Asianet Suvarna News Asianet Suvarna News

ಮೇರಾ ಭಾರತ್ ಮಹಾನ್; ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ರಾಜಮೌಳಿ, ವಿಡಿಯೋ ವೈರಲ್

RRR ಸಿನಿಮಾ ವಿದೇಶಿ ಭಾಷೆಯ ಸಿನಿಮಾ ವಿಭಾಗದಲ್ಲಿ ವಿಮರ್ಶಕ ಆಯ್ಕೆ ಪ್ರಶಸ್ತಿ ಗೆದ್ದುಕೊಂಡಿದೆ. ಬಳಿಕ ಮಾತನಾಡಿದ ರಾಜಮೌಳಿ ಭಾಷಣ ವೈರಲ್ ಆಗಿದೆ. 

Mera Bharat Mahaan Says SS Rajamouli After RRR Big Win At Critics Choice Awards sgk
Author
First Published Jan 16, 2023, 3:41 PM IST

ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದ ನಂತರ ನಿರ್ದೇಶಕ ಎಸ್‌ಎಸ್ ರಾಜಮೌಳಿ ಸದ್ಯ ಸಂಭ್ರಮಿಸುತ್ತಿದ್ದಾರೆ. ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ.  ಆರ್ ಆರ್ ಆರ್ ಸಿನಿಮಾದ ಸಕ್ಸಸ್ ಬಳಿಕ ರಾಜಮೌಳಿ ಅಂತಾರಾಷ್ಟ್ರೀಯ ಬ್ರಾಂಡ್ ಆಗಿದ್ದಾರೆ. ಸದ್ಯ ಅಮೆರಿಕಾದಲ್ಲಿರುವ ರಾಜಮೌಳಿ ಅಂಡ್ ಟೀಂ ಸಕ್ಸಸ್ ಅನ್ನು ಆನಂದಿಸುತ್ತಿದ್ದಾರೆ. ನಾಟು ನಾಟು...ಹಾಡಿಗೆ ಗೋಲ್ಡನ್ ಗ್ಲೋಬ್ಸ್ ನಲ್ಲಿ ಪ್ರಶಸ್ತಿ ಗೆದ್ದ ಬಳಿಕ ಆರ್ ಆರ್ ಆರ್ ಮತ್ತೆರಡು ಪ್ರಶಸ್ತಿ ಬಾಚಿಕೊಂಡಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಾಜಮೌಳಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 

ಲಾಸ್ ಏಂಜಲೀಸ್‌ನಲ್ಲಿ ರಾಜಮೌಳಿ ಪ್ರಶಸ್ತಿ ಸ್ವೀಕರಿಸಿ ವಿಜೇತ ಭಾಷಣ ಮಾಡಿದ್ದಾರೆ. ರಾಜಮೌಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  'RRR ಸಿನಿಮಾ ವಿದೇಶಿ ಭಾಷೆಯ ಸಿನಿಮಾ ವಿಭಾಗದಲ್ಲಿ ವಿಮರ್ಶಕ ಆಯ್ಕೆ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಾಜಮೌಳಿ ಮೇರಾ ಭಾರತ್ ಮಹಾನ್' ಎಂದು ಹೇಳಿದ್ದಾರೆ.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್ ಎಸ್ ರಾಜಮೌಳಿ, ನನ್ನ ಜೀವನದ ಎಲ್ಲಾ ಮಹಿಳೆಯರಾದ ನನ್ನ ತಾಯಿ ರಾಜನಂದಿನಿ ನನಗೆ ಕಥೆ ಪುಸ್ತಕ, ಕಾಮಿಕ್ ಗಳನ್ನು ಓದುವಂತೆ ಹಾಗೂ ನನ್ನ ಸೃಜನಶೀಲತೆಯನ್ನು ಪ್ರೋತ್ಸಾಹಿಸಿದರು. ನನ್ನ ಸಹೋದರನ (ಕೀರವಾಣಿ) ಪತ್ನಿ ಶ್ರೀವಲ್ಲಿ ಅವರು ನನಗೆ ತಾಯಿಯಿದ್ದಂತೆ. ಅವರು ಯಾವಾಗಲೂ ನನ್ನನ್ನೂ ಉತ್ತಮ ರೀತಿಯಲ್ಲಿ ನೋಡಲು ಪ್ರೋತ್ಸಾಹಿಸುತ್ತಿದ್ದರು' ಎಂದು ಹೇಳಿದ್ದಾರೆ. 

ನನ್ನ ಪದಗಳ ಆಯ್ಕೆ ಸರಿಯಿಲ್ಲ, ಒಪ್ಪಿಕೊಳ್ಳುತ್ತೇನೆ; ಹೃತಿಕ್ ಕುರಿತು ವಿವಾದಾತ್ಮಕ ಹೇಳಿಕೆಗೆ ರಾಜಮೌಳಿ ಸ್ಪಷ್ಟನೆ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಬಾಹುಬಲಿ' ನಿರ್ದೇಶಕ ತನ್ನ ಪತ್ನಿ ಹಾಗೂ ಪುತ್ರಿಯ ಬಗ್ಗೆಯೂ ಮಾತನಾಡಿದ್ದಾರೆ. 'ನನ್ನ ಹೆಂಡತಿ ರಮಾ ನನ್ನ ಚಿತ್ರಗಳ ವಸ್ತ್ರ ವಿನ್ಯಾಸಕಿ ಆದರೆ ಅದಕ್ಕಿಂತ ಹೆಚ್ಚಾಗಿ ಅವಳು ನನ್ನ ಜೀವನದ ವಿನ್ಯಾಸಕಿ. ಅವಳು ಇಲ್ಲದಿದ್ದರೆ ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ನನ್ನ ಮಕ್ಕಳು ಅವರು ಏನನ್ನೂ ಮಾಡುವುದಿಲ್ಲ,  ಆದರೆ ನನ್ನ ಬದುಕನ್ನು ಬೆಳಗಿಸಲು ಅವರ ನಗು ಸಾಕು' ಎಂದು ಅವರು ಹೇಳಿದರು.

ಭಾಷಣದ ಕೊನೆಯಲ್ಲಿ ನಿರ್ದೇಶಕ ರಾಜಮೌಳಿ ಹೇಳಿದ ಮಾತು ವೈರಲ್ ಆಗಿದೆ. 'ಅಂತಿಮವಾಗಿ ನನ್ನ ತಾಯಿನಾಡು, ಭಾರತ, ಇಂಡಿಯಾ, ಮೇರಾ ಭಾರತ್ ಮಹಾನ್. ಜೈ ಹಿಂದ್. ಧನ್ಯವಾದಗಳು' ಎಂದು ಹೇಳಿದರು.

RRR ಬಾಲಿವುಡ್ ಸಿನಿಮಾವಲ್ಲ, ದಕ್ಷಿಣ ಭಾರತದ ತೆಲುಗು ಚಿತ್ರ; ಅಮೆರಿಕಾದಲ್ಲಿ ರಾಜಮೌಳಿ ಹೇಳಿಕೆ ವೈರಲ್

RRR ಸಿನಿಮಾ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ವಿಶ್ವಾದ್ಯಂತ ಕೋಟಿ ಕೋಟಿ ಬಾಚಿಕೊಂಡಿದೆ. 1,200 ಕೋಟಿಗೂ ಅಧಿಕ ಕೋಟಿ ಕಲೆಕ್ಷನ್ ಮಾಡಿದೆ. ಇತ್ತೀಚಿಗಷ್ಟೆ ಈ ಸಿನಿಮಾ ಜಪಾನ್ ನಲ್ಲೂ ರಿಲೀಸ್ ಆಗಿದ್ದು ಉತ್ತಮ ಪ್ರದರ್ಶನ ಕಂಡಿತ್ತು. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್‌ಗಳಾದ ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಶ್ರಿಯಾ ಸರನ್ ಕೂಡ ನಟಿಸಿದ್ದಾರೆ. 

Follow Us:
Download App:
  • android
  • ios