'ನಗ್ನತೆ ಅಪರಾಧವಾದರೆ ನಾಗಾ ಸಾಧುಗಳನ್ನು ಬಂಧಿಸಿ' ಮಿಲಿಂದ್‌ಗೆ ಪೂಜಾ ಬೆಂಬಲ!
ಮುಂಬೈ/ ಗೋವಾ (ನ. 09) ಮಾಡೆಲ್ ರೂಪದರ್ಶಿ ಮಿಲಿಂದ್ ಸೋಮನ್ ತಮ್ಮ ಹುಟ್ಟು ಹಬ್ಬದ ದಿನ ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡಿದ್ದು ದೊಡ್ಡ ವಿವಾದವೇ ಆಗಿದೆ. ಪರ-ವಿರೋಧದ ಅಭಿಪ್ರಾಯಗಳು ಬರುತ್ತಲೇ ಇವೆ. ಈ ನಡುವೆ ಬಾಲಿವುಡ್ ನಟಿ ಪೂಜಾ ಬೇಡಿ ಮಿಲಿಂದ್ ಪರ ಬ್ಯಾಟ್ ಬೀಸಿದ್ದಾರೆ.A bsolutely nothing obscene about @milindrunning aesthetic pic. The obscenity lies in the minds of a viewer imagining more!His crime is being good looking,famous & setting bench marks!If nudity is a crime all naga babas should be arrested. Smearing ash can't make it acceptable! pic.twitter.com/vTTAK8whIi— Pooja Bedi (@poojabeditweets) November 8, 2020

ಮಿಲಿಂದ್ ಓಟವನ್ನು ಬಣ್ಣಿಸಿರುವ ಪೂಜಾ ಅದರಲ್ಲಿ ತಪ್ಪೇನು ಇದೆ. ಓಟ ಆತನ ಸೌಂದರ್ಯದ ಪ್ರತೀಕ ಎಂದು ಟ್ವೀಟ್ ಮಾಡಿದ್ದಾರೆ.

ಮಿಲಿಂದ್ ಚಿತ್ರವನ್ನು ಟ್ವಿಟ್ಟರ್ ನಲ್ಲಿ ನಾಗಾ ಸಾಧುಗಳೊಂದಿಗೆ ಹೋಲಿಸಿ, ನೀವು ಬೂದಿ ಬಳಿದು ಕೊಂಡು ಬೆತ್ತಲೆಯಾಗಿ ತಿರುಗಿದರೆ ಯಾವುದೇ ತಪ್ಪು ಇಲ್ಲದಿರುವಾಗ, ಮಿಲಿಂದ್ ಫೋಟೋದಲ್ಲೂ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ನಗ್ನತೆ ಅಪರಾಧವಾಗಿದ್ದರೆ ಎಲ್ಲಾ ನಾಗಾ ಸಾಧುಗಳನ್ನು ಬಂಧಿಸಬೇಕು, ಬೂದಿ ಬಳಿದುಕೊಂಡು ಬಹಿರಂಗವಾಗಿ ತಿರುಗಾಡುವುದು ಸ್ವೀಕಾರಾರ್ಹವಲ್ಲ ಎಂದು ಅವರು ಟ್ವೀಟ್ ಮಾಡುತ್ತ ನಾಗಾ ಸಾಧುಗಳನ್ನು ಈ ವಿಚಾರದಲ್ಲಿ ಎಳೆದು ತಂದಿದ್ದಾರೆ.

ಏತನ್ಮಧ್ಯೆ, ಮಿಲಿಂದ್ ತಮ್ಮ 55 ನೇ ಹುಟ್ಟುಹಬ್ಬದಂದು ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡುತ್ತಿರುವುದನ್ನು ಹಂಚಿಕೊಂಡಿದ್ದರು.

ಪತ್ನಿ ಅಂಕಿತಾ ಕೊನ್ವರ್ ಸೆರೆ ಹಿಡಿದಿದ್ದ ಫೋಟೋ ಅನ್ನು "ಹ್ಯಾಪಿ ಬರ್ತ್‌ಡೇ ಟು ಮಿ 55 " ಎಂಬ ಶೀರ್ಷಿಕೆಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಮಿಲಿಂದ್ ಹಂಚಿಕೊಂಡಿದ್ದರು.

ಒತ್ತಡಗಳು ಬಂದ ಮೇಲೆ ಮಿಲಿಂದ್ ಮೇಲೆ ಗೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.