Asianet Suvarna News Asianet Suvarna News

Covid 19 ಬಾಲಿವುಡ್‌ಗೆ ಶುರುವಾಯ್ತು ಕೊರೋನಾ ಕಾಟ, ಶಾರುಖ್ ಖಾನ್‌ಗೆ ಕೋವಿಡ್ ಪಾಸಿಟೀವ್!

  • ಕತ್ರಿನಾ ಕೈಫ್ ಬೆನ್ನಲ್ಲೇ ಬಾಲಿವುಡ್ ನಟ ಶಾರುಖ್‌ಗೆ ಕೊರೋನಾ
  • ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಹೆಚ್ಚಳ
  • ಜವಾನ್ ಸಿನಿಮಾದಲ್ಲಿ ಬ್ಯೂಸಿಯಾಗಿರುವ ನಟನಿಗೆ ಕೋವಿಡ್
Mumbai Corona Bollywood star Shah Rukh Khan reportedly tested positive for COVID 19 ckm
Author
Bengaluru, First Published Jun 5, 2022, 7:37 PM IST | Last Updated Jun 5, 2022, 7:41 PM IST

ಮುಂಬೈ(ಜೂ.05): ಮುಂಬೈನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ ಇದೀಗ ಬಾಲಿವುಡ್ ರಂಗಕ್ಕೆ ಕಾಟ ಶುರುವಾಗಿದೆ. ನಿನ್ನೆ ನಟ ಕಾರ್ತಿಕ್ ಆರ್ಯನ್‌ಗೆ ಕೋವಿಡ್ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಕತ್ರಿನಾ ಕೈಫ್‌ಗೆ ಕೋವಿಡ್ ಪಾಸಿಟೀವ್ ವರದಿ ಬಂದಿತ್ತು. ಇದೀಗ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ಗೆ ಕೊರೋನಾ ದೃಢಪಟ್ಟಿರುವುದಾಗಿ ವರದಿಗಳು ಹೇಳಿವೆ.

ಕೋವಿಡ್ ಪಾಸಿಟೀವ್ ಕುರಿತು ಶಾರುಖ್ ಖಾನ್ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ ಶಾರುಖ್ ಕೋವಿಡ್ ಪರೀಕ್ಷೆ ವರದಿ ಪಾಸಿಟೀವ್ ಬಂದಿದೆ. ಮುಂಬೈ ಮಹಾನಗರ ಪಾಲಿಕೆ ಆದೇಶದಂತೆ ಶಾರುಖ್ ಹೋಮ್ ಐಸೋಲೇಶನ್‌ಗೆ ಒಳಗಾಗಲಿದ್ದಾರೆ.

ಕರಣ್ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ 55 ಮಂದಿಗೆ ಕೊರೊನಾ ಪಾಸಿಟಿವ್? ವಿಷಯ ಮುಚ್ಚಿಟ್ಟ ಸ್ಟಾರ್ಸ್

ಶಾರುಖ್ ಖಾನ್ ಇತ್ತೀಚೆಗೆ ಜವಾನ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಶಾರುಖ್ ಚಿತ್ರದ ಫಸ್ಟ್‌ಲುಕ್ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಭಿನ್ನವಾಗಿ ಕಾಣಿಸಿಕೊಂಡ ಶಾರುಖ್ ಖಾನ್‌ಗೆ ಕೊರೋನಾ ಶಾಕ್ ನೀಡಿದೆ. 

ಮುಂಬೈನಲ್ಲಿ ಕೊರೋನಾ ಪ್ರಕರಣ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಮುಂಬೈನ ಸಾರ್ವಜನಿಕ ಪ್ರದೇಶಗಳಲ್ಲಿ ಸಿನಿಮಾ ಮಂದಿರ, ಒಳಾಂಗಣ ಪ್ರದೇಶ, ಕಚೇರಿ, ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮುಂಬೈನಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದಂತೆ ಇದೀಗ ಬಾಲಿವುಡ್ ನಟ ನಟಿಯರಿಗೂ ಕೋವಿಡ್ ಅಂಟಿಕೊಳ್ಳುತ್ತಿದೆ.

ಕೋವಿಡ್ ಪಾಸಿಟೀವ್ ಆಗಿದ್ದ ಕತ್ರಿನಾ ಕೈಫ್ ಚೇತರಿಸಿಕೊಂಡಿದ್ದಾರೆ. ಮುಂಬೈನಲ್ಲಿ ಪ್ರಕರಣ ಹೆಚ್ಚಳ ಬಾಲಿವುಡ್ ಮಂದಿಯನ್ನು ಆತಂಕ್ಕೆ ದೂಡಿದೆ. ಇತ್ತ ಜನರ ಆತಂಕವೂ ಹೆಚ್ಚಾಗಿದೆ. ಹೀಗಾಗಿ ಒಂದೊಂದೆ ನಿರ್ಬಂಧಗಳು ಜಾರಿಯಾಗುತ್ತಿದೆ. 

ದೇಶಾದ್ಯಂತ ಕೊರೋನಾ 4ನೇ ಅಲೆ ಲಕ್ಷಣಗಳು ಗೋಚರಿಸುತ್ತಿರುವ ನಡುವೆಯೇ, ಬಾಲಿವುಡ್‌ ನಟ ಶಾರುಖ್‌ ಖಾನ್‌, ಕತ್ರೀನಾ ಕೈಫ್‌ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಸಲ್ಮಾನ್, ಐಶ್ವರ್ಯಾ, ರಶ್ಮಿಕಾ, ದೇವರಕೊಂಡ ; ಇನ್ನು ಯಾರೆಲ್ಲ ಸ್ಟಾರ್ಸ್ ಹಾಜರಿದ್ದರು?

ಶಾರುಖ್‌ ಖಾನ್‌ಗೆ ಸೋಂಕು:
ಇತ್ತೀಚೆಗೆ ಶಾರುಖ್‌ ಹೊಸ ಚಿತ್ರ ಜವಾನ್‌ನಲ್ಲಿ ತಮ್ಮ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಶಾರುಖ್‌ಗೆ ಕೊರೋನಾ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ.

ಫಡ್ನವೀಸ್‌ಗೆ ವೈರಸ್‌:
ಮಹಾರಾಷ್ಟ್ರದ ವಿಪಕ್ಷ ನಾಯಕರಾಗಿರುವ ದೇವೇಂದ್ರ ಫಡ್ನವೀಸ್‌ ಕೂಡಾ ಕೋವಿಡ್‌ ಸೋಂಕಿಗೆ ತುತ್ತಾಗಿದ್ದು, ಮನೆಯಲ್ಲೇ ಐಸೋಲೇಶನ್‌ನಲ್ಲಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. ಈ ಹಿಂದೆ 2020ರಲ್ಲಿ ಕೂಡಾ ಫಡ್ನವೀಸ್‌ಗೆ ಸೋಂಕು ದೃಢಪಟ್ಟಿತ್ತು. ಆಗ ಅವರು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದರು.

ಕತ್ರೀನಾಗೆ ಕೋವಿಡ್‌:
ನಟಿ ಕತ್ರೀನಾ ಕೈಫ್‌ಗೆ ಕೂಡಾ ಕೊರೋನಾ ಸೋಂಕು ತಗುಲಿತ್ತು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ವಿಜಯ ಸೇತುಪತಿ ಅವರೊಂದಿಗೆ ಹೊಸ ಚಿತ್ರ ‘ಮೆರ್ರಿ ಕ್ರಿಸ್ಮಸ್‌’ನ ಶೂಟಿಂಗ್‌ ದಿನಾಂಕವನ್ನು ಮುಂದಕ್ಕೆ ಹಾಕಿದ್ದರು ಎನ್ನಲಾಗಿದೆ. ಈಗ ಕತ್ರೀನಾ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮುಂಬೈಯಲ್ಲಿ ಕೊರೋನಾ ಮತ್ತೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಅಲರ್ಚ್‌ ಘೋಷಿಸಿದೆ.
 

 

Latest Videos
Follow Us:
Download App:
  • android
  • ios