ನಾವು ಮಕ್ಕಳನ್ನು ಪಡೆಯಬಹುದು ಆದರೇ...: ಮಗು ಮಾಡಿಕೊಳ್ಳುವ ಬಗ್ಗೆ ಪವಿತ್ರಾ-ನರೇಶ್ ನೇರ ಮಾತು
ಮಗು ಮಾಡಿಕೊಳ್ಳುವ ಬಗ್ಗೆ ಪವಿತ್ರಾ ಲೋಕೇಶ್ ಮತ್ತು ನರೇಶ್ ಬಹಿರಂಗ ಪಡಿಸಿದ್ದಾರೆ.
ಕನ್ನಡದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಜೋಡಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧ ಬೀದಿ ರಂಪಾಟವಾಗಿತ್ತು. ಮೂರನೇ ಪತ್ನಿ ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ವಿರುದ್ಧ ಸಿಡಿದೆದ್ದಿದ್ದರು. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ರದ್ಧಾಂತವೇ ಆಗಿತ್ತು. ಇದೀಗ ಇಬ್ಬರೂ ಮಳ್ಳಿ ಪೆಳ್ಳಿ ಸಿನಿಮಾ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ ಮತ್ತೆ ಮದುವೆ ಹೆಸರಿನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಮೂಲಕ ತಮ್ಮದೇ ಕತೆ ಹೇಳುತ್ತಿದ್ದಾರೆ ಈ ಜೋಡಿ. ಸದ್ಯ ಈ ಜೋಡಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಪ್ರಚಾರದ ವೇಳೆ ಪವಿತ್ರಾ ಮತ್ತು ನರೇಶ್ ಇಬ್ಬರೂ ಮಕ್ಕಳನ್ನು ಪಡೆಯುವ ಬಗ್ಗೆ ನೇರವಾಗಿ ಮಾತನಾಡಿದ್ದಾರೆ.
ಮಕ್ಕಳನ್ನು ಪಡೆಯ ಬಹುದು ಆದರೆ ನಮಗೆ ವಯಸ್ಸಾದ ಮೇಲೆ ಮಗುವಿಗೆ 20 ವರ್ಷ ಆಗಿರುತ್ತೆ ಎಂದು ಹೇಳಿದ್ದಾರೆ. 'ನಾವು ವೈದ್ಯಕೀಯ ಸೌಲಭ್ಯಗಳ ಮೂಲಕ ಇನ್ನೂ ಮಕ್ಕಳನ್ನು ಪಡೆಯಬಹುದು. ಆದರೆ ನನಗೆ 80 ವರ್ಷವಾದಾಗ ಮಗುವಿಗೆ ಇನ್ನೂ 20 ವರ್ಷವಾಗಿರುತ್ತದೆ. ಹಾಗಾಗಿ ಅದು ಅಗತ್ಯವೇ? ನಾವು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ಇದ್ದೇವೆ. ನಾವು ಈಗ 3 ಮಕ್ಕಳನ್ನು ಹೊಂದಿದ್ದೇವೆ ಮತ್ತು ಒಟ್ಟಿಗೆ ವಾಸಿಸುತ್ತಿದ್ದೇವೆ' ಎಂದು ಪವಿತ್ರಾ ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮಹೇಶ್ ಬಾಬು ನಮ್ಮ ಸಂಬಂಧ ಒಪ್ಪಿಕೊಂಡಿದ್ದಾರೆ, ಅವರಿಗೆ ಪವಿತ್ರಾ ಲೋಕೇಶ್ ಕೈ ರುಚಿ ತುಂಬಾ ಇಷ್ಟ: ನರೇಶ್
ಈಗಾಗಲೇ ಪವಿತ್ರಾ ಲೋಕೇಶ್ ಅವರಿಗೆ ಇಬ್ಬರೂ ಮಕ್ಕಳಿದ್ದಾರೆ. ನರೇಶ್ ಅವರಿಗೆ ಒಂದು ಮಗು ಇದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ. ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಹೇಳುತ್ತಿದ್ದ ಈ ಜೋಡಿ ಇದೀಗ ಮದುವೆಯಾಗಿದ್ದೇವೆ ಎನ್ನುತ್ತಿದ್ದಾರೆ. ಅಲ್ಲದೆ ಮಹೇಶ್ ಬಾಬು ಅವರ ಕುಟುಂಬ ಕೂಡ ಇಬ್ಬರ ಸಂಬಂಧ ಒಪ್ಪಿಕೊಂಡಿದೆ ಎಂದು ನರೇಶ್ ಹೇಳಿದ್ದಾರೆ. ಅಷ್ಟೆಯಲ್ಲದೇ ಪವಿತ್ರಾ ಲೋಕೇಶ್ ಮಾಡುವ ಅಡುಗೆ ತುಂಬಾ ಇಷ್ಟ ಪಡುತ್ತಾರೆ ಎಂದು ನರೇಶ್ ಇತ್ತೀಚೆಗಷ್ಟೆ ಬಹಿರಂಗ ಪಡಿಸಿದ್ದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್!
ಮಳ್ಳಿ ಪೆಳ್ಳಿ ಸಿನಿಮಾದಲ್ಲಿ ತಮ್ಮದೆ ಜೀವನದ ಕಥೆ ಹೇಳಿದ್ದಾರೆ. ಇಲ್ಲಿ ಪವಿತ್ರಾ ಲೋಕೇಶ್ ಅವರ ಮಾಜಿ ಪತಿ ಸುಚೇಂದ್ರ ಪ್ರಸಾದ್ ಮತ್ತು ನರೇಶ್ ಮಾಜಿ ಪತ್ನಿ ರಮ್ಯಾ ಅವರನ್ನು ವಿಲನ್ ರೀತಿ ತೋರಿಸಲಾಗಿದೆ. ಈ ಸಿನಿಮಾಗೆ ಎಂ ಎಸ್ ರಾಜು ಆಕ್ಷನ್ ಕಟ್ ಹೇಳಿದ್ದಾರೆ.