Asianet Suvarna News Asianet Suvarna News

ಬಿಗ್ ಬಾಸ್ ತೆಲುಗು: ಅತೀ ಹೆಚ್ಚು ಸಂಭಾವನೆ ಪಡೆದ ನಟ ನಾಗಾರ್ಜುನ್

ಕಿರುತೆರೆಯ ಅತ್ಯಂತ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ನಡೆಸಿಕೊಡಲು ನಾಗಾರ್ಜುನ್ ಭರ್ಜರಿ ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನಲಾಗಿದೆ. 

Nagarjuna Paid huge amount for Bigg Boss Telugu season 6 sgk
Author
First Published Aug 29, 2022, 11:40 AM IST

ಬಿಗ್ ಬಾಸ್ ತೆಲುಗು ಸೀಸನ್ 6 ಪ್ರಾರಂಭಕ್ಕೆ ಕೆಲವೆ ದಿನಗಳು ಬಾಕಿ ಇದೆ. ಈಗಾಗಲೇ ತೆಲುಗು ಬಿಗ್ ಬಾಸ್ 5 ಸೀಸನ್ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.  ಇದೀಗ 6ನೇ ಸೀಸನ್‌ಗೆ ಸಜ್ಜಾಗಿದೆ. ಅಂದಹಾಗೆ ಬಿಗ್ ಬಾಸ್ ಮುಂದಿನ ತಿಂಗಳೇ ಪ್ರಾರಂಭವಾಗಲಿದೆ. ಸೆಪ್ಟಂಬರ್ 4ರಿಂದ ಬಿಗ್ ಬಾಸ್ ತೆಲುಗು ಪ್ರಾರಂಭವಾಗುತ್ತಿದೆ. ಅಂದಹಾಗೆ ಈ ಬಾರಿಯೂ ತೆಲುಗು ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಅವರೇ ನಡೆಸಿಕೊಡುತ್ತಿದ್ದಾರೆ. ಅಂದಹಾಗೆ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಮೊದಲು ಉದ್ಘಾಟನೆ ಮಾಡಿದ್ದು ಜೂ.ಎನ್ ಟಿ ಆರ್. ಎರಡನೇ ಸೀಸನ್ ಅನ್ನು ನಟ ನಾನಿ ಹೋಸ್ಟ್ ಮಾಡಿದ್ದರು. ಬಳಿಕ ಮೂರನೇ ಸೀಸನ್‌ಗೆ  ನಾಗಾರ್ಜುನ್ ಎಂಟ್ರಿ ಕೊಟ್ಟಿದ್ದರು. ಮೂರನೇ ಸೀಸನ್ ನಿಂದ ನಾಗಾರ್ಜುನ್ ಅವರೇ ಶೋ ನಡೆಸಿಕೊಟ್ಟಿದ್ದಾರೆ. ಒಂದು ಎಪಿಸೋಡ್ ಬಿಟ್ಟರೆ ನಾಗಾರ್ಜುನ್ ಅವರೇ ಸಂಪೂರ್ಣ ಶೋ ನಡೆಸಿಕೊಡುತ್ತಿದ್ದಾರೆ. ಒಂದು ದಿನ ಮಾತ್ರ ನಾಗಾರ್ಜುನ್ ಬದಲು ಮಾಜಿ ಸೊಸೆ ಸಮಂತಾ ಬಿಗ್ ಬಾಸ್ ಹೋಸ್ಟ್ ಮಾಡಿದ್ದರು. ಯಶಸ್ವಿಯಾಗಿ ಬಿಗ್ ಬಾಸ್ ನಡೆಸಿಕೊಂಡು ಬಂದಿರುವ ನಾಗಾರ್ಜುನ್ ಅವರು ಇದೀಗ 6ನೇ ಸೀನನ್‌ಗೆ ಸಜ್ಜಾಗಿದ್ದಾರೆ.   

ಅಂದಹಾಗೆ ಸದ್ಯ ಬಿಗ್ ಬಾಸ್ ಸೀಸನ್ 6 ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಕಿರುತೆರೆಯ ಅತ್ಯಂತ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ನಡೆಸಿಕೊಡಲು ನಾಗಾರ್ಜುನ್ ಭರ್ಜರಿ ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನಲಾಗಿದೆ. ಸೌತ್ ಕಿರುತೆರೆಯ ಬಿಗ್ ಬಾಸ್ ಶೋಗಳಲ್ಲಿಯೇ ನಾಗಾರ್ಜುನ್ ಪಡೆದ ಸಂಭಾವನೆ ಅತೀ ಹೆಚ್ಚು ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ನಾಗಾರ್ಜುನ್ ಅವರಿಗೆ 15 ಕೋಟ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ನಾಗಾರ್ಜುನ್ ಅವರು ಇದರ ಅರ್ಧದಷ್ಟು ಸಂಭಾವನೆ ಪಡೆದಿದ್ದರಂತೆ. ಈ ಬಾರಿ ದುಪ್ಪಟ್ಟು ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ. 

Father's day 2022 - ತಂದೆ ಜೊತೆ ಉತ್ತಮ ಬಾಂಡಿಂಗ್‌ ಹೊಂದಿರುವ ಸೌತ್‌ ಸೂಪರ್‌ ಸ್ಟಾರ್‌ಗಳಿವರು

ನಾಗಾರ್ಜುನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ. ಸಿಕ್ಕಾಪಟ್ಟೆ ಫೇಮಸ್ ಆಗಿರುವ ತೆಲುಗು ಬಿಗ್ ಬಾಸ್ ಈ ಬಾರಿ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯತ್ತಿದ್ದಾರೆ. ಈ ಬಾರಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

ಮಗನ ಡಿವೋರ್ಸ್‌ ಬಗ್ಗೆ ನಾನು ಏನೂ ಹೇಳಿಲ್ಲ, ಸುದ್ದಿ ಸುಳ್ಳು: Nagarjuna

ದಕ್ಷಿಣ ಭಾರತದಲ್ಲಿ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಸುದೀಪ್ ಅವರು ನಡೆಸಿಕೊಡುತ್ತಿದ್ದಾರೆ. ಮೊದಲ ಸೀಸನ್ ನಿಂದನೂ ಸುದೀಪ್ ಅವರೇ ನಡೆಸಿಕೊಡುತ್ತಿದ್ದಾರೆ. ಅತ್ಯಂತ ಯಶಸ್ವಿ ನಿರೂಪಕರಾಗಿದ್ದಾರೆ. ಇನ್ನು ಮಲಯಾಳಂನಲ್ಲಿ ಮೋಹನ್ ಲಾಲ್ ನಡೆಸಿಕೊಡುತ್ತಿದ್ದಾರೆ. ತಮಿಳಿನಲ್ಲಿ ಕಮಲ್ ಹಾಸನ್ ಹೋಸ್ಟ್ ಮಾಡುತ್ತಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಸಲ್ಮಾನ್ ಖಾನ್ ಈ ಬಾರಿ ಬರೋಬ್ಬರಿ 350 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.  ಬಾಲಿವುಡ್‌ಗೆ ಹೋಲಿಸಿದರೆ ದಕ್ಷಿಣ ಭಾರತದ ಸ್ಟಾರ್ಸ್ ಪಡೆಯುವ ಸಂಭಾವನೆ ತೀರ ಕಡಿಮೆ. 

 

Follow Us:
Download App:
  • android
  • ios