55ನೇ ಹುಟ್ಟುಹಬ್ಬದ ಪ್ರಯುಕ್ತ ನವೆಂಬರ್‌ 4ರಂದು ಗೋವಾ ಬೀಚ್‌ನಲ್ಲಿ ಬೆತ್ತಲಾಗಿ ಓಡಿದ ನಟ ಮಿಲಿಂದ್ ಸೊಮನ್‌ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿತ್ತು. ಪರ-ವಿರೋಧಗಳ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದರೂ ಸುಮ್ಮನಿದ್ದ ಮಿಲಿಂದ್‌ ಇದೀಗ ಮೌನ ಮುರಿದಿದ್ದಾರೆ.

ಶಿವದೇವಾಲಯಕ್ಕೆ ಹೋಗ್ತಾ ದಾರಿಯುದ್ದಕ್ಕೂ ಕಸ ಹೆಕ್ಕಿ, ಸ್ವಚ್ಛ ಮಾಡಿದ್ರು ಬಾಲಿವುಡ್ ನಟ 

ಸೋಷಿಯಲ್ ಮೀಡಿಯಾದಲ್ಲಿ ಇಂಥ ಫೋಟೋಗಳನ್ನು ಪೋಸ್ಟ್‌ ಮಾಡಬಾರದು ಎಂದು ಹೇಳಿ ಮಿಲಿಂದ್ ವಿರುದ್ಧ ಎಫ್‌ಐಆರ್‌ (ಸೆಕ್ಷನ್ 294) ದಾಖಲಾಗಿತ್ತು. ಈ ವಿಚಾರವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮಿಲಿಂದ್ ಘಟನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ.

ಮಿಲಿಂದ್ ಮಾತು:
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಿಲಿಂದ್ ಹೇಳಿದ್ದು ಇಷ್ಟು, 'ಬೆತ್ತಲೆ ಫೋಟೋ ಶೋಟ್‌ ಮಾಡಿಸಿರುವವನು ಯಾರೆಂದು ಗೊತ್ತಿದ್ದರೆ ಆ ವ್ಯಕ್ತಿ ಬಗ್ಗೆ ತಿಳಿದುಕೊಳ್ಳಿ. ಅವನು ಮತ್ತೆ ಅದೇ ರೀತಿಯ ಫೋಟೋ ಶೂಟ್ ಮಾಡಿಸಲು ಚಿಂತಿಸುವುದಿಲ್ಲ. ಯಾಕೆ ಗೊತ್ತಾ? ಅವನಿಗೆ ಈ ವಿಚಾರದಲ್ಲಿ ಯಾವ ತಪ್ಪೂ ಕಾಣಿಸುವುದಿಲ್ಲ. ನಾನು ಸಾಕಷ್ಟು ಖಾಸಗಿ ಪೇಪರ್, ಮ್ಯಾಗಜಿನ್‌ಗೆ ಒಬ್ಬ ಮಾಡಲ್‌ ಆಗಿ, ಒಬ್ಬ ನಟನಾಗಿ ಸೆಕ್ಸ್‌  ದೃಶ್ಯಗಳಲ್ಲಿ ನಟಿಸಿರುವ. ಇಷ್ಟೊಂದು ಬೋಲ್ಡ್‌ ಇರುವಾಗ ನಾನ್ಯಾಕೆ ಇನ್‌ಸ್ಟಾಗ್ರಾಂನಲ್ಲಿ ನನ್ನ ನಗ್ನ ಚಿತ್ರವನ್ನು ಪೋಸ್ಟ್‌ ಮಾಡದಿರಲಿ? ನಿಮಗೆ ಇಷ್ಟ ಇಲ್ಲ ಅಂದ್ರೆ ನನ್ನನ್ನು ಫಾಲೋ ಮಾಡಬೇಡಿ,' ಎಂದು ಮಿಲಿಂದ್ ನೇರವಾಗಿಯೇ ಹೇಳಿದ್ದಾರೆ.

'ನಗ್ನತೆ ಅಪರಾಧವಾದರೆ ನಾಗಾ ಸಾಧುಗಳನ್ನು ಬಂಧಿಸಿ' ಮಿಲಿಂದ್‌ಗೆ ಪೂಜಾ ಬೆಂಬಲ! 

'ಕೆಲವರು ನನಗೆ ಮೆಸೇಜ್‌ ಮಾಡಿ, ತನ್ನ ತಾಯಿ ಇನ್‌ಸ್ಟಾಗ್ರಾಂ ಬಳಸುತ್ತಾರೆ ಎಂದಿದ್ದಾರೆ. ಅದಕ್ಕೆ ನಾನು ಹೇಳಿದೆ, ಹಾಗಿದ್ದರೆ ಆಕೆ ಕೆಲವು ಪೇಜ್‌ಗಳನ್ನು ಓಪನ್ ಮಾಡಬಾರದು ಮತ್ತು ಕೆಲವರನ್ನು ಫಾಲೋ ಮಾಡಲೇ ಬಾರದು. ಅವರಿಗೆ ತೊಂದರೆ ಆಗುತ್ತೆ ಎನ್ನುವ ಕಾರಣಕ್ಕೆ ನಾನು ನನ್ನ ಫೋಸ್ಟ್ ಹಾಕದಿರಲು ಸಾಧ್ಯವಿಲ್ಲ,' ಎಂದಿದ್ದಾರೆ.

'ಕಳೆದ ವಾರ ಜೆನಿಫರ್‌ 50ನೇ ಹುಟ್ಟುಹಬ್ಬಕ್ಕೆ ಬೆತ್ತಲೆ ಫೋಟೋ ಶೇರ್ ಮಾಡಿದ್ದರು. ಆಗ ಯಾರು ಯಾಕೆ ಏನೂ ಹೇಳಲಿಲ್ಲ? ಇವೆಲ್ಲಾ ನಿಮ್ಮ ತಲೆಯಲ್ಲಿರುವ ಅರ್ಥವಿಲ್ಲದ ವಿಚಾರ. ಪ್ರತಿ ದಿನ, ಪ್ರತಿ ಕ್ಷಣವೂ ಎಲ್ಲ ಬದಲಾಗುತ್ತಿರುತ್ತದೆ. ಇಂದಿನ ಇಂಟರ್ನೆಟ್‌ ಯುಗವೇ ಹಾಗಿದೆ. ನೀವು ಇನ್‌ಸ್ಟಾಗ್ರಾಂನಲ್ಲಿ 'Naked'ಅಂತ ಹುಡುಕಿದರೆ ಸುಮಾರು 10 ಮಿಲಿಯನ್‌ ಫೋಟೋಗಳು ಬರುತ್ತವೆ. ಅವೆಲ್ಲಾ ಯಾಕೆ ಡಿಲೀಟ್ ಆಗಿಲ್ಲ. ಅದರ ಬಗ್ಗೆ ಯಾರೂ, ಏಕೆ ದೂರು ನೀಡಿಲ್ಲ? ಎಲ್ಲವೂ ನಿಮ್ಮ ಆಯ್ಕೆ ಆಗಿರುತ್ತದೆ,' ಎಂದು ಮಿಲಿಂದ್ ಹೇಳಿದ್ದಾರೆ.