Asianet Suvarna News Asianet Suvarna News

ಒಬ್ರು 75 ಕೋಟಿ ಬಂಗ್ಲೆ, ಇನ್ನೊಬ್ರು 4 ಕೋಟಿ ಕಾರು: ಅಬ್ಬಬ್ಬಾ ಈ ಸೆಲೆಬ್ರಿಟಿಗಳು ಕೊಟ್ಟ ಈ ಗಿಫ್ಟುಗಳೇ!

ಬಾಲಿವುಡ್​ನಲ್ಲಿ ಎಲ್ಲರ ಕಣ್ಣು ಕುಕ್ಕಿಸುವಂಥ ದುಬಾರಿ ಉಡುಗೊರೆಗಳನ್ನು ನೀಡಲಾಗಿದೆ. ಅವುಗಳ ಪೈಕಿ ಕೆಲವು ದುಬಾರಿ ಎನಿಸಿರುವ ಉಡುಗೊರೆಗಳ ಕುರಿತು ಇಲ್ಲಿ ವಿವರಣೆ ನೀಡಲಾಗಿದೆ. 
 

Most expensive gifts given by Salman Khan Shah Rukh Khan Karan Johar and other celebs
Author
First Published Jan 26, 2023, 4:16 PM IST

ಮುಂಬೈ: ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡುವುದು ಹೊಸ ವಿಷಯವೇ ಅಲ್ಲ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಉಡುಗೊರೆ ಹತ್ತಾರು ರೂಪಾಯಿಗಳಿಂದ ಶುರುವಾಗಿ ಕೋಟ್ಯಂತರ ರೂಪಾಯಿಗಳನ್ನೂ ಮೀರುವುದು ಇದೆ. ಮಕ್ಕಳಿಗೆ, ಪಾಲಕರಿಗೆ, ಪತಿ ಪತ್ನಿಗೆ, ಸ್ನೇಹಿತರಿಗೆ, ಕಚೇರಿಯ ಸಿಬ್ಬಂದಿಗೆ, ತಮ್ಮ ಕೈಕೆಳಗೆ ಕೆಲಸ ಮಾಡುವವರಿಗೆ... ಹೀಗೆ ಪ್ರೀತಿ ಪಾತ್ರರೂ ಯಾರೇ ಆಗಿರಬಹುದು. ಅಂಥವರಿಗೆ ಉಡುಗೊರೆ ಕೊಡುವುದು ಎಂದರೆ ಹಲವರಿಗೆ ತುಂಬಾ ಇಷ್ಟ. ಅದೇ ರೀತಿಯ ಉಡುಗೊರೆಯ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಆದರೆ ಇಲ್ಲಿ ಹೇಳಹೊರಟಿರುವುದು ಬಾಲಿವುಡ್​  ವಿಷ್ಯ. ಬಾಲಿವುಡ್ ತಾರೆಯರು ತಮ್ಮ ಇಷ್ಟದವರಿಗೆ ಕೊಟ್ಟಿರುವ ದುಬಾರಿ ಗಿಫ್ಟ್​ಗಳ (Costliest gift) ಕೆಲವೊಂದು ಉದಾಹರಣೆ ಇಲ್ಲಿದೆ:

ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ (Athia Shetty) ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಇದೇ 23ರಂದು ವಿವಾಹವಾದರು.  ಈ ಸಂದರ್ಭದಲ್ಲಿ ಅಥಿಯಾ ಅವರಿಗೆ  ತಂದೆ ಸುನೀಲ್ ಶೆಟ್ಟಿ ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನೊಂದೆಡೆ ಸಲ್ಮಾನ್ ಖಾನ್ (Salman Khan) ಒಂದೂವರೆ ಕೋಟಿಗೂ ಅಧಿಕ ಬೆಲೆಯ ಕಾರನ್ನು ನೀಡಿದ್ದಾರೆ. 

Shah Rukh Khan: ಟಾಪ್​ 20 ಸಿನಿಮಾ ಲಿಸ್ಟ್​ ರಿಲೀಸ್​: ಶಾರುಖ್​ ಖಾನ್​ಗೆ ಬಿಗ್​ ಶಾಕ್​!

ಸದ್ಯ ಬಿಸಿಬಿಸಿ ಸುದ್ದಿಯಲ್ಲಿರುವ ಶಾರುಖ್ ಖಾನ್ (Shah Rukh Khan) ಕೂಡ ಹಿಂದೊಮ್ಮೆ ತಮ್ಮ ಸಿಬ್ಬಂದಿಗೆ ಕಾರುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದರು. 2011ರಲ್ಲಿ ಬಿಡುಗಡೆಯಾದ 'ರಾ ಒನ್' ಚಿತ್ರದ ನಂತರ 5 ಸಿಬ್ಬಂದಿಗೆ BMW 7 ಸಿರೀಸ್ ಸೆಡಾನ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಐದು ಸಿಬ್ಬಂದಿಯಲ್ಲಿ ಅವರ ಸಹನಟರಾದ ಅರ್ಜುನ್ ರಾಂಪಾಲ್, ರಜನಿಕಾಂತ್ ಮತ್ತು ನಿರ್ದೇಶಕ ಅನುಭವ್ ಸಿನ್ಹಾ ಸೇರಿದ್ದಾರೆ. ಆಗ ಈ ಕಾರಿನ ಬೆಲೆ ಸುಮಾರು 1 ಕೋಟಿ ರೂಪಾಯಿಗಳದ್ದು.  

ಬಾಲಿವುಡ್​ ತಾರೆಯರಾದ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ (Abhishek Bacchan) ಅವರು 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿದರು. ಈ ದಂಪತಿಗೆ 2011ರ ನವೆಂಬರ್​ 16ರಂದು ಆರಾಧ್ಯ ಜನಿಸಿದಳು. ಆರಾಧ್ಯಳ ಮೊದಲ ಹುಟ್ಟುಹಬ್ಬಕ್ಕೆ ಅಪ್ಪ ಅಭಿಷೇಕ್​  ಬಿಎಂಡಬ್ಲ್ಯು ಮಿನಿ ಕೂಪರ್ ಕಾರನ್ನು (BMW mini cooper car) ಉಡುಗೊರೆಯಾಗಿ ನೀಡಿದ್ದರು. ಈ ಕಾರಿನ ಬೆಲೆ  ಸುಮಾರು 25 ಲಕ್ಷ ರೂಪಾಯಿ ಮೌಲ್ಯದ್ದಾಗಿತ್ತು.  

ಬಾಲಿವುಡ್​ನ ಹಾಟೆಸ್ಟ್​ ತಾರೆಗಳಲ್ಲಿ ಒಬ್ಬರಾಗಿರುವ ಶಿಲ್ಪಾ ಶೆಟ್ಟಿಗೆ ಅವರ ಉದ್ಯಮಿ ಪತಿ ರಾಜ್ ಕುಂದ್ರಾ ಅವರು ಅನೇಕ ಉಡುಗೊರೆಗಳನ್ನು ನೀಡಿದ್ದಾರೆ. ರಾಜ್​ ಕುಂದ್ರಾ ಅವರು, ಪತ್ನಿ ಶಿಲ್ಪಾ ಅವರಿಗೆ  ದುಬೈನ ಬುರ್ಜ್ ಖಲೀಫಾದಲ್ಲಿರುವ ಫ್ಲಾಟ್ ನೀಡಿದ್ದಾರೆ.  2012 ರಲ್ಲಿ ತಮ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಲಾಗುತ್ತದೆ, ಇದು 19 ನೇ ಮಹಡಿಯಲ್ಲಿದೆ. ಇದರ ಬೆಲೆ 50 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಸದ್ಯ ರಾಜ್​ ಕುಂದ್ರಾ (Raj Kundra) ಅವರು ಬ್ಲೂಫಿಲ್ಮ್​ (blue film) ಕೇಸ್​ನಲ್ಲಿ ಸಿಲುಕಿ ಹಾಕಿಕೊಂಡಿದ್ದು, ಕೇಸ್​ ಇನ್ನೂ ನಡೆಯುತ್ತಿದೆ. 

ಎರಡನೆಯ ಹಿಂದೂ ಪತ್ನಿಗೆ ಡಿವೋರ್ಸ್​ ಕೊಟ್ಟು ಆಮೀರ್ ಖಾನ್ (Amir Khan) ಸದ್ಯ ಸುದ್ದಿಯಲ್ಲಿದ್ದಾರೆ. ಇವರು ವಿಚ್ಛೇದನಕ್ಕೆ  ಮುನ್ನ  ಎರಡನೆಯ ಪತ್ನಿಯಾಗಿದ್ದ  ಕಿರಣ್ ರಾವ್ ಅವರು ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್‌ನಲ್ಲಿರುವ ಹಾಲಿಡೇ ಹೋಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ, ಇದು ಸುಮಾರು 75 ಕೋಟಿ ರೂಪಾಯಿ ನೀಡಿದ್ದಾರೆ. ಕರಣ್ ಜೋಹರ್ ನಿರ್ಮಾಣದ 'ಅಗ್ನಿಪಥ್' ಚಿತ್ರದಲ್ಲಿ ಕತ್ರಿನಾ ಕೈಫ್ ಐಟಂ ಸಾಂಗ್​ 'ಚಿಕ್ನಿ ಚಮೇಲಿ' ಮಾಡಿದ್ದಾರೆ. ಆದರೆ ಅವರು ಅದಕ್ಕೆ ಯಾವುದೇ ಶುಲ್ಕವನ್ನು ವಿಧಿಸಿರಲಿಲ್ಲ.  ಇದಕ್ಕೆ ಪ್ರತಿಯಾಗಿ ಶಾರುಖ್ ಖಾನ್ ಕತ್ರಿನಾ ಕೈಫ್​ಗೆ 2 ಕೋಟಿ ಮೌಲ್ಯದ ಫೆರಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

Urfi Javed: ಮುಸ್ಲಿಮರೂ ಮನೆ ಕೊಡ್ತಿಲ್ಲ, ಏನ್​ ಮಾಡ್ಲಿ? ಟ್ವಿಟರ್​ನಲ್ಲಿ ಉರ್ಫಿ ಗೋಳು

'ಬಾಹುಬಲಿ' ಚಿತ್ರಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ನಟ ಪ್ರಭಾಸ್‌ (Actor Prabhas) ಅವರಿಗೆ ಫ್ರಾಂಚೈಸಿಯ ತಯಾರಕರು 1.5 ಕೋಟಿ ರೂಪಾಯಿ ಮೌಲ್ಯದ ಜಿಮ್ ಉಪಕರಣಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದರಿಂದ  ಬಾಹುಬಲಿ ಪಾತ್ರಕ್ಕೆ ತಮ್ಮನ್ನು ತಾವು ರೂಪಿಸಿಕೊಳ್ಳಲು ಪ್ರಭಾಸ್​ ಅವರಿಗೆ ನೆರವಾಯಿತು. 2022 ರಲ್ಲಿ 'ಭೂಲ್ ಭುಲೈಯಾ 2' ಚಿತ್ರದ ಯಶಸ್ಸಿನ ನಂತರ, ನಿರ್ಮಾಪಕ ಭೂಷಣ್ ಕುಮಾರ್ ಅವರು ಕಾರ್ತಿಕ್ ಆರ್ಯನ್‌ಗೆ ಮೆಕ್ಲಾರೆನ್ ಜಿಟಿ ಕಾರನ್ನು ಉಡುಗೊರೆಯಾಗಿ ನೀಡಿದರು, ಇದು ಸುಮಾರು 3.72 ಕೋಟಿ ರೂ. ಮೌಲ್ಯದ್ದು. 2022ರಲ್ಲಿ ತೆರೆಕಂಡ ‘ಆದಿಪುರುಷ’ (Adipurush) ಚಿತ್ರದ ನಿರ್ದೇಶಕ ಓಂ ರಾವುತ್ ಅವರಿಗೆ ನಿರ್ಮಾಪಕ ಭೂಷಣ್ ಕುಮಾರ್ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಬೆಂಟ್ಲಿ ಫ್ಲೈಯಿಂಗ್ ಸೂಪರ್ ಫೆರಾರಿ 458 ಬೆಲೆ ಸುಮಾರು 4.02 ಕೋಟಿ ಎಂದು ಹೇಳಲಾಗಿದೆ.

Follow Us:
Download App:
  • android
  • ios