ಕೆಜಿಎಫ್‌ ಸ್ಟಾರ್‌ ಯಶ್ ಚೆಡ್ಡಿ ಆ್ಯಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್‌ ವರ್ಲ್ಡ್‌ ನಟನ ಈ ಪ್ರಯತ್ನಕ್ಕೆ ನೆಟ್ಟಿಗರು ಹೇಗೆ ಪ್ರತಿಕ್ರಿಯೆ ನೀಡಿದ್ರು? ನೀವೇ ನೋಡಿ.. 

ಒಂದು ಕಾಲಕ್ಕೆ ಓದನ್ನು ಪಿಯುಸಿಗೆ ನಿಲ್ಲಿಸಿ ಮನೆಗೆ ಒತ್ತಾಸೆಯಾಗಿ ನಿಂತ ನಟ ಸೀನ್‌ ಕಟ್ ಮಾಡಿದ್ರೆ ಸ್ಯಾಂಡಲ್‌ವುಡ್‌ಗೂ ಒತ್ತಾಸೆಯಾಗ್ತಾರೆ. ಕೆಜಿಎಫ್‌ ಅನ್ನೋ ಸರಣಿ ಸಿನಿಮಾಗಳ ಮೂಲಕ ಜಗತ್ತು ತನ್ನತ್ತ ತಿರುಗಿ ನೋಡೋ ಹಾಗೆ ಮಾಡ್ತಾರೆ. ಮೊದಲು ಜೀವನ ಕಟ್ಟಿಕೊಟ್ಟಲು ಮೆಜೆಸ್ಟಿಕ್‌ ಬಸ್‌ ಸ್ಟಾಂಡ್‌ನಲ್ಲಿ ಮಲಗ್ತಿದ್ದ ನಟ ಈಗ ಮಲಗೋ ಬೆಡ್‌ನ ರೇಟ್‌ ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು. ಇರಲಿ, ಇಂಥಾ ನಟ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಪೋಸ್ಟ್ ಹಾಕ್ಕೊಂಡಿದ್ದಾರೆ. ಇದಕ್ಕೆ ಥರಾವರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಬೆಂಕಿಯ ಇಮೇಜ್ ಹಾಕಿದ್ರೆ ಇನ್ನೂ ಕೆಲವರು ಟಾಂಗ್ ಕೊಟ್ಟಿದ್ದಾರೆ. 

ಅದೊಂಥರಾ ಮಜಾ. ಜನ ಒಬ್ಬ ಸ್ಟಾರ್ ನಟ ಅನ್ನೋದನ್ನೂ ನೋಡದೇ ಈ ಲೆವೆಲ್‌ಗೆ ಟಾಂಗ್ ಕೊಡ್ತಾರ ಅಂತಾನೂ ಅನಿಸುತ್ತೆ. ಯಾಕೆಂದರೆ ಯಶ್‌ ಯಾವತ್ತೂ ಡಿಗ್ನಿಫೈಡ್‌ ಆಗಿಯೇ ಕಾಣಿಸಿಕೊಂಡವರು. ಅಪ್ಪಿ ತಪ್ಪಿಯೂ ಒಮ್ಮೆಯೂ ಹಗುರಾಗಿ ನೋಡುವಂತೆ ವರ್ತನೆ ತೋರಿಸಿದವರಲ್ಲ. ಅವರ ನಟನೆ ಮಾತ್ರವಲ್ಲ, ಅವರ ಸೋಷಿಯಲ್‌ ನಡವಳಿಕೆಗೂ ನೆಟ್ಟಿಗರು ಫುಲ್ ಫಿದಾ ಆಗೋಗಿಬಿಟ್ಟಿದ್ದಾರೆ. ಆದರೆ ಅವರು ಇದೇ ಮೊದಲ ಬಾರಿ ಒಂದು ಚೆಡ್ಡಿ ಆಡ್‌ನಲ್ಲಿ ಕಾಣಿಸಿಕೊಂಡಾಗ ಮಾತ್ರ ಕೊಂಚ ಬೇರೆ ಥರದ ಒಪೀನಿಯನ್‌ ವ್ಯಕ್ತವಾಗಿದೆ. 

ಇನ್ನೊಂದೆಡೆ ಈ ಕೆಜಿಎಫ್‌ ಸ್ಟಾರ್ ತನ್ನ ಹೊಸ ‘ಟಾಕ್ಸಿಕ್’ ಸಿನಿಮಾದಲ್ಲಿ ಮುಳುಗಿಬಿಟ್ಟಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬೆಂಗಳೂರಿನ ಹೊರವಲಯದಲ್ಲಿ ಶೂಟಿಂಗ್ ನಡೆಯುತ್ತಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಇನ್ನೂ ಹಲವು ಹಂತದಲ್ಲಿ ಶೂಟಿಂಗ್ ನಡೆಯಬೇಕಿದೆ. ಈ ಸಿನಿಮಾಗಳ ಮಧ್ಯೆ ಅವರು ‘ರಾಮಾಯಣ’ ಕೆಲಸಗಳಲ್ಲಿಯೂ ತೊಡಗಿಕೊಳ್ಳಲಿದ್ದಾರೆ. 

ಕಪ್ಪು ಕಲ್ಲಿನ ಕಥೆ, ಸಿನಿಮಾ ಹೀರೋ ಸೈನಿಕ.. ವಿಕ್ಕಿ ವರುಣ್‌ ನಟನೆಯ ಥ್ರಿಲ್ಲರ್‌ ಚಿತ್ರ ಕಾಲಾಪತ್ಥರ್‌

ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡುತ್ತಿದ್ದು, ಸಾಯಿ ಪಲ್ಲವಿ ಸೀತೆ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಭಾಗದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಡಿಸೆಂಬರ್ ವೇಳೆಗೆ ಯಶ್ ಅವರು ಈ ಚಿತ್ರದ ಸೆಟ್ ಸೇರಿಕೊಳ್ಳಲಿದ್ದಾರೆ. ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಅವರು ಈಗಾಗಲೇ ಟಾಕ್ಸಿಕ್‌ ಶೂಟ್‌ನಲ್ಲಿ ಬ್ಯುಸಿ ಇರುವ ಕಾರಣ ಮತ್ತು ಇದರ ಪ್ರೊಡಕ್ಷನ್‌ ಜವಾಬ್ದಾರಿಯನ್ನೂ ವಹಿಸಿರುವ ಕಾರಣ ರಾವಣ ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲು ಟೈಮ್‌ ಎಲ್ಲಿದೆ ಎನ್ನುವ ಪ್ರಶ್ನೆ ಬಂದಿದೆ. 

ಒಂದು ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಂಡ ದೀಪಿಕಾ ದಾಸ್; ದಯವಿಟ್ಟು ನನ್ನಂತೆ ಮಾಡಬೇಡಿ ಎಂದ ನಟಿ!

ಆದರೆ ಇದರ ನಡುವೆ ಯಶ್ ತನ್ನ ಫ್ಯಾನ್ಸ್‌ಗೆ ಮತ್ತೊಂದು ಸರ್ಪೈಸ್ ಕೊಟ್ಟಿದ್ದಾರೆ. ಅದೇನು ಅಂದರೆ ಒಂದು ಆಡ್‌ನಲ್ಲಿ ಕಾಣಿಸಿಕೊಂಡಿರುವುದು. ಆದರೆ ಯಾರೂ ಊಹಿಸಿರದ ಚೆಡ್ಡಿ ಆಡ್‌ನಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಒಳ ಉಡುಪಿನ ಜಾಹೀರಾತಿನಲ್ಲಿ ಸ್ಟಾರ್‌ ಕಲಾವಿದರು ನಟಿಸೋದು ಹೊಸತೇನಲ್ಲ. ಅದರಲ್ಲೂ ಕೆಲವು ಇಂಟರ್‌ನ್ಯಾಶನಲ್‌ ಬ್ರಾಂಡ್‌ ಆದರೆ ಅದು ತಂದುಕೊಂಡು ಹಣಕ್ಕಾಗಿ ಒಪ್ಪಿಕೊಳ್ತಾರೆ. ಇತ್ತೀಚೆಗೆ ವಿಕ್ಕಿ ಕೌಶಲ್‌, ಕಿರಿಕ್‌ ಸುಂದರಿ ರಶ್ಮಿಕಾ ಇಂಥದ್ದೇ ಒಳ ಉಡುಪು ಆಡ್‌ನಲ್ಲಿ ಕಾಣಿಸಿಕೊಂಡಿದ್ದರು. ಸೋ ಇದೀಗ ಯಶ್‌ ಚೆಡ್ಡಿ ಬ್ರಾಂಡ್‌ ಜಾಹೀರಾತಿನ ಭಾಗವಾಗಿದ್ದಾರೆ. ಇದಕ್ಕೆ ಥರಾವರಿ ಕಾಮೆಂಟ್‌ ಬರ್ತಿದೆ. ಹೆಚ್ಚಿನವರು ಬೆಂಕಿಯ ಇಮೋಜಿ ಹಾಕಿ ಕಾಲೆಳೆದಿದ್ದಾರೆ. ಇನ್ನೂ ಕೆಲವರು ಇದು 'ಕೆಜಿಎಫ್‌ 3' ಟೀಸರಾ ಇದು ಅಂತ ವ್ಯಂಗ್ಯ ಮಾಡಿದರೆ ಮತ್ತೂ ಕೆಲವರು, 'ಬರು ಬರುತ್ತಾ ನೀವು ನಾಟಿ ಬಾಯ್ ಆಗ್ತಿದ್ದೀರ ಯಶ್' ಅಂತ ಕಣ್‌ ಹೊಡೆದಿದ್ದಾರೆ.

View post on Instagram