ಬಾಲಿವುಡ್‌ನ ಬ್ಯುಸಿ ನಟಿಯರಲ್ಲೊಬ್ಬರಾಗಿರುವ ಜಾಕ್ವೆಲಿನ್ ಫರ್ನಾಂಡಿಸ್ 2021ರಲ್ಲಿಯೂ ಬ್ಯುಸಿ ಇರಲಿದ್ದಾರೆ.ಸೈಫ್ ಅಲಿ ಖಾನ್, ಅರ್ಜುನ್ ಕಪೂರ್, ಯಾಮಿ ಗೌತಮ್ ಜೊತೆ ಜಾಕಿ ಈಗಾಗಲೇ ಪವನ್ ಕೃಪಲಾನಿ ನಿರ್ದೇಶನದ ಭೂತ್ ಪೊಲೀಸ್ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ.

ರಣವೀರ್ ಸಿಂಗ್ ಜೊತೆ ರೋಹಿತ್ ಶೆಟ್ಟಿಯ ಸರ್ಕಸ್ ಸಿನಿಮಾ ಕೂಡಾ ಮಾಡಲಿದ್ದಾರೆ. ಅಕ್ಷಯ್ ಪಾಂಡೆ ಜೊತೆ ಬಚ್ಚನ್ ಪಾಂಡೆ ಸಿನಿಮಾ ಕೂಡಾ ಮಾಡಲಿದ್ದಾರೆ. ನಟಿಯ ಪ್ರೊಫೆಷನಲ್ ಮತ್ತು ಪರ್ಸನಲ್ ಲೈಫ್‌ನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಘಟನೆಗಳು ನಡೆಯುತ್ತಿವೆ.

ಅಷ್ಟೊಂದು ಜನರ ಮಧ್ಯೆ ಹಾಟ್ ಆಗಿ ನಟಿಸೋದೇಗೆ..? ಸನ್ನಿ ಹೇಳಿದ್ದಿಷ್ಟು

ಇದೀಗ ನಟಿ ತಮಗಾಗಿಯೇ ಮುಂಬೈನಲ್ಲೊಂದು ಮನೆ ಖರೀದಿಸಿದ್ದಾರೆ. ಕಳೆದ ತಿಂಗಳು ನಟಿ ತಮ್ಮ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಈ ಮನೆ ಮೊದಲ ಮನೆಗಿಂತಲೂ ದೊಡ್ಡದಾಗಿದ್ದು ತಾವೇ ನಿಂತು ಮನೆಯ ಇಂಟೀರಿಯರ್ ಅಲಂಕಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ಮಾತ್ರವಲ್ಲದೆ, ಜಾಹ್ನವಿ ಕಪೂರ್, ಹೃತಿಕ್ ರೋಷನ್, ಆಲಿಯಾ ಭಟ್ ಕೂಡಾ ಮುಂಬೈನಲ್ಲಿ ಮನೆ ಖರೀಸಿದ್ದಾರೆ. ಜಾಹ್ನವಿ ಮತ್ತು ಹೃತಿಕ್ ಜುಹುವಿನಲ್ಲಿ ಮನೆ ಖರೀದಿಸಿದ್ದರೆ, ಆಲಿಯಾ ರಣಬೀರ್ ಕಪೂರ್ ಮನೆಯ ಸಮೀಪದಲ್ಲಿಯೇ ಬಾಂದ್ರಾದಲ್ಲಿ ಮನೆ ಖರೀದಿಸಿದ್ದಾರೆ.