ನಟಿ ಮೋನಾ ಸಿಂಗ್ ಹಾಗೂ ಶ್ಯಾಮ್ ಗೋಪಾಲ್ ಕಳೆದ ವರ್ಷ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಕ್ಕಳು ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದ ಜನರಿಗೆ ಬೋಲ್ಡ್‌ ಆಗಿ ಉತ್ತರ ನೀಡಿದ್ದಾರೆ. 

ಕಂಗನಾ ಶೇರ್ ಮಾಡಿದ ಆ ಫೋಟೋಗೆ ನೆಟ್ಟಿಗರಿಂದ ಫುಲ್ ಕ್ಲಾಸ್!

2003ರಲ್ಲಿ 'ಜಸ್ಸಿ ಜೈಸಿ ಕೊಯಿ ನಹಿ ಹೇ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಮೋನಾ ಸದ್ಯಕ್ಕೆ ಜೀ5 ನ 'ಬ್ಲಾಕ್ ವಿಡೋ' ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಮಾಧ್ಯಮವೊಂದರ ಜೊತೆ ತಮ್ಮ ಮಂದರ್‌ಹುಡ್‌ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ. 

'ನಾನು 34 ವರ್ಷವಿದ್ದಾಗಲೇ ನನ್ನ ಅಂಡಾಣುಗಳನ್ನು ಫ್ರೀಜ್ ಮಾಡಿದ್ದೀನಿ. ನಾನು ಮದುವೆಯಾಗಿ ವರ್ಷ ಆಗಿದೆಯಷ್ಟೇ. ನನ್ನ ಪಾರ್ಟನರ್ ಜೊತೆ ಎಂಜಾಯ್ ಮಾಡಬೇಕು. ಇಷ್ಟು ದಿನಗಳ ಕಾಲ ನನ್ನ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಿದ್ದೆ. ಈಗ ಪಾರ್ಟನರ್‌ ಜೊತೆ ಅದ್ಭುತ ಸಮಯ ಕಳೆಯಬೇಕು. ನನಗೆ ಮಕ್ಕಳೆಂದರೆ ಇಷ್ಟ. ಮುಂದಕ್ಕೆ ಮಕ್ಕಳ ಪ್ಲಾನ್ ಮಾಡಬೇಕು, ' ಎಂದು ಮೋನಾ ಸಿಂಗ್ ಹೇಳಿದ್ದಾರೆ. 

ಮಿಲ್ಖಾ ಸಿಂಗ್ ಪಾದ ಮುಟ್ಟಿ ನಮಸ್ಕರಿಸಿದ ಊರ್ವಶಿ 

ವೈದ್ಯರ ಸಹಾಯದಿಂದ ಅಂಡಾಣು ಸಂರಕ್ಷಣೆ:
ಮೋನಾ ಸಿಂಗ್ ತೆಗೆದುಕೊಂಡ ಈ ನಿರ್ಧಾರಕ್ಕೆ ತಾಯಿಯ ಸಾಥ್‌ ಇದೆ ಎಂದು ಹೇಳಿದ್ದಾರೆ. 'ನಾನು ಮೊದಲು ನನ್ನ ತಾಯಿ ಜೊತೆ ಪೂಣೆಯಲ್ಲಿ ಗೈನಾಕಾಲಜಿಸ್ಟ್ ಅನ್ನು ಸಂಪರ್ಕಿಸಿದೆ. ಕೆಲಸದಿಂದ ಕೆಲವು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದೆ, ಈ ಪ್ರೊಸೆಸ್‌ನಲ್ಲಿ ತುಂಬಾ ಮೂಡ್ ಸ್ವಿಂಗ್ ಆಗುತ್ತದೆ. ಇವೆಲ್ಲಾ5 ತಿಂಗಳ ಪ್ರಾಸೆಸ್‌. ನಾನು ಈಗ ಆರಾಮಾಗಿರುವೆ,' ಎಂದು ಮೋನಾ ಸಿಂಗ್ ಮಾತನಾಡಿದ್ದಾರೆ.