Father's day 2022 - ತಂದೆ ಜೊತೆ ಉತ್ತಮ ಬಾಂಡಿಂಗ್ ಹೊಂದಿರುವ ಸೌತ್ ಸೂಪರ್ ಸ್ಟಾರ್‌ಗಳಿವರು
ತಂದೆಯಂದಿರಿಗೆ ಗೌರವಾರ್ಥವಾಗಿ ಜೂನ್ ತಿಂಗಳ ಮೂರನೇ ಭಾನುವಾರದಂದು ವಿಶ್ವದಾದ್ಯಂತ ತಂದೆಯ ದಿನವನ್ನು (Father's day 2022) ಆಚರಿಸಲಾಗುತ್ತದೆ. ಅಂದಹಾಗೆ, ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅಪ್ಪ-ಮಗನ ಜೋಡಿಗಳು ಸಾಕಷ್ಟು ಇವೆ. ಅವರು ತಮ್ಮ ನಡುವೆ ನಿಕಟ ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ. ಅಪ್ಪಂದಿರ ದಿನದಂದು ದಕ್ಷಿಣ ಸನಿಮಾರಂಗದ ತಂದೆ ಮತ್ತು ಮಗನ ಜೋಡಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ದಕ್ಷಿಣ ಭಾರತದ ಸೂಪರ್ ಸ್ಟಾರ್ ನಾಗಾರ್ಜುನ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು. ನಾಗಾರ್ಜುನ ಎರಡು ಮದುವೆ ಮಾಡಿಕೊಂಡಿದ್ದಾರೆ. ಅವರ ಮೊದಲ ಮದುವೆ ವೆಂಕಟೇಶ್ ದಗ್ಗುಬಾಟಿ ಅವರ ಸಹೋದರಿ ಲಕ್ಷ್ಮಿ ದಗ್ಗುಬಾಟಿ ಆಗಿದ್ದು ಅವರಿಗೆ ಒಬ್ಬ ಮಗನಿದ್ದಾನೆ. ಅವರೇ ನಾಗ ಚೈತನ್ಯ. ಇದಲ್ಲದೆ, ನಾಗಾರ್ಜುನ ಅವರು ನಟಿ ಅಮಲಾ ಅಕ್ಕಿನೇನಿ ಅವರನ್ನು ವಿವಾಹವಾದರು ಮತ್ತು ಆ ಮದುವೆಯಿಂದ ಅವರಿಗೆ ಅಖಿಲ್ ಎಂಬ ಮಗನಿದ್ದಾನೆ. ನಾಗಾರ್ಜುನ ಪುತ್ರರಿಬ್ಬರೂ ಅಪ್ಪನಂತೆಯೇ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
ಸೌತ್‌ನ ಸೂಪರ್‌ಸ್ಟಾರ್ ಚಿರಂಜೀವಿ ಅವರ ಮಗನ ಹೆಸರು ರಾಮಚರಣ್ ತೇಜ. ರಾಮಚರಣ್ ತೇಜ ಅವರ ಇತ್ತೀಚಿನ ಬ್ಲಾಕ್‌ಬಸ್ಟರ್ ಚಿತ್ರ RRR ಗೆ ಹೆಸರುವಾಸಿಯಾಗಿದ್ದಾರೆ. ರಾಮ್‌ಚರಣ್ ತೇಜಾ ಬಾಲಿವುಡ್ ಚಿತ್ರಜಂಜೀರ್‌ನಲ್ಲಿಯೂ ಕೆಲಸ ಮಾಡಿದ್ದಾರೆ. ಚಿರಂಜೀವಿ ಮತ್ತು ರಾಮಚರಣ್ ತೇಜ ಇಬ್ಬರೂ ಅನೇಕ ಸೌತ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ತಮಿಳು ಚಿತ್ರರಂಗದ ಸೂಪರ್ ಸ್ಟಾರ್.
ಮಲಯಾಳಂನ ಸೂಪರ್ ಸ್ಟಾರ್ 62 ವರ್ಷದ ಮೋಹನ್ ಲಾಲ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗನ ಹೆಸರು ಪ್ರಣವ್ ಮೋಹನ್ ಲಾಲ್, ಮಗಳ ಹೆಸರು ವಿಸ್ಮಯಾ. ಪ್ರಣವ್ ಮೋಹನ್ ಲಾಲ್ ಬಾಲನಟನಾಗಿ ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2002 ರ ಚಲನಚಿತ್ರ ಓನಮನ್‌ನಲ್ಲಿ ಮಗುವಿನ ಪಾತ್ರದಲ್ಲಿ ಕಾಣಿಸಿಕೊಂಡರು.ಇದರ ನಂತರ, 2018 ರಲ್ಲಿ, ಅವರು ಆದಿ ಚಿತ್ರದಲ್ಲಿ ಕಾಣಿಸಿಕೊಂಡರು. ಮೋಹನ್ ಲಾಲ್ ಮರ್ಕರ್ ಮತ್ತು ಹೃದಯಂ ಚಿತ್ರದಲ್ಲೂ ಪ್ರಣವ್ ಕಾಣಿಸಿಕೊಂಡಿದ್ದಾರೆ.
ಸೌತ್ ಚಿತ್ರರಂಗದಲ್ಲಿ ಜೂನಿಯರ್ ಎನ್ ಟಿಆರ್ ಸಖತ್ ಫೇಮಸ್ ನಟರಲ್ಲಿ ಒಬ್ಬರು ಇತ್ತೀಚೆಗೆ ಅವರ ಆರ್‌ಆರ್‌ಆರ್ ಚಿತ್ರ ಸದ್ದು ಮಾಡಿತ್ತು. ಜೂನಿಯರ್ ಎನ್ ಟಿಆರ್ ಖ್ಯಾತ ನಟ ನಂದಮೂರಿ ಹರಿಕೃಷ್ಣ ಅವರ ಪುತ್ರ. ನಂದಮೂರಿ ಹರಿಕೃಷ್ಣ 60ರ ದಶಕದ ಖ್ಯಾತ ನಟ. ಇದಲ್ಲದೇ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಅವರು ಆಗಸ್ಟ್ 2018 ರಲ್ಲಿ ಅಪಘಾತದಲ್ಲಿ ನಿಧನರಾದರು
ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮಮ್ಮುಟ್ಟಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳ ಹೆಸರು ಸುರುಮಿ, ಮಗ ದುಲ್ಕರ್ ಸಲ್ಮಾನ್ ದಕ್ಷಿಣದ ಸೂಪರ್ ಸ್ಟಾರ್. ಮಮ್ಮುಟ್ಟಿ ಮತ್ತು ದುಲ್ಕರ್ ಸಲ್ಮಾನ್ ಅನೇಕ ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ದುಲ್ಕರ್ ಸಲ್ಮಾನ್ ಬಾಲಿವುಡ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅವರು ದಿ ಜೋಯಾ ಫ್ಯಾಕ್ಟರ್ ಮತ್ತು ಕಾರವಾನ್ ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಜನಪ್ರಿಯ ಚಿತ್ರ ಬಾಹುಬಲಿಯಲ್ಲಿ ಕಾಟಪ್ಪನ ಪಾತ್ರವನ್ನು ನಿರ್ವಹಿಸಿದ ನಟ ಪ ಸತ್ಯರಾಜ್‌ಗೆ ಇಬ್ಬರು ಮಕ್ಕಳಿದ್ದಾರೆ. ಮಗಳ ಹೆಸರು ದಿವ್ಯಾ, ಮಗ ಸಿ.ಬಿ.ಸತ್ಯರಾಜ್. ಸತ್ಯರಾಜ್ ಅವರಂತೆ ಅವರ ಮಗ ಕೂಡ ದಕ್ಷಿಣ ಚಿತ್ರರಂಗದ ನಟ. ಅದೇ ಸಮಯದಲ್ಲಿ, ಸತ್ಯರಾಜ್ ಅವರು ಬಾಹುಬಲಿಗಿಂತ ಮೊದಲು ರೋಹಿತ್ ಶೆಟ್ಟಿ ಅವರ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದರು.