‘ಮ್ಯಾನ್ ಆಫ್ ದಿ ಮ್ಯಾಚ್ ನನ್ನ ಹೊಸ ಸಿನಿಮಾ ಟೈಟಲ್. ಹಾಗಂತ ಇದು ಖಂಡಿತಾ ಸ್ಪೋಟ್ಸ್‌ರ್ ಸಬ್ಜೆಕ್ಟ್ ಅಲ್ಲ’ ಅಂದರು ರಾಮಾ ರಾಮಾ ರೇ ನಿರ್ದೇಶಕ ಸತ್ಯಪ್ರಕಾಶ್.
ಅವರ ಮೂರನೇ ಸಿನಿಮಾ ‘ಮ್ಯಾನ್ ಆಫ್ ದಿ ಮ್ಯಾಚ್’ನ ಟೈಟಲ್ ಲಾಂಚ್, ಮುಹೂರ್ತ ಕಾರ್ಯಕ್ರಮ ಬನಶಂಕರಿಯ ಬನಗಿರಿ ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯಿತು.
‘ಪ್ರತೀ ದಿನ ಪ್ರತಿಯೊಬ್ಬನಿಗೂ ಮ್ಯಾಚ್ ನಡೀತಿರುತ್ತದೆ. ಸಂಜೆ ವಾಪಾಸ್ ಮನೆಗೆ ಬರುವಾಗ ಆತ ಗೆದ್ದಿರಬೇಕು ಅಥವಾ ಸೋತಿರಬೇಕು. ಸಂಜೆ ಅವನು ಗೆಲ್ತಾನಾ, ಅವನ ಆದರ್ಶ ಗೆಲ್ಲುತ್ತಾ ಅಥವಾ ಯೋಚನೆ ಗೆಲ್ಲುತ್ತಾ ಎಂಬ ಐಡಿಯಾದಡಿ ಇಡೀ ಸಿನಿಮಾವನ್ನು ಹೆಣೆಯಲಾಗಿದೆ. ಈ ಚಿತ್ರ ಒಂದೇ ದಿನ ಒಂದೇ ಜಾಗದಲ್ಲಿ ನಡೆಯುವ ಕಥೆ’ ಎಂದರು ಸತ್ಯಪ್ರಕಾಶ್.
ಹಾಲು ಕರೆಯೋಕೆ ಗೊತ್ತಿದ್ದರೆ ಮಾತ್ರ ದನ ಸಾಕಬೇಕು; ದರ್ಶನ್ ಹೇಳಿದ ಕತೆ!
‘ಇಡೀ ಸಿನಿಮಾ ನಾರ್ಮಲ್ ಸಿನಿಮಾ ವಿನ್ಯಾಸದಲ್ಲಿಲ್ಲ. ಕ್ಯಾಂಡಿಡ್ ಫಾಮ್ರ್ಯಾಟ್‌ನಲ್ಲಿ ಚಿತ್ರೀಕರಿಸುತ್ತಿದ್ದೇವೆ. ಆಡಿಶನ್ ಸಬ್ಜೆಕ್ಟ್ ಪ್ರಧಾನವಾಗಿರುತ್ತೆ. ನಟ ಎಂಬವರು ನಿರ್ದೇಶಕನಾಗಿ, ಧರ್ಮಣ್ಣ ಪ್ರೊಡ್ಯೂಸರ್ ಪಾತ್ರ ಮಾಡಲಿದ್ದಾರೆ. ಉಳಿದಂತೆ ನೂರಾರು ಕಲಾವಿದರನ್ನು ಆಡಿಶನ್‌ಗೆ ಬರುವವರಂತೆ ಚಿತ್ರೀಕರಿಸಲಾಗಿದೆ. 50 ಜನ ಹೊಸ ನಟ ನಟಿಯರಿರುತ್ತಾರೆ. ಉಳಿದಂತೆ ರಿಯಲ್ ಟೆಕ್ನಿಷಿಯನ್ಸ್ ಸಿನಿಮಾದಲ್ಲೂ ಬರುತ್ತಾರೆ’ ಎನ್ನುತ್ತಾ ತನ್ನ ಹೊಸ ಸಿನಿಮಾ ಹೇಗೆ ಭಿನ್ನ ಅನ್ನೋದನ್ನು ಸತ್ಯ ಪ್ರಕಾಶ್ ಬಿಚ್ಚಿಟ್ಟರು.
ಪ್ರಥಮ್ 'ಕರ್ನಾಟಕದ ಅಳಿಯ' ರಾಘವೇಂದ್ರ ರಾಜ್‌ಕುಮಾರ್ ಸೂಪರ್ ಬ್ಯಾಟಿಂಗ್
ಈ ಹಿಂದಿನ ಚಿತ್ರಗಳಲ್ಲಾದರೆ ಜರ್ನಿ ಕಥೆ ಇತ್ತು, ಹಾಗಾಗಿ ಅಂಥಾ ಚಾಲೆಂಜಿಂಗ್ ಅನಿಸಲಿಲ್ಲ. ಆದರೆ ಈ ಸಿನಿಮಾ ಸಂಪೂರ್ಣ ಹೊಸತನದಿಂದ ಕೂಡಿದ್ದು, ಹೆಜ್ಜೆ ಹೆಜ್ಜೆಗೂ ಸವಾಲಿದೆ ಎಂಬುದು ಸತ್ಯಪ್ರಕಾಶ್ ಮಾತು.
ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಕ್ಲಾಪ್ ಮಾಡಿದರು. ನಟ ಡಾಲಿ ಧನಂಜಯ ಕ್ಯಾಮರಾ ಸ್ವಿಚ್ ಆನ್ ಮಾಡಿದರು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟರಾದ ವೀಣಾ ಹಾಗೂ ಸುಂದರ್, ಕಲಾವಿದರು, ತಂತ್ರಜ್ಞರು ಪಾಲ್ಗೊಂಡರು.
ಸತ್ಯ ಪಿಕ್ಚರ್ಸ್ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್‌ನಡಿ ಸಿನಿಮಾ ಹೊರಬರಲಿದೆ.
Last Updated Mar 19, 2021, 9:49 AM IST