Asianet Suvarna News Asianet Suvarna News

ಮಹೇಶ್​ ಬಾಬುಗಾಗಿ ನಟನೆ ಬಿಟ್ಟೆ : ಮಾಜಿ ಮಿಸ್​ ಇಂಡಿಯಾ, ನಟಿ ನಮ್ರತಾ ಶಿರೋಡ್ಕರ್ ​ಮನದಾಳದ ಮಾತು...

ಚಿತ್ರರಂಗದಲ್ಲಿ ಉತ್ತುಂಗ ಸ್ಥಾನದಲ್ಲಿ ಇರುವಾಗಲೇ ಏಕಾಏಕಿ ನಟನಾವೃತ್ತಿಯನ್ನು ನಟಿ ಅಮೃತಾ ಶಿರೋಡ್ಕರ್​ ತ್ಯಜಿಸಿದ್ದೇಕೆ? ನಟ ಮಹೇಶ್​ಬಾಬು ಪತ್ನಿ ಹೇಳಿದ್ದೇನು?
 

Namrata Shirodkar birthday Mahesh Babu put this condition in front of actress before marrying
Author
First Published Jan 21, 2023, 7:45 PM IST

1977 ರ ಚಿತ್ರ 'ಶಿರಡಿ ಕೆ ಸಾಯಿ ಬಾಬಾ' ನಲ್ಲಿ ಬಾಲಕಲಾವಿದೆಯಾಗಿ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ಬ್ಯೂಟಿಫುಲ್​ ಲೇಡಿ ಎಂದರೆ ಆಕೆ ನಮ್ರತಾ ಶಿರೋಡ್ಕರ್ (Namratha Shirodkar)​. 1998 ರಲ್ಲಿ 'ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ' ಚಿತ್ರದ ಮೂಲಕ ಹೀರೋಯಿನ್​ ಆಗಿ ಪ್ರವೇಶ ಮಾಡಿ ಎಲ್ಲರ ಮನಸ್ಸನ್ನು ಸೂರೆಗೊಂಡಿದ್ದ ನಮ್ರತಾ ಮಾಜಿ ಮಿಸ್​ ಇಂಡಿಯಾ (Miss India) ಕೂಡ. ನಾಳೆ (ಜ.22) ಇವರ ಹುಟ್ಟುಹಬ್ಬ. ನಟನೆ, ಚಿತ್ರರಂಗವೇ ಸರ್ವಸ್ವ ಎಂದುಕೊಂಡಿದ್ದ ನಟಿ ನಮ್ರತಾ ಚಿತ್ರರಂಗದಿಂದ ದೂರವಾದದ್ದೇಕೆ? ಆಕೆಯ ಬಾಳಿನಲ್ಲಿ ದಕ್ಷಿಣದ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu)ಜೊತೆಗಿನ ಮದುವೆ ಚಿತ್ರರಂಗಕ್ಕೆ ಹೇಗೆ ಫುಲ್​ಸ್ಟಾಪ್​ ಇಟ್ಟಿತು ಎಂಬ ಬಗ್ಗೆ ಮಾತನಾಡಿದ್ದಾರೆ. 

 1972 ರ ಜನವರಿ 22ರಂದು  ಮರಾಠಿ ಕುಟುಂಬದಲ್ಲಿ ಜನಿಸಿದ ನಮ್ರತಾಗೆ  ಚಿಕ್ಕಂದಿನಿಂದಲೂ ನಟನೆ ಮತ್ತು ಮಾಡೆಲಿಂಗ್‌ನಲ್ಲಿ (Modelling) ಆಸಕ್ತಿ. 1993 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು, ತಮ್ಮ ಕನಸನ್ನು ಸಾಕಾರಗೊಳಿಸಿದರು. ಮಿಸ್​ ಯೂನಿವರ್ಸ್​ ಆಗುವ ಕನಸು ಸ್ವಲ್ಪದರಲ್ಲಿ ತಪ್ಪಿತ್ತು., ನಂತರ ನಮ್ರತಾ 1998 ರಲ್ಲಿ 'ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ  ಪ್ರವೇಶಿಸಿದರು. ನಂತರ ಅವರು 'ಪುಕಾರ್', 'ವಾಸ್ತವ್' ಮತ್ತು 'ಅಸ್ತಿತ್ವ'ದಂತಹ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದರು. ಬಾಲಿವುಡ್​ನಲ್ಲಿ (Bollywood)ಉತ್ತುಂಗದಲ್ಲಿ ಇರುವಾಗಲೇ ನಮ್ರತಾ ದಿಢೀರ್​ ಆಗಿ ನಟನಾ ವೃತ್ತಿಯನ್ನು ಶಾಶ್ವತವಾಗಿ ತ್ಯಜಿಸುವುದಾಗಿ ಘೋಷಿಸಿದರು. ಅದು 2005ರ ಸಮಯ. ಅವರು ಈ ರೀತಿ ಘೋಷಿಸಿದಾಗ ಬಾಲಿವುಡ್​ ದಿಗ್ಭ್ರಮೆಗೊಂಡಿತ್ತು. ಬಾಲ್ಯದ ಕನಸು ನನಸಾಗುವುದು ಅಷ್ಟು ಸುಲಭವಲ್ಲ. ತಮ್ಮ ಕನಸಿನಂತೆಯೇ ಚಿತ್ರರಂಗವನ್ನು ಆಯ್ಕೆ  ಮಾಡಿಕೊಂಡು ಉತ್ತಮವಾದ ಹೆಸರು ಪಡೆಯುತ್ತಿದ್ದಾಗಲೇ ಏಕೆ ಈ ನಿರ್ಧಾರ ಎಂದು ತಲೆಕೆಡಿಸಿಕೊಂಡರು ಎಲ್ಲರೂ.

ಸುಶಾತ್​ ಸಿಂಗ್​ಗೆ ಸಾವಿನ ಸುಳಿವು ಸಿಕ್ಕಿತ್ತಾ? ಸಂದರ್ಶನದಲ್ಲಿ ಅಂದು ಹೇಳಿದ್ದೇನು?

ಆದರೆ ಆದದ್ದೇನೆಂದರೆ, ಅದಾಗಲೇ ಇವರು, ದಕ್ಷಿಣದ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಪ್ರೀತಿಗೆ (love) ಬಿದ್ದಿದ್ದರು.  ಅವರು ಜೊತೆ ಮದುವೆಯಾಗಲು ತಮ್ಮ ಯಶಸ್ವಿ ನಟನಾ ವೃತ್ತಿಜೀವನವನ್ನು ಕೊನೆಗೊಳಿಸಿದರು.  ನಮ್ರತಾ ಅವರು ತೆಲಗು  ಚಿತ್ರದ ಸೆಟ್‌ಗಳಲ್ಲಿ ಮಹೇಶ್ ಬಾಬು ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಸ್ವಲ್ಪ ಸಮಯದ ಡೇಟಿಂಗ್ ನಂತರ, ನಮ್ರತಾ ಮತ್ತು ಮಹೇಶ್ ಬಾಬು 10 ಫೆಬ್ರವರಿ 2005 ರಂದು ವಿವಾಹವಾದರು. ಆದರೆ, ಮದುವೆಯಾಗುವುದಾದರೆ ಮಹೇಶ್​ ಒಂದು ಷರತ್ತು ಹಾಕಿದ್ದರು. ಅದೇನೆಂದರೆ  ನಟನಾ ವೃತ್ತಿಯನ್ನು ತ್ಯಜಿಸಬೇಕು ಎಂದು! ಕೆಲಸ ಮಾಡುವ ಹುಡುಗಿ ತಮಗೆ ಬೇಡ ಎಂದುಬಿಟ್ಟರು. ಪ್ರೇಮಕ್ಕೆ ಸಿಲುಕಿ, ಮನಸ್ಸನ್ನು ಒಪ್ಪಿಸಿದ್ದ ನಮೃತಾ ಅನಿವಾರ್ಯವಾಗಿ ತಮ್ಮ ಕನಸಿನ ಕ್ಷೇತ್ರವನ್ನು ಬಿಡುವ ಸ್ಥಿತಿ ಉಂಟಾಯಿತು. ಈ ಬಗ್ಗೆ ಖುದ್ದು ನಮ್ರತಾ ಹುಟ್ಟುಹಬ್ಬದ  ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.  ಸಂದರ್ಶನವೊಂದರಲ್ಲಿ (Interview)ಈ ಮಾಹಿತಿಯನ್ನು ನೀಡಿದ್ದಾರೆ.

ಈ ಬಗ್ಗೆ ಇನ್ನಷ್ಟು ವಿವರಣೆ ನೀಡಿರುವ ನಟಿ, 2000ರಲ್ಲಿ ರಿಲೀಸ್ ಆಗಿದ್ದ 'ವಂ‍ಶಿ' ಚಿತ್ರದಲ್ಲಿ ಮಹೇಶ್‌ ಬಾಬು ಮತ್ತು ನಾನು ಒಟ್ಟಿಗೆ ನಟಿಸಿದ್ದೆವು. ಇಬ್ಬರು ಜೊತೆಯಾಗಿ ಕೆಲಸ ಮಾಡಿದ್ದು ಇದೊಂದೇ  ಸಿನಿಮಾದಲ್ಲಿ. ಆದರೆ ಲವ್​ ಆ್ಯಟ್​ ಫಸ್ಟ್​ ಸೈಟ್​ ಎನ್ನುವಂತೆ  ಮೊದಲ ಸಿನಿಮಾವೇ ಇಬ್ಬರ ನಡುವಿನ ಸ್ನೇಹ, ಪ್ರೀತಿ ಚಿಗುರಿತು. ಮದುವೆಯಾಗುವ ನಿರ್ಧಾರ ಮಾಡಿದೆವು. ಅದರಂತೆ  2005ರ ಫೆಬ್ರವರಿ 10ರಂದು ಅದ್ದೂರಿಯಾಗಿ  ಮದುವೆ ನಡೆಯಿತು' ಎಂದಿದ್ದಾರೆ. 'ಕೆಲಸ ಮಾಡದ ಹೆಂಡತಿ ಬೇಕು ಎಂಬ ವಿಷಯದಲ್ಲಿ ಮೊದಲಿನಿಂದಲೂ ಮಹೇಶ್​ ಸ್ಪಷ್ಟವಾಗಿದ್ದರು, ನಾನು ಆಫೀಸ್​ನಲ್ಲಿ ಕೆಲಸ ಮಾಡುತ್ತಿದ್ದರೆ, ಅವನು ಆ ಕೆಲಸವನ್ನೂ ಬಿಡುವಂತೆ ಹೇಳುತ್ತಿದ್ದನು. ಅದರಂತೆ ನಾನು ಕೇಳಬೇಕಾಯಿತು. ನಾನು ಮದುವೆಗೂ ಮೊದಲು ಅಪಾರ್ಟ್​ಮೆಂಟ್​ನಲ್ಲಿ (Apartment) ವಾಸವಾಗಿದ್ದೆ.  ಮದುವೆಯ ನಂತರ ಈ ದೊಡ್ಡ ಬಂಗಲೆಯಲ್ಲಿ ಹೇಗೆ ಹೊಂದಿಕೊಳ್ಳುವುದು ಎಂದು ಭಯಪಟ್ಟಿದ್ದೆ. ಇದೇ ಕಾರಣಕ್ಕೆ ನಾನು ಮಹೇಶ್​ಗೆ ನಾನು ಕೆಲಸ ಬಿಡುತ್ತೇನೆ, ಆದರೆ ಮದುವೆಯಾದ ಬಳಿಕ   ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತೇನೆ ಎಂದು  ಕಂಡೀಷನ್‌ (Condition) ಹಾಕಿದ್ದೆ. ಇಬ್ಬರೂ ಕಂಡೀಷನ್​ ಒಪ್ಪಿಕೊಂಡೆವು. ನಾನು ಕೆಲಸ ಬಿಟ್ಟೆ, ನನ್ನ ಇಷ್ಟದಂತೆ ಅಪಾರ್ಟ್​ಮೆಂಟ್​ನಲ್ಲಿ ವಾಸವಾದೆವು' ಎಂದಿದ್ದಾರೆ ನಮ್ರತಾ. 

ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ

ವಯಸ್ಸಿನಲ್ಲಿ ಮಹೇಶ್‌ ಬಾಬುಗಿಂತ ನಮ್ರತಾ 3 ವರ್ಷ ದೊಡ್ಡವರು. ಈ ಜೋಡಿಗೆ 2006ರಲ್ಲಿ ಗೌತಮ್ ಎಂಬ ಮಗ ಹುಟ್ಟಿದ. 2012ರಲ್ಲಿ ಮಗಳು ಸಿತಾರಾ ಜನಿಸಿದಳು. "ಮಹೇಶ್ ಅವರನ್ನು ಮದುವೆಯಾಗಿರೋದು ನನ್ನ ಜೀವನದ ಅತಿ ಸಂತೋಷದ ದಿನ. ಮಹೇಶ್ ಜೊತೆ ಮದುವೆಯಾದಮೇಲೆ ನನ್ನ ಬದುಕು ಬದಲಾಯ್ತು. ತಾಯ್ತನ ಕೂಡ ಅದ್ಭುತವಾದ ಅನುಭವ. ಇದರ ಬದಲು ಇನ್ಯಾವುದೂ ಖುಷಿ ಕೊಡದು. ನನ್ನ ಮಗ ಗೌತಮ್ ತುಂಬ ನಾಚಿಕೆ ಸ್ವಭಾವದವನು. ಸಿತಾರಾ ಸಿಕ್ಕಾಪಟ್ಟೆ ಆಕ್ಟಿವ್ (Active), ಎಲ್ಲ ಕಡೆಯೂ ಇರುತ್ತಾಳೆ. ಎಲ್ಲ ತಾಯಂದಿರು ಹೇಳುವಂತೆ ನನ್ನ ಮಕ್ಕಳಿಬ್ಬರು ತುಂಬ ಚೆನ್ನಾಗಿದ್ದಾರೆ" ಎಂದು ನಮ್ರತಾ ಹೇಳಿದ್ದಾರೆ.
 

Follow Us:
Download App:
  • android
  • ios