ಕೆಲವು ದಿನಗಳ ಹಿಂದೆ ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ. ಸಾಮಾಜಿಕ ಜಾಲತಾಣದಲ್ಲಿ ತಂದೆ ಹೇಳಿದ ಧೈರ್ಯದ ಮಾತುಗಳನ್ನು ಬರೆದುಕೊಂಡ ನಟಿ.... 

ವಿಶ್ವ ಸುಂದರಿ ಸುಶ್ಮಿತಾ ಸೇನ್‌ಗೆ ಕೆಲವು ದಿನಗಳ ಹಿಂದೆ ಹೃದಯಾಘಾತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ತಂದೆ ಜೊತೆಗಿರುವ ಫೋಟೋ ಹಂಚಿಕೊಂಡು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಿಕೊಂಡು ವಿಶ್ರಾಂತಿ ಪಡೆದುಕೊಂಡಿರುವ ನಟಿಗೆ ಹೃದ್ರೋಗ ತಜ್ಞರು 'ಪ್ರೀತಿ ತುಂಬಿರುವ ವಿಶಾಲವಾದ ಹೃದಯ' ಎಂದು ಹೇಳಿದ್ದಾರಂತೆ.

ಸುಶ್ಮಿಕಾ ಪೋಸ್ಟ್‌:

'ನಿಮ್ಮ ಹೃದಯವನ್ನು ಸಂತೋಷದಿಂದ ಮತ್ತು ಧೈರ್ಯದಿಂದ ಇಟ್ಟುಕೊಳ್ಳಿ. ಸರಿಯಾದ ಸಮಯಕ್ಕೆ ನಿಮ್ಮ ಜೊತೆ ಧೈರ್ಯದಿಂದ ನಿಲ್ಲುತ್ತದೆ ಶೋನಾ ಎಂದು ಈ ಮಾತುಗಳನ್ನು ನನ್ನ ತಂದೆ ಸುಬಿರ್‌ ಸೇನ್ ಹೇಳುತ್ತಿದ್ದರು. ಕೆಲವು ದಿನಗಳ ಹಿಂದೆ ನನಗೆ ಹೃದಯಘಾತವಾಗಿತ್ತು ಆಗ ನನಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ಮಾಡಿ ಸ್ಟಂಟ್ ಹಾಕಿದ್ದಾರೆ. ಅದು ಮುಖ್ಯವಾದ ವಿಚಾರ ಏನೆಂದರೆ ನನ್ನ ಹೃದ್ರೋಗ ತಜ್ಞರು ನನ್ನ ಹೃದಯ ವಿಶಾಲವಾದದ್ದು ಹಾಗೂ ತುಂಬಾ ಪ್ರೀತಿ ತುಂಬಿದೆ ಎಂದು ಪುನಃ ದೃಢೀಕರಿಸಿದರು. ನನ್ನ ಪರ ನಿಂತು ನನ್ನ ಆರೋಗ್ಯ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸರಿಯಾದ ಸಮಯದಕ್ಕೆ ಚಿಕಿತ್ಸೆ ಪಡೆದುಕೊಂಡಿರುವೆ. ಈ ಪೋಸ್ಟ್‌ ಮೂಲಕ ನನ್ನ ಅಭಿಮಾನಿಗಳು ಮತ್ತು ಆಪ್ತರಿಗೆ ವಿಚಾರ ತಿಳಿಸುತ್ತಿರುವೆ, ಆರೋಗ್ಯವಾಗಿರುವ ಕಾರಣ ಗುಡ್ ನ್ಯೂಸ್‌. ಈಗ ನಾನು ಸಂಪೂರ್ಣವಾಗಿ ರೆಡಿಯಾಗಿದ್ದು ಮತ್ತೊಮ್ಮೆ ಜೀವನ ಶುರು ಮಾಡಲು ಸಿದ್ಧ' ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ. 

ಅನೇಕರಿಗೆ ನೀವು ಸಹಾಯ ಮಾಡಿದ್ದೀರಿ ಜೊತೆ ಅನಾಥ ಮಕ್ಕಳಿಗೆ ಬೆಳಕಾಗಿ ನಿಂತಿದ್ದೀರಿ ಹೀಗಾಗಿ ಆ ದೇವರು ನಿಮ್ಮನ್ನು ಬದುಕಿಸಿದ್ದಾನೆ. ನಿಮ್ಮಿಂದ ಆದಷ್ಟು ಜನರಿಗೆ ಸಹಾಯ ಮಾಡಿ ಪ್ರೀತಿ ಹಂಚಿ ಹಾಗೂ ಇನ್ನು ಹೆಚ್ಚು ಸಮಾಜ ಸೇವೆಯಲ್ಲಿ ಭಾಗಿಯಾಗಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

2022ರ ನವೆಂಬರ್‌ನಲ್ಲಿ ಸುಶ್ಮಿತಾ ಸೇನ್ 47ರ ವಸಂತಕ್ಕೆ ಕಾಲಿಟ್ಟರು. ಸೌಂದರ್ಯ ಮತ್ತು ಸಾಮಾಜಿಕ ಕಾರ್ಯದಿಂದ ಹೆದರುವಾಸಿಯಾಗಿದ್ದಾರೆ. ಆದರೆ ಈ ಹಿಂದೊಮ್ಮೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. 2014ರಲ್ಲಿ ಸುಶ್ಮಿಕಾ ಅಡಿಸನ್‌ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದರಂತೆ ಸುಮಾರು ನಾಲ್ಕು ವರ್ಷಗಳ ಕಾಲ ಹೋರಾಡಿದ್ದಾರೆ. ಅಡಿಸನ್‌ ಕಾಯಿಲೆ ಅಂದ್ರೆ ದೇಹದಲ್ಲಿ ಕೆಲವು ಹಾರ್ಮೋನುಗಳು ಉತ್ಪಾದಿಸುವುದನ್ನು ನಿಲ್ಲಿಸಿದಾಗ ಸಂಭವಿಸುವ ಅಸಾಮಾನ್ಯ ಅಸ್ವಸ್ಥತೆಯಾಗಿದೆ.ಈ ಸ್ಥಿತಿಯಲ್ಲಿ, ಮೂತ್ರಪಿಂಡಗಳ ಮೇಲಿರುವ ಮೂತ್ರಜನಕಾಂಗದ ಗ್ರಂಥಿಗಳು ತುಂಬಾ ಕಡಿಮೆ ಕಾರ್ಟಿಸೋಲ್ ಮತ್ತು ಅಲ್ಡೋಸ್ಟೆರಾನ್ ಅನ್ನು ಉತ್ಪಾದಿಸುತ್ತವೆ.

ಒಂಟಿಯಾಗಿರುವ ನಟಿ:

ಸುಶ್ಮಿತಾ ಸೇನ್ ಸುಮಾರು 7-10 ಜನರ ಜೊತೆ ಡೇಟಿಂಗ್ ಮಾಡಿದ್ದಾರೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.ಅದರಲ್ಲೂ ಲಲಿತ್ ಮೋದಿ ಜೊತೆ ನಿಶ್ಚಿತಾರ್ಥ ಆಗಿದೆ ಮದುವೆ ಆಗಿದೆ ಎಂದು ಗಾಸಿಪ್ ಹಬ್ಬಿದಾಗಿ ಮೊದಲ ಸಲ ಗಾಸಿಪ್‌ಗಳ ಬಗ್ಗೆ ಮಾತನಾಡಿದ್ದರು. 'ತುಂಬಾ ಸಂತೋಷವಾಗಿರುವ ಸ್ಥಾನದಲ್ಲಿರುವೆ. ಮದುವೆ ಆಗಿಲ್ಲ ಉಂಗುರ ಇಲ್ಲ. ಅಪಾರ ಪ್ರೀತಿ ಕೊಡುವ ಜನರ ನಡುವೆ ಇರುವೆ. ನಿಮಗೆಲ್ಲಾ ಸಾಕಿಷ್ಟು ಕ್ಲಾರಿಫಿಕೇಶನ್. ಈಗ ಜೀವನ ನಡೆಯಬೇಕು ಕೆಲಸ ಮುಂದುವರೆಸೆಬೇಕು. ನನ್ನ ಸಂತೋಷಗಳಲ್ಲಿ ಸದಾ ಭಾಗಿಯಾಗುವುದಕ್ಕೆ ಧನ್ಯವಾದಗಳು. ಯಾರು ಭಾಗಿಯಾಗುವುದಿಲ್ಲ ಇದು none of your business. ಏನೇ ಇರಲಿ ಐ ಲವ್‌ ಯು' ಎಂದು ಸುಶ್ಮಿತಾ ಹೇಳಿದ್ದರು.

View post on Instagram