ನಾಟು ನಾಟು ಗಾಯಕರು ಖ್ಯಾತ ಪಾಪ್ ಗಾಯಕಿ ರಿಹನ್ನಾ ಅವರನ್ನು ಭೇಟಿ ಮಾಡಿದ್ದಾರೆ. ಫೋಟೋ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. 

ಆರ್ ಆರ್ ಆರ್ ಸಿನಿಮಾದ ನಾಟು ನಾಟು....ಹಾಡು ಜಾಗತಿನ ಮಟ್ಟದ ಗಮನ ಸೆಳೆಯುತ್ತಿದೆ. ಎಂ ಎಂ ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ನಾಟು ನಾಟು ಹಾಡಿಗೆ ಚಂದ್ರಬೋಷ್ ಸಾಹಿತ್ಯ ರಚಿಸಿದ್ದಾರೆ. ಈ ಹಾಡಿಗೆ ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ರೆ ಈ ಸೆನ್ಸೇಷನ್ ಹಾಡು ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಧ್ವನಿಯಲ್ಲಿ ಮೂಡಿ ಬಂದಿದೆ. ಈ ಇಬ್ಬರೂ ಗಾಯಕರ ಧ್ವನಿಯಲ್ಲಿ ಮೂಡಿ ಬಂದಿರುವ ನಾಟು ನಾಟು ಈಗ ಆಸ್ಕರ್ ಗೆದ್ದು ಬೀಗಿದೆ. ಆಸ್ಕರ್ ವಿನ್ನಿಂಗ್ ಹಾಡಿಗೆ ಕಂಠ ದಾನ ಮಾಡಿರುವ ಖುಷಿಯಲ್ಲಿದ್ದಾರೆ ಈ ಇಬ್ಬರೂ ಗಾಯಕರು. ವಿಶೇಷ ಎಂದರೆ ಆಸ್ಕರ್ ವೇದಿಕೆಯಲ್ಲೂ ಈ ಇಬ್ಬರೂ ಗಾಯಕರು ನಾಟು ನಾಟು ಹಾಡುವ ಮೂಲಕ ವಿಶ್ವದ ಗಮನ ಸೆಳೆದಿರು. 

ಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಆಸ್ಕರ್‌ನ ಸುಂದರ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಶೇಷ ಎಂದರೆ ಈ ಇಬ್ಬರೂ ಗಾಯಕರು ತಮ್ಮ ನೆಚ್ಚಿನ ಗಾಯಕಿ ಪಾಪ್ ತಾರೆ ರಿಹಾನ್ನಾ ಅವರನ್ನು ಭೇಟಿಯಾಗಿದ್ದಾರೆ. ರಿಹನ್ನಾ ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಫೋಟೋ ಶೇರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಗಾಯಕ ಕಾಲ ಭೈರವ್ ಫೋಟೋ ಹಂಚಿಕೊಂಡು ರಾಣಿ ರಿಹನ್ನಾ ಭೇಟಿಯಾದ ಕ್ಷಣ ಎಂದು ಹೇಳಿದ್ದಾರೆ. 

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಗಾಯಕ ಕಾಲ ಭೈರವ್ ಫೋಟೋ ಹಂಚಿಕೊಂಡು, ನಾವು ಭೇಟಿಯಾದಾಗ ನನಗೆ ಮಾತನಾಡಲು ಪದಗಳೇ ಬಂದಿಲ್ಲ. ನಾನು ಯಾವಾಗಲೂ ಎದುರು ನೋಡುತ್ತಿದ್ದ ಮತ್ತು ಆಳವಾಗಿ ಇಷ್ಟಟ್ಟಿದ್ದ ನೆಚ್ಚಿನ ಕಲಾವಿದೆ, ನನ್ನ ಸ್ಫೂರ್ತಿ ರಾಣಿ ರಿಹನ್ನಾ. ನಾನು ಅವರ ಸ್ಟೇ ಆಲ್ಬಮ್ ಅನ್ನು ಎಷ್ಟು ಪ್ರೀತಿಸುತ್ತೇನೆಂದು ಅವರಿಗೆ ಹೇಳಲು ಬಯಸಿದೆ. ಅದನ್ನು ನಾನು ಮಿಲಿಯನ್ ಬಾರಿ ಕೇಳಿರಬಹುದು. ಈ ನೆನಪು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ಅವರು ರಾತ್ರಿ ವೇದಿಕೆ ಮೇಲೆ ಪ್ರದರ್ಶನ ನೀಡಿದಾಗ ನಾವು ಅಕ್ಷರಶಃ ಮಂತ್ರಮುಗ್ಧರಾಗಿದ್ದೆವು' ಎಂದು ಬರೆದುಕೊಂಡಿದ್ದಾರೆ.

Scroll to load tweet…


ಮೊದಲ ಮಗು ಜನಿಸಿ ವರ್ಷದೊಳಗೆ ರಿಹಾನಾ ಮತ್ತೆ ಪ್ರೆಗ್ನೆಂಟ್; ಲೈವ್ ಶೋನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಖ್ಯಾತ ಗಾಯಕಿ

ಗಾಯಕ ರಾಹುಲ್ ಸಿಪ್ಲಿಗುಂಜ್ ಕೂಡ ರಿಹನ್ನಾ ಜೊತೆಗಿನ ಫೋಟೋ ಶೇರ್ ಮಾಡಿ, 'ಕನಸು ನನಸಾದ ಸಮಯ' ಎಂದು ಹೇಳಿದ್ದಾರೆ. ನಾನು ತುಂಬಾ ಸುಂದರ ಹೃದಯ ಹೊಂದಿರುವ ಅತ್ಯಂತ ಅದ್ಭುತ ಮಹಿಳೆಯನ್ನು ಭೇಟಿ ಮಾಡಿದೆ. ನಿಮ್ಮ ವಿನಮ್ರತೆ ನೋಡಿ ನಾನು ಇನ್ನೂ ಶಾಕ್ ನಲ್ಲಿ ಇದ್ದೀನಿ. ನೀವು ಎಷ್ಟು ಡೌನ್ ಟು ಅರ್ಥ್. ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಕ್ಕೆ ಮತ್ತು ಆಸ್ಕರ್ ಗೆದ್ದ ಬಳಿಕ ನೀವು ನಮ್ಮನ್ನು ಕರೆದು ಪ್ರಶಂಸಿಸಿದ್ದಕ್ಕಾಗಿ ತುಂಬಾ ಧನ್ಯವಾದಿಗಳು. ಇದು ನನಗೆ ಭಾವನಾತ್ಮಕ ಕ್ಷಣವಾಗಿತ್ತು' ಎಂದು ಬರೆದುಕೊಂಡಿದ್ದಾರೆ.

View post on Instagram

ಆಸ್ಕರ್‌ಗೆ ರಾಮ್ ಚರಣ್-ಉಪಾಸನಾ ರೆಡಿಯಾಗಿದ್ದು ಹೇಗೆ? ದೇವರಿಗೆ ನಮಸ್ಕರಿಸಿ ಹೊರಟ ವಿಡಿಯೋ ವೈರಲ್

ಗಾಯಕರಾದ ಕಾಲ ಭೈರವ್, ರಾಹುಲ್ ಸಿಪ್ಲಿಗುಂಜ್ ಹಾಗೂ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಖ್ಯಾತ ಗಾಯಕಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಗರ್ಭಿಣಿ ರಿಹನ್ನಾ ಬೇಬಿ ಬಂಪ್ ಪ್ರದರ್ಶಿಸುವ ಉಡುಗೆ ಧರಿಸಿದ್ದರು. ರಿಹನ್ನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ರಿಹಾನ್ನಾ ಅವರ ಲಿಫ್ಟ್ ಮಿ ಅಪ್ ಹಾಡು ಆರ್ ಆರ್ ಆರ್ ಸಿನಿಮಾ ನಾಟು ನಾಟು ಹಾಡಿನ ಜೊತೆ ಸ್ಪರ್ಧೆ ಮಾಡಿತ್ತು.