ಪತಿ ಜೊತೆಯ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಂಡ ಪ್ರೀತಿ ಜಿಂಟಾ!
ಬಾಲಿವುಡ್ ನಟಿ ಪ್ರೀತಿ ಜಿಂಟಾ ಪತಿ Gene Goodenough ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿರವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಪ್ರೀತಿ.
ಹಿಮದಲ್ಲಿ ಎಂಜಾಯ್ ಮಾಡುತ್ತಿರುವ ಪ್ರೀತಿಯನ್ನು ಕೆಂಪು ಬಣ್ಣದ ಜಾಕೆಟ್, ಬಿಳಿ ಕ್ಯಾಪ್ ಮತ್ತು ನೀಲಿ ಜೀನ್ಸ್‌ನಲ್ಲಿ ಕಾಣಬಹುದು. ಅವರ ಪತಿ ಕಪ್ಪು ಜಾಕೆಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದಾರೆ.
ಪ್ರೀತಿ ಮತ್ತು ಜೀನ್ ನಡುವೆ ಸುಮಾರು 10 ವರ್ಷಗಳ ವ್ಯತ್ಯಾಸವಿದೆ. ಈ ದಂಪತಿ 2016ರಲ್ಲಿ ವಿವಾಹವಾದರು. ಅವರ ಮದುವೆಯ ವಿಷಯವನ್ನು ಎಲ್ಲರಿಂದ ಮುಚ್ಚಿಡಲಾಗಿತ್ತು.
ಫೆಬ್ರವರಿ 29ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ, ಮುಂಬೈನಲ್ಲಿ ಬಾಲಿವುಡ್ ಸ್ಟಾರ್ಸ್‌ಗಾಗಿ ಗ್ರ್ಯಾಂಡ್ ರಿಸೆಪ್ಷನ್ ನೀಡಿದರು.
ಪತಿ ಪ್ರೀತಿ ಜಿಂಟಾರಿಗಿಂದ 10 ವರ್ಷ ಚಿಕ್ಕವರು. ಪ್ರೀತಿಗೆ 45 ವರ್ಷ, ಜೀನ್ ಇನ್ನೂ 35 ವರ್ಷ
ಪ್ರೀತಿ ಜಿಂಟಾ ತಮ್ಮ ವೃತ್ತಿಜೀವನವನ್ನು ಸಿನಿಮಾಗಳಿಂದ ಅಲ್ಲ, ಜಾಹೀರಾತುಗಳ ಮೂಲಕ ಪ್ರಾರಂಭಿಸಿದರು. 1996 ರಲ್ಲಿ, ಫ್ರೆಂಡ್ ಬರ್ತ್‌ಡೇ ಪಾರ್ಟಿಯಲ್ಲಿ ಪ್ರೀತಿ ಒಬ್ಬ ನಿರ್ದೇಶಕರನ್ನು ಭೇಟಿಯಾದರು.
ಅವರ ಮೊದಲ ಜಾಹೀರಾತು ಚಾಕೊಲೇಟ್ ಬ್ರಾಂಡ್ ಆಗಿತ್ತು. ನಂತರ ಸೋಪ್ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡರು.
1997ರಲ್ಲಿ, ಪ್ರೀತಿ ಜಿಂಟಾ ತಮ್ಮ ಸ್ನೇಹಿತರೊಡನೆ ಆಡಿಷನ್‌ಗೆ ಹೋದಾಗ ನಿರ್ದೇಶಕ ಶೇಖರ್ ಕಪೂರ್‌ರನ್ನು ಭೇಟಿಯಾದರು. ಕಪೂರ್ ಅವರ 'ತಾರಾ ರಮ್ ಪಮ್' ಚಿತ್ರಕ್ಕೆ ಪ್ರೀತಿ ಸಹಿ ಹಾಕಿದರು. ಆದರೆ, ಹೃತಿಕ್ ರೋಷನ್ ಅವರೊಂದಿಗೆ ನಿರ್ಮಿಸಲಾದ ಈ ಚಿತ್ರ ಕೆಲವು ಕಾರಣಗಳಿಂದ ಚಿತ್ರೀಕರಣ ನಡೆಯಲಿಲ್ಲ.
ಇದರ ನಂತರ ಪ್ರೀತಿ ಕುಂದನ್ ಷಾ ಅವರ ಕ್ಯಾ ಕೆಹ್ನಾ (2000) ಚಿತ್ರಕ್ಕೆ ಸಹಿ ಹಾಕಿದರು. ಆದರೆ ಇದಕ್ಕೂ ಮುನ್ನ ಮಣಿರತ್ನಂರ 'ದಿಲ್ ಸೆ' (1998) ಬಿಡುಗಡೆಯಾಗಿದ್ದು. ಆದಾಗ್ಯೂ, ಅವರ ಮೊದಲ ಪ್ರಮುಖ ಪಾತ್ರ ಸೋಲ್ಜರ್ (1998).
ತಮ್ಮ 23ನೇ ವಯಸ್ಸಿನಲ್ಲಿ 'ದಿಲ್ ಸೆ' ಚಿತ್ರದೊಂದಿಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಪ್ರೀತಿ ತೆಲುಗು, ಪಂಜಾಬಿ ಮತ್ತು ಇಂಗ್ಲಿಷ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಪ್ರೀತಿ ಜಿಂಟಾ ಕಿಂಗ್ಸ್ ಇಲೆವೆನ್ ಪಂಜಾಬ್ ಹೆಸರಿನ ಐಪಿಎಲ್ ತಂಡವನ್ನೂ ಹೊಂದಿದ್ದಾರೆ.