ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್!
ಸಾಕಷ್ಟುವಿವಾದ ಸೃಷ್ಟಿಸಿದ್ದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಜೋಡಿ ಇದೀಗ ಸಿಹಿ ಸುದ್ದಿಯೊಂದು ನೀಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಪವಿತ್ರಾ ಲೋಕೇಶ್ ಪ್ರವೇಶ ಪರೀಕ್ಷೆ ಬರೆದಿದ್ದಾರೆ.
ಹಂಪಿ(ಮೇ.30): ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಬಾಬು ವಿವಾದಿತ ಜೋಡಿಯಾಗಿ ಗುರುತಿಸಿಕೊಂಡಿದ್ದಾರೆ. ವೈಯುಕ್ತಿಕ ಜೀವನ, ಮತ್ತೆ ಮದುವೆ ಚಿತ್ರ ಸೇರಿದಂತೆ ಹಲವು ಕಾರಣಗಳಿಂದ ಈ ಜೋಡಿ ಸದಾ ಸುದ್ದಿಯಲ್ಲಿದೆ. ಇದೀಗ ಪವಿತ್ರಾ ಲೋಕೇಶ್ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ವಿಶೇಷ ಅಂದರೆ ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಪವಿತ್ರಾ ಲೋಕೇಶ್ ಅರ್ಜಿ ಸಲ್ಲಿಸಿದ್ದಾರೆ.
ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆಯಲು ಹಂಪಿಯ ವಿದ್ಯಾನಗರಕ್ಕೆ ಆಗಮಿಸಿದ ಪವಿತ್ರಾ ಲೋಕೇಶ್‌ಗೆ ನರೇಶ್ ಬಾಬು ಸಾಥ್ ನೀಡಿದ್ದರು. ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಬಳಿಕ ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಸಂಶೋಧನೆಗೆ ಪವಿತ್ರ ಲೋಕೇಶ್ ಮುಂದಾಗಿದ್ದಾರೆ. ಸದ್ಯ ಮತ್ತೆ ಮದುವೆ ಚಿತ್ರದಲ್ಲಿ ನರೇಶ್ ಬಾಬು ಜೊತೆಯಾಗಿ ನಟಿಸಿರುವ ಪವಿತ್ರಾ ಲೋಕೇಶ್ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಲಿದ್ದಾರಾ? ಇದರ ನಡುವೆ ನಟನೆಯಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಅನ್ನೋ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಹಲವು ಕಾರಣಗಳಿಂದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಬಾಬು ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟ್ರೋಲ್ ಆಗಿದ್ದಾರೆ. ಇದರಿಂದ ಆಕ್ರೋಶಗೊಂಡಿದ್ದ ಪವಿತ್ರಾ ಲೋಕೇಶ್ ಇದೀಗ ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಇತ್ತೀಚಿಗೆ ಟಿಕೆ, ಟಿಪ್ಪಣಿ ಕುರಿತು ಖಡಕ್ ಸಂದೇಶ ರವಾನಿಸಿದ್ದರು.
‘ನನ್ನ ತಂದೆ ಕನ್ನಡ ಚಿತ್ರರಂಗದಲ್ಲಿದ್ದವರು. ಅಣ್ಣಾವ್ರು ಅಪ್ಪನಿಗೆ ಕೊಟ್ಟಬೆಳ್ಳಿ ಲೋಟದಲ್ಲಿ ಹಾಲು ಕುಡಿದು ಬೆಳೆದವಳು ನಾನು. ತಂದೆ ತೀರಿಕೊಂಡ ಮೇಲೆ ನಾನು ನಟಿಸಲು ಶುರು ಮಾಡಿದೆ. ತಾಯಿ ಶಿಕ್ಷಕಿ. ಸುಶಿಕ್ಷಿತ ಕುಟುಂಬ ನಮ್ಮದು. ಅನೇಕ ಪಾತ್ರಗಳನ್ನು ಮಾಡುತ್ತಾ ಬಿಡುವಿಲ್ಲದೆ ದುಡಿದು ಹಣ ಸಂಪಾದನೆ ಮಾಡಿದ್ದೇನೆಯೇ ಹೊರತು ಇನ್ನೊಬ್ಬರನ್ನು ದೋಚಿಲ್ಲ. ಆ ಬುದ್ಧಿ ನನಗಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿದ್ದರು.
ಇತ್ತೀಚಿನ ಬೆಳವಣಿಗೆಗಳಲ್ಲಿ ಕೆಲವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಒಂದಿಷ್ಟುಮಂದಿ ನನ್ನ ಹೆಗಲ ಮೇಲೆ ಗನ್ ಇಟ್ಟು ನರೇಶ್ ಅವರನ್ನ ಶೂಟ್ ಮಾಡೋ ಪ್ರಯತ್ನ ಮಾಡಿದರು. ಇದು ದ್ಜುದೃಷ್ಟ. ನನ್ನನ್ನು ನಟಿಯಾಗಿ ನೋಡಿದರೆ ಸಾಕು, ಕದ್ದು ನನ್ನ ಮನೆಯೊಳಗೆ ಇಣುಕುವ ಪ್ರಯತ್ನ ಬೇಡ’ ಎಂದರು.
‘ನಮ್ಮಿಬ್ಬರ ಬಗೆಗೆ ಎದ್ದಿರುವ ವಿವಾದದ ಬಗ್ಗೆ ಸ್ಪಷ್ಟನೆ ಕೊಡಬೇಕಿದ್ದರೆ ಒಂದು ಯೂಟ್ಯೂಬ್ ವೀಡಿಯೋ ಮಾಡಿದ್ದರೆ ಸಾಕಿತ್ತು. ಕೋಟಿಗಟ್ಟಲೆ ಸುರಿದು ಸಿನಿಮಾ ಮಾಡೋ ರಿಸ್‌್ಕ ತೆಗೆದುಕೊಳ್ಳಬೇಕಿರಲಿಲ್ಲ. ಮತ್ತೆ ಮದುವೆ ಸಿನಿಮಾಕ್ಕೂ ನಮ್ಮ ವೈಯುಕ್ತಿಕ ಬದುಕಿಗೂ ಸಂಬಂಧ ಇಲ್ಲ. ವೈಯುಕ್ತಿಕ ವಿಚಾರಕ್ಕೆ ಬರೋದಾದ್ರೆ ಜೊತೆಯಾಗಿ ಬಾಳ್ವೆ ಮಾಡಲು ಸಂಪ್ರದಾಯಬದ್ಧ ಮದುವೆಯೇ ಆಗಬೇಕಿಲ್ಲ. ನಾವಿಬ್ಬರೂ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದೇವೆ’ ಎಂದರು ನರೇಶ್. ‘ಮತ್ತೆ ಮದುವೆ ಸಿನಿಮಾ ಆಧುನಿಕ ಕಾಲಘಟ್ಟದ ವೈವಾಹಿಕ ಸಂಬಂಧಗಳ ಸಂಕೀರ್ಣತೆಯ ಬಗ್ಗೆ ಇದೆ’ ಎಂದೂ ಅವರು ಈ ವೇಳೆ ಹೇಳಿದರು.