ಆಸ್ಕರ್‌ಗೆ ರಾಮ್ ಚರಣ್-ಉಪಾಸನಾ ರೆಡಿಯಾಗಿದ್ದು ಹೇಗೆ? ದೇವರಿಗೆ ನಮಸ್ಕರಿಸಿ ಹೊರಟ ವಿಡಿಯೋ ವೈರಲ್

ಆಸ್ಕರ್ ಸಮಾರಂಭಕ್ಕೂ ಮೊದಲು ರಾಮ್ ಚರಣ್ ಮತ್ತು ಉಪಾಸನಾ ದಂಪತಿ ರೆಡಿಯಾದ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ram charan and upasana kamineni preparing before oscar ceremony video viral sgk

'ಆರ್ ಆರ್ ಆರ್' ತಂಡ ಕೊನೆಗೂ ಪ್ರತಿಷ್ಠಿತ ಆಸ್ಕರ್‌ಗೆ ಮುತ್ತಿಟ್ಟಿದೆ. ಆಸ್ಕರ್ ಗೆಲ್ಲುವುದು ಆರ್ ಆರ್ ಆರ್ ತಂಡದ ದೊಡ್ಡ ಕನಸಾಗಿತ್ತು. ಅಕಾಡೆಮಿ ಅವಾರ್ಡ್ ಗೆಲ್ಲುವ ಮೂಲಕ ಈಗ ಕನಸು ನನಸು ಮಾಡಿಕೊಂಡಿದ್ದಾರೆ. ಆಸ್ಕರ್ ಅಂಗಳದಲ್ಲಿ ಇಡೀ ಆರ್ ಆರ್ ಆರ್ ತಂಡ ನಡೆದುಕೊಂಡ ರೀತಿ, ಡ್ರೆಸಿಂಗ್ ಸ್ಟೈಲ್ ಪ್ರತಿಯೊಂದು ವಿಚಾರವೂ ಅಭಿಮಾನಿಗಳ ಹೃದಯ ಗೆದ್ದಿದೆ. ಆರ್ ಆರ್ ಆರ್ ನಿರ್ದೇಶಕ ರಾಜಮೌಳಿ ಪತ್ನಿ ರಮಾ ರಾಜಮೌಳಿ, ರಾಮ್ ಚರಣ್ ಪತ್ನಿ ಉಪಾಸನಾ ಸೇರಿದಂತೆ ಎಲ್ಲರೂ ಸೀರೆಯಲ್ಲಿ ಮಿಂಚಿದ್ದು ವಿಶೇಷವಾಗಿತ್ತು. ಆಸ್ಕರ್‌ಗೂ ಮೊದಲು ರಾಮ್ ಚರಣ್ ಮತ್ತು ಉಪಾಸನಾ ದಂಪತಿ ರೆಡಿಯಾದ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವ್ಯಾನಿಟ್ ಫೇರ್‌ ವಿಡಿಯೋದಲ್ಲಿ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಆಸ್ಕರ್‌ಗೂ ಮೊದಲು ತಯಾರಾಗಿದ್ದು ಹೇಗೆ ಎಂದು ತೋರಿಸಲಾಗಿದೆ. ಇಬ್ಬರೂ ಅದ್ದೂರಿಯಾಗಿ ರೆಡಿಯಾಗಿ ದೇವರಿಗೆ ನಮಸ್ಕರಿಸಿ ಆಸ್ಕರ್ ವೇದಿಕೆ ಎಂಟ್ರಿ ಕೊಟ್ಟಿರುವುದನ್ನು ನೋಡಿ ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ರಾಮ್ ದಂಪತಿ ಉಡುಗೆ ಭಾರತವನ್ನು ಪ್ರತಿನಿಧಿಸುತ್ತಿತ್ತು. ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಇಬ್ಬರೂ ಮಿಂಚಿದರು. ರಾಮ್ ಚರಣ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರೇ ಉಪಾಸನಾ ಕ್ಲಾಸಿಕ್ ಬಿಳಿ ಬಣ್ಣದ ಸಿಲ್ಕ್ ಸೀರೆ ಧರಿಸಿದ್ದರು. 

ರಾಮ್ ಚರಣ್ ಧರಿಸಿದ್ದ ಶೂ ಕೂಡ ಆಕರ್ಷಕವಾಗಿತ್ತು. ಇಟಲಿಯ ಕಸ್ಟಮೈಸ್ ಶೂ ಧರಿಸಿದ್ದರು. ಸುಮಾರು 60 ವರ್ಷಗಳಿಂದ ಈ ಕಂಪನಿ ಶೂ ತಯಾರಿಸುತ್ತಿದೆ ಎಂದು ರಾಮ್ ಚರಣ್ ಹೇಳಿದ್ದಾರೆ. ನಿಖಿತಾ ಜೈಸಿಂಗಾನಿ ಡಿಸೈನ್ ಮಾಡಿದ ಉಡುಗೆಯಲ್ಲಿ ರಾಮ್ ದಂಪತಿ ಕಂಗೊಳಿಸಿದ್ದರು. ನಿಖಿತಾ ಜೈಸಿಂಗಾನಿ ಸುಮಾರು 2 ವರ್ಷಗಳಿಂದ ರಾಮ್ ಚರಣ್ ಅವರಿಗೆ ಡಿಸೈನ್ ಮಾಡುತ್ತಿದ್ದಾರೆ. ವಿಡಿಯೋ ಕಾಲ್ ಮೂಲಕ ರಾಮ್ ಚರಣ್ ನಿಖಿತಾ ಅವರಿಗೆ ಔಟ್‌ಫಿಟ್ ತೋರಿಸಿ ಧನ್ಯವಾದ ತಿಳಿಸಿದರು. ಬಟ್ಟೆಯ ಮೇಲೆ ಭಾರತ ಎಂದು ಬರೆದಿರುವ ಕಾಯಿನ್ ಗಳನ್ನು ಡಿಸೈನ್ ಮಾಡಲಾಗಿತ್ತು. ಔಟ್‌ಫಿಟ್ ತೋರಿಸಿ ಡಿಸೈನರ್ ನಿಖಿಲ್‌ಗೆ ಧನ್ಯವಾದ ಹೇಳಿದರು ರಾಮ್ ಚರಣ್. 

ಆಸ್ಕರ್‌ಗೂ ಮುನ್ನ ದೀಪಿಕಾ ಪಡುಕೋಣೆ ವರ್ಕೌಟ್‌; ಬದ್ಧತೆಗೆ ಭೇಷ್ ಎಂದ ಟ್ರೈನರ್‌

ರಾಮ್ ಚರಣ್ ಪತ್ನಿ ಉಪಾಸನಾ ತನ್ನ ಹೇರ್ ಸ್ಟೈಲಿಸ್ಟ್ ಹಾಗೂ ಮೇಕಪ್ ಆರ್ಟಿಸ್ಟ್ ಅವರನ್ನು ಪರಿಚಯಿಸಿದರು. ಅವರದೇ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 10 ವರ್ಷಗಳಿಂದ ಉಪಾಸನಾ ಅವರಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಉಪಾಸನಾ ಬಹಿರಂಗ ಪಡಿಸಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಅಮೆರಿಕಾ ಮನೆಯಲ್ಲಿ ರಾಮ್ ಚರಣ್ ದಂಪತಿ; ಫೋಟೋ ವೈರಲ್

ವಿಶೇಷವಾಗಿ ತಯಾರಿಸಿದ್ದ ಸಿಲ್ಕ್ ಸೀರೆಯನ್ನು ಉಪಾಸನಾ ಧರಿಸಿದ್ದರು. ಈ ಸೀರಿಯನ್ನು ತೆಲಂಗಾಣದಲ್ಲೇ ತಯಾರಿಸಲಾಗಿತ್ತು. ಅದಕ್ಕೆ ಮ್ಯಾಚ್ ಆಗುವ ದುಬಾರಿ ಜ್ಯುವೆಲರಿಯನ್ನು ಧರಿಸಿದ್ದರು. ಖ್ಯಾತ ಜ್ಯುವೆಲರಿ ಆರ್ಟಿಸ್ಟ್ ಬಿನಾ ಗೊಯಂಕಾ ಡಿಸೈನ್ ಮಾಡಿದ ಜ್ಯುವೆಲರಿ ಇದಾಗಿತ್ತು. ದೇಸಿ ಸ್ಟೈಲ್ ನಲ್ಲಿ ಮಿಂಚಿದ ರಾಮ್ ಮತ್ತು ಉಪಾಸನಾ ದಂಪತಿ ಭಾರತೀಯರು ಮಾತ್ರವಲ್ಲದೆ ಜಗತ್ತಿನ ಗಮನ ಸೆಳೆದಿದ್ದಾರೆ. ಗರ್ಭಿಣಿ ಉಪಾಸನಾ ಅವರಿಗೆ ಇದು ಡಬಲ್ ಸಂಭ್ರಮವಾಗಿದೆ. ಪತಿ ಆಸ್ಕರ್ ನಟಿಸಿದ್ದ ಸಿನಿಮಾ ಆಸ್ಕರ್ ಗೆದ್ದ ಖುಷಿ ಒಂದೆಡೆಯಾದರೆ ಮತ್ತೊಂದೆಡೆ ತಾಯಿಯಾಗುತ್ತಿರುವ ಸಂಭ್ರಮ. ಡಬಲ್ ಸಂಭ್ರಮವನ್ನು ಎಂಜಾಯ್ ಮಾಡಿದರು ಉಪಾಸನಾ.

Latest Videos
Follow Us:
Download App:
  • android
  • ios