಾ ರಾ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಕಾಮಾಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಸತ್ಯ ಪ್ರಕಾಶ್ ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ. ಆದರೆ ಈ ಸಿನಿಮಾಗೆ ಸತ್ಯ ಪ್ರಕಾಶ್ ನಿರ್ದೇಶನ ಮಾಡುತ್ತಿಲ್ಲ ಬದಲಿಗೆ ಕಥೆ ಬರೆಯುತ್ತಿದ್ದಾರೆ.

ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ಸಿನಿಮಾ ಮೂಲಕ ಖ್ಯಾತಿಗಳಿಸಿರುವ ನಿರ್ದೇಶಕ ಸತ್ಯ ಪ್ರಕಾಶ್(Satya Prakash) ಸದ್ಯ ಮತ್ತೊಂದು ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸತ್ಯಪ್ರಕಾಶ್ ಸದ್ಯ ಮ್ಯಾನ್‌ ಆಫ್‌ ದಿ ಮ್ಯಾಚ್ (Man of the Match) ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ನಡುವೆ ಸತ್ಯಪ್ರಕಾಶ್ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ. ಅಂದಹಾಗೆ ಈ ಬಾರಿ ಸತ್ಯಪ್ರಕಾಶ್ ಕಾಮಿಡಿ ಸಿನಿಮಾಗೆ ಸಜ್ಜಾಗಿದ್ದಾರೆ. ಆದರೆ ಈ ಚಿತ್ರವನ್ನು ಅವರು ನಿರ್ದೇಶನ ಮಾಡುತ್ತಿಲ್ಲ. ಬದಲಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆಯುತ್ತಿದ್ದಾರೆ.

ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಬಳಿಕ ಅದೇ ತಂಡ ಮತ್ತೆ ಒಂದಾಗುತ್ತಿದೆ. ಈ ಸಿನಿಮಾಗೆ ಸತ್ಯಪ್ರಕಾಶ್ ಕಥೆ ಬರೆಯುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಂದಹಾಗೆ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಯುವ ಪ್ರತಿಭೆ ಮಿಲಿಂದ್(Milind) ಕಾಣಿಸಿಕೊಳ್ಳುತ್ತಿದ್ದಾರೆ. ಮಿಲಿಂದ್ ಈಗಾಗಲೇ ಒಂದು ಸಿನಿಮಾ ಮಾಡಿದ್ದು ಇದೀಗ ಎರಡನೇ ಸಿನಿಮಾಗೆ ಸಜ್ಜಾಗಿದ್ದಾರೆ.

ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸ ಭರ್ಜರಿಯಾಗಿ ನಡೆಯುತ್ತಿದ್ದು ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಸಿನಿಮಾವಾಗಿದೆ ಎಂದು ಸತ್ಯ ಪ್ರಕಾಶ್ ಹೇಳಿದ್ದಾರೆ. ಈ ಬಗ್ಗೆ ನಿರ್ದೇಶಕ ಸತ್ಯಪ್ರಕಾಶ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದು, 'ಇದೊಂದು ಕಾಮಿಡಿ ಸಿನಿಮಾವಾಗಿದೆ. ಈ ಸಿನಿಮಾ ಪುರಾತನ ವಸ್ತುವಿನ ಸುತ್ತ ಸುತ್ತುತ್ತದೆ. ಪ್ರಾರಂಭದಿಂದ ಕೊನೆಯವರೆಗೂ ಎಲ್ಲರನ್ನೂ ನಗಿಸುತ್ತದೆ. ಸ್ಯಾಂಡಲ್ ವುಡ್ ನಲ್ಲಿ ಇಂತಹ ವಿಷಯದ ಮೇಲೆ ಯಾರು ಇದುವರೆಗೂ ಸಿನಿಮಾ ಮಾಡಿಲ್ಲ' ಎಂದು ಹೇಳಿದ್ದಾರೆ. 

ಸತ್ಯಪ್ರಕಾಶ್‌ ಹೊಸ ಸಿನಿಮಾ 'ಮ್ಯಾನ್‌ ಆಫ್‌ ದಿ ಮ್ಯಾಚ್‌'; ಕ್ಯಾಂಡಿಡ್‌ ವಿನ್ಯಾಸದಲ್ಲಿ ಅಡಿಷನ್‌ ಕಥೆ!

ಇನ್ನು ಹೊಸ ಸಿನಿಮಗೆ ಬರಹಗಾರನಾಗಿ ಕೆಲಸ ಮಾಡುವ ಬಗ್ಗೆ ಮಾತನಾಡಿದ ಸತ್ಯಪ್ರಕಾಶ್, 'ಒಬ್ಬ ಸಿನಿಮಾ ನಿರ್ದೇಶಕನಾಗಿದ್ದರೂ ವ್ಯತ್ಯಾಸಗಳಿವೆ. ಈ ಸ್ಕ್ರಿಪ್ಟ್ ಗೆ ನನಗೆ ಹೊಸ ಮುಖ ಬೇಕು. ಅದ್ದರಿಂದ ನಾವು ಕೇವಲ ಒಂದು ಸಿನಿಮಾದಲ್ಲಿ ನಟಿಸಿರುವ ಮಿಲಿಂದ್ ಅವರನ್ನು ಆಯ್ಕೆ ಮಾಡಿದ್ದೀವಿ. ಸದ್ಯ ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಾಟದಲ್ಲಿದ್ದೇವೆ. ನಾಯಕಿ ಮತ್ತು ಉಳಿದ ಪಾತ್ರ ವರ್ಗಗಳನ್ನು ಅಂತಿಮ ಗೊಳಿಸಿದ ಬಳಿಕ ಮೇ ತಿಂಗಳಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುತ್ತೇವೆ' ಎಂದು ಸತ್ಯಪ್ರಕಾಶ್ ಮಾಹಿತಿ ನೀಡಿದ್ದಾರೆ.

Achyuth Kumar ಅಭಿನಯದ 'ಫೋರ್ ವಾಲ್ಸ್' ಚಿತ್ರ ವಿತರಿಸಲಿರುವ ಸತ್ಯಪ್ರಕಾಶ್

ಅಂದಹಾಗೆ ಇನ್ನು ಹೆಸರಿಡದ ಈ ಕಾಮಿಡಿ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳನ್ನು ನೀಡಿರುವ ಸತ್ಯಪ್ರಕಾಶ್ ಅವರ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ನಲ್ಲಿ ಮೂಡಿಬರುತ್ತಿದೆ. ಸಿನಿಮಾ ನಿರ್ದೇಶನದ ಜೊತೆಗೆ ಸತ್ಯಪ್ರಕಾಶ್ ಇತ್ತೀಚಿಗಷ್ಟೆ ಸಿನಿಮಾ ಹಂಚಿಕೆ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಎನ್ನುವ ತಮ್ಮದೆ ಬ್ಯಾನರ್ ಹುಟ್ಟುಹಾಕಿದ್ದಾರೆ.