Asianet Suvarna News Asianet Suvarna News

ಉರ್ಫಿ ಜಾವೇದ್‌ ಅರೆಸ್ಟ್; ಪೊಲೀಸ್ ಸ್ಟೇಷನ್‌ಗೆ ಹೀಗೂ ಹೋಗ್ಬೋದಾ ಎಂದ ನೆಟ್ಟಿಗರು!

ಕಾಫಿ ಕುಡಿಯಲು ಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ  ಬಿಗ್ ಬಾಸ್ ಉರ್ಫಿ. ಕಾರಣ ಕೇಳಿ ಶಾಕ್ ಅದ ನೆಟ್ಟಿಗರು....

Bigg boss Urfi Javed arrested by Lokhandwala police near coffee shop vcs
Author
First Published Nov 3, 2023, 11:24 AM IST

ಬಿಗ್ ಬಾಸ್ ಹಿಂದಿ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಉರ್ಫಿ ಜಾವೇದ್ ಇತ್ತೀಚಿನ ದಿನಗಳಲ್ಲಿ ಕಲ್ಪನೆಗೂ ಮೀರಿದ ರೀತಿಯಲ್ಲಿ ಡ್ರೆಸ್ ಡಿಸೈನ್ ಮಾಡುತ್ತಿದ್ದಾರೆ. ಅಬ್ಬಬ್ಬಾ! ಉರ್ಫಿ ಕ್ರಿಯೇಟಿವಿಟಿ ಮೆಚ್ಚ ಬೇಕು ಅನ್ನೋ ಜನರ ನಡುವೆ ನಮ್ಮ ಸಂಸ್ಕೃತಿಗೆ ಇದು ಸರಿ ಅಲ್ಲ ಅನ್ನೋರು ಹೆಚ್ಚಿದ್ದಾರೆ. ಈಗಾಗಲೆ ಸಾಕಷ್ಟ ಬಾರಿ ಉರ್ಫಿ ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತಿದ್ದಾರೆ ಆಕೆಯನ್ನು ನೋಡಿ ನಮ್ಮ ಮನೆಯ ಹೆಣ್ಣು ಮಕ್ಕಳು ಹಾಳಾಗುತ್ತಾರೆ ಅನ್ನೋ ವಾದ ಶುರುವಾಗಿದೆ ಕಂಪ್ಲೇಂಟ್ ಕೂಡ ಆಗಿತ್ತು.

ಮೊನ್ನೆ ಉರ್ಫಿ ಮತ್ತು ಸಹೋದರಿ ಹಾಗೆ ಸುಮ್ಮನೆ ಲೋಖಂಡವಾಲಾದಲ್ಲಿ ಕಾಫಿ ಕುಡಿಯಲು ಹೋದಾಗ ಮಹಿಳಾ ಪೊಲೀಸರು ಬಂದು ಅರೆಸ್ಟ್ ಮಾಡಿದ್ದಾರೆ. ಸುಮ್ಮನೆ ಕುಳಿತಿದ್ದ ಉರ್ಫಿಯನ್ನು ಕರೆದು ತಕ್ಷಣವೇ ಪೊಲೀಸ್ ಜೀಪ್ ಹತ್ತಲು ಹೇಳಿದ್ದಾರೆ. ನಾನು ಯಾಕೆ ಬರಬೇಕು ನಾನು ಏನು ಮಾಡಿದೆ ಎಂದು ಉರ್ಫಿ ಪ್ರಶ್ನೆ ಮಾಡಿದಾಗ ಯಾರು ಇಷ್ಟು ಚಿಕ್ಕ ಪಟ್ಟೆಯನ್ನು ಹಾಕಿಕೊಂಡು ಹೊರ ಬರುತ್ತಾರೆ ಎಂದು ಮಹಿಳಾ ಪೇದೆ ಉತ್ತರಿಸುತ್ತಾರೆ. ಇಬ್ಬರು ಮಹಿಳಾ ಪೇದೆಗಳು ಉರ್ಫಿ ಕೈ ಹಿಡಿದುಕೊಂಡು ಜೀಪ್‌ನಲ್ಲಿ ಲೋಖಂಡವಾಲಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಾರೆ. 

ಉರ್ಫಿಯ ಹೊಸ ಫ್ರೆಂಡ್​ ಕುಲ್ಫಿ: ರುಂಡ- ಮುಂಡ ಇಲ್ಲದ ನೂತನ ಸ್ನೇಹಿತೆಯ ಪರಿಚಯಿಸಿದ ನಟಿ!

ಈ ಎಲ್ಲಾ ಆಕ್ಷನ್ ಮತ್ತು ರಿಯಾಕ್ಷನ್ ಲೆಕ್ಕಾಚಾರ ಮಾಡಿ ನೋಡಿದರೆ ಇದು ಪ್ರ್ಯಾಂಕ್ ಅನಿಸುತ್ತದೆ. ಆದರೆ ಮಾಹಿಳಾ ಪೊಲೀಸರು ಖಡಕ್ ಅಗಿ ಬಂದಿರುವುದನ್ನು ನೋಡಿದರೆ ಮತ್ತೊಮ್ಮೆ ಉರ್ಫಿ ವಿರುದ್ಧ ಕಂಪ್ಲೇಂಟ್ ಆಗಿರಬಹುದು. ಈ ಹಿಂದೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಉರ್ಫಿ ವಿರುದ್ಧ ವಕೀಲರು ದೂರು  ನೀಡಿದ್ದರು. ಆಗ ಜನರ ಸಪೋರ್ಟ್‌ನಿಂದ ಉರ್ಫಿ ಯಾವ ತೊಂದರೆ ಇಲ್ಲದೆ ಹೊರ ಬಂದರು. ಈಗ ಏನಾಗುತ್ತದೆ ಎಂದು ಕಾದು ನೋಡಬೇಕಿದೆ....

ಸಾಮಾಜಿಕ ಜಾಲತಾಣದಲ್ಲಿ ಉರ್ಫಿ ಅಂದ್ರೆ ಯಾರಿಗೆ ಗೊತ್ತಿಲ್ಲ? ವಿಚಿತ್ರ ವಿಚಿತ್ರ ಬಟ್ಟೆ ಡಿಸೈನ್ ಮಾಡಿಕೊಂಡು ಯಾರೂ ಕಲ್ಪನೆ ಮಾಡದ ರೀತಿಯಲ್ಲಿ ಧರಿಸಿ ಸದಾ ಸುದ್ದಿಯಲ್ಲಿರುವ ಚೆಲುವೆ ಈಕೆ. ಉರ್ಫಿ ಜಾವೇದ್ ಡಿಸೈನ್ ನೋಡಿ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳು ಕೂಡ ಶಾಕ್ ಆಗಿದ್ದಾರೆ. 'ಇಂಡಸ್ಟ್ರಿಯಲ್ಲಿ ಹೆಸರು ಮಾಡಬೇಕು ಹಣ ಸಂಪಾದಿಸಬೇಕು ಮತ್ತು ಜನರ ಗಮನ ಸೆಳೆಯಬೇಕು. ಅಂದ್ಮೇಲೆ ನಾನು ನಡೆದುಕೊಳ್ಳುವ ರೀತಿಯಲ್ಲಿ ತಪ್ಪೇನು ಇಲ್ಲ' ಎಂದು ಉರ್ಫಿ ಈ ಹಿಂದೆ ಹೇಳಿದ್ದರು. ಅಲ್ಲದೆ ಬಿಕಿನಿ ಧರಿಸಿ ಪೋಸ್ ಕೊಡುವೆ ಕೆಲವು ನಟಿಯರ ಹೆಸರು ಕೂಡ ರಿವೀಲ್ ಮಾಡಿದ್ದರು. 

 

Follow Us:
Download App:
  • android
  • ios