Asianet Suvarna News Asianet Suvarna News

ದೇವ್ರೆ! ಸೀತಾ ರಾಮಂ ಹಿಟ್ ಆದ್ಮೇಲೆ ಇಷ್ಟೊಂದು ಹಣ ಡಿಮ್ಯಾಂಡ್ ಮಾಡ್ತಿದ್ದಾರಾ Mrunal Thakur?

ಸಂಭಾವನೆ ಹೆಚ್ಚಿಸಿಕೊಂಡ ನಟಿ ಮೃಣಾಲ್ ಠಾಕೂರ್. ಮತ್ತೊಂದು ಸಿನಿಮಾ ದುಲ್ಕರ್‌ ಜೊತೆಗೆ?

Mrunal Thakur hikes her remuneration after Sita Ramam hit vcs
Author
First Published Sep 20, 2022, 10:25 AM IST

ಹಿಂದಿ ಧಾರಾವಾಹಿ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಮೃಣಾಲ್ ಠಾಕೂರ್ ಇದೀ ಭಾರತೀಯ ಚಿತ್ರರಂಗದ ಬೇಡಿಕೆಯ ನಟಿ. ದುಲ್ಕರ್ ಸಲ್ಮಾನ್‌ಗೆ ಜೋಡಿಯಾಗಿ ಸೀತಾ ರಾಮಂ ಸಿನಿಮಾದಲ್ಲಿ ಅಭಿನಯಿಸಿದ ನಂತರ ಮೃಣಾಲ್ ಸೀತಾ ಆಗಿ ಪಡ್ಡೆ ಹುಡುಗರ ಮನಸ್ಸಿನಲ್ಲಿ ಉಳಿದು ಬಿಟ್ಟರು. ವೃತ್ತಿ ಜೀವನದಲ್ಲಿ ಬಿಗ್ ಹಿಟ್ ಪಡೆದುಕೊಂಡ ನಂತರ ಮೃಣಾಲ್ ಇದೀಗ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. 

ಹೌದು! ಬಾಲಿವುಡ್‌ನಲ್ಲಿ ಮೃಣಾಲ್ ಸಂಭಾವನೆ 2 ಕೋಟಿ ಮುಟ್ಟಿದೆ. ದಕ್ಷಿಣ ಭಾರತದಲ್ಲಿ ಒಂದು ಕೋಟಿ ಎನ್ನಲಾಗಿದೆ. ಸೀತಾ ರಾಮಂ ಒಂದು ಸಿನಿಮಾ ಹಿಟ್‌ನಿಂದ ಮೃಣಾಲ್‌ ಇಷ್ಟೊಂದು ಹೈಕ್ ಮಾಡಿಕೊಂಡಿರುವುದು ನೆಟ್ಟಿಗರಿಗೆ ಶಾಕ್ ಆಗಿದೆ. ಅಲ್ಲದೆ ದುಲ್ಕರ್‌ ಜೊತೆ ಮತ್ತೊಂದು ತಮಿಳು ಸಿನಿಮಾ ಸಹಿ ಮಾಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಬಣ್ಣದ ಜರ್ನಿ ಆರಂಭಿಸಿದಾಗ ಮೃಣಾಲ್ 5- 10 ಲಕ್ಷ ರೂಪಾಯಿ ಪಡೆಯುತ್ತಿದ್ದರು. 

Mrunal Thakur hikes her remuneration after Sita Ramam hit vcs

ಗ್ಲಾಮರ್ ಮತ್ತು ನಟನೆಗೆ ಮೃಣಾಲ್ ನ್ಯಾಯ ಒದಗಿಸುವ ಕಾರಣ ಇಷ್ಟು ಸಂಭಾವನೆ ಕೊಡುವುದರಲ್ಲಿ ತಪ್ಪಿಲ್ಲ ಎಂದು ನಿರ್ಮಾಪಕರು ಚರ್ಚೆ ಮಾಡುತ್ತಿದ್ದಾರೆ.

ಓಟಿಟಿಯಲ್ಲಿ ಸೀತಾ ರಾಮಂ:

ಸೆಪ್ಟೆಂಬರ್ 9ರಿಂದ ಅಮೇಜಾನ್ ಪ್ರೈಮ್‌ನಲ್ಲಿ ಸೀತಾ ರಾಮಂ ಸಿನಿಮಾ ಪ್ರಸಾರವಾಗುತ್ತಿದೆ. ಹನು ರಾಘವಪುಡಿ ನಿರ್ದೇಶನ ಮಾಡಿರುವ ಈ ಸಿನಿಮಾ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ತೆರೆಕಂಡಿತ್ತು. ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಮಾತ್ರವಲ್ಲ ರಶ್ಮಿಕಾ ಮಂದಣ್ಣ ಪಾತ್ರ ಕೂಡ ಸೂಪರ್ ಹಿಟ್ ಆಗಿದೆ.

'ಸೀತಾ ರಾಮಂ ಸಿನಿಮಾದಲ್ಲಿ ಸೀತಾ ಪಾತ್ರವು ನನ್ನ ಜೀವನ ಅತ್ಯಂತ ವಿಶಿಷ್ಠ ಅನುಭವಗಳಲ್ಲಿ ಒಂದು. ಸಿನಿಮಾ ಕಥೆ ಕೇಳಿದ ಕೆಲವೇ ನಿಮಿಷಗಳಲ್ಲಿ ಬ್ಲ್ಯಾಂಕ್ ಆಗಿಬಿಟ್ಟೆ. ಯಾವ ಕಾರಣಕ್ಕೂ ಈ ಸಿನಿಮಾ ಬಿಡಬಾರದು ಎಂದು ನಿರ್ಧಾರ ಮಾಡಿಕೊಂಡೆ. ದಕ್ಷಿಣ ಭಾರತದಲ್ಲಿ ನನ್ನ ಮೊದಲ ಸಿನಿಮಾ ಇದಾಗಿರುವ ಕಾರಣ ನಿರೀಕ್ಷೆ ಜೊತೆಗೆ ಭಯವಿತ್ತು ಆದರೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ' ಎಂದು ಮೃಣಾಲ್ ಮಾತನಾಡಿದ್ದಾರೆ. 

'ನಂಬಲಿಕ್ಕೆ ಆಗುತ್ತಿಲ್ಲ' ಆ ದಿನಗಳನ್ನು ನೆನಪಿಸಿಕೊಂಡ ಮೃನಾಲ್ ಠಾಕೂರ್

ಸುಮಾರು 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದ್ದು ಚಿತ್ರಮಂದಿರದಿಂದ 80 ಕೋಟಿ ಕಲೆಕ್ಷನ್ ಮಾಡಿದೆ.

ಟಾಪ್ ಲೆಸ್‌ ಪೋಸ್:

ಮೃಣಾಲ್ ಟಾಪ್ ಲೆಸ್ ಆಗಿ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದು 2 ವರ್ಷಗಳ ಹಳೆಯ ಫೋಟೋವಾಗಿದೆ. ಆದರೀಗ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ಮೃಣಾಲ್ ಹಳೆಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ಟಾಪ್ ಲೆಸ್ ಆಗಿರುವ ಮೃಣಾಲ್ ಪ್ಯಾಂಟ್ ಮಾತ್ರ ಧರಿಸಿದ್ದಾರೆ. ನೀರಿಳಿಯುತ್ತಿರುವ ಕೂದಲುನ್ನು ಹರಡಿಕೊಂಡು ಕ್ಯಾಮರಾಗೆ ಬೆನ್ನು ತೋರಿಸುತ್ತಾ ಕುಳಿತಿರುವ ಮೃಣಾವಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

ಮೃಣಾಲ್ ಠಾಕೂರ್ ಟಾಪ್ ಲೆಸ್‌ ಪೋಸ್: ಸೀತಾ ಹಾಟ್ ಲುಕ್ ನೋಡಿ ದಂಗಾದ ಫ್ಯಾನ್ಸ್

ಟ್ರೋಲ್‌ಗೆ ಖಡಕ್‌ ಉತ್ತರ:

ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಜಿಮ್ನಾಸ್ಟಿಕ್ಸ್ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಕಾರಣದಿಂದನಟಿ ಸಾಕಷ್ಟು ಟ್ರೋಲ್‌ಗೆ  ಗುರಿಯಾಗಿದ್ದಾರೆ.  ಸಾಮಾಜಿಕ ಮಾಧ್ಯಮ ಪುಟವು ಅಶ್ಲೀಲ ಕಾಮೆಂಟ್‌ಗಳಿಂದ ತುಂಬಿದೆ. ಮೃಣಾಲ್ ಕೂಡ ಟ್ರೋಲ್‌ಗಳಿಗೆ  ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.'ನಿಮ್ಮ ಪೃಷ್ಠದ ಗಾತ್ರವು ಇಡೀ ಪಿಚರ್‌ನಂತಿದೆ' ಎಂದು ಕಾಮೆಂಟ್‌  ಮಾಡಿದವರಿಗೆ 'ಧನ್ಯವಾದಗಳು ಸಹೋದರ' ಎಂದು ನಟಿ ಉತ್ತರಿಸಿದ್ದಾರೆ. ಆದರೆ, ಮತ್ತೊಬ್ಬ ನೆಟಿಜನ್ ನಾಯಕಿಯ ಪೃಷ್ಠದ ಗಾತ್ರದ ಬಗ್ಗೆ ವ್ಯಂಗ್ಯವಾಡಿದಾಗ, ನಾಯಕಿ ಅವರಿಗೆ 'ನನ್ನ ಪೃಷ್ಠದ ಗಾತ್ರ ಹೀಗಿದೆ, ನಾನು ತೋರಿಸುತ್ತಿದ್ದೇನೆ. ನೀವು ಹೊಂದಿದ್ದರೆ, ಅದನ್ನು ನೀವು ತೋರಿಸಿ' ಎಂದು ಖಡಕ್‌ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ್ದಾರೆ.

Follow Us:
Download App:
  • android
  • ios