Asianet Suvarna News Asianet Suvarna News

ನನ್ನ ಪದಗಳ ಆಯ್ಕೆ ಸರಿಯಿಲ್ಲ, ಒಪ್ಪಿಕೊಳ್ಳುತ್ತೇನೆ; ಹೃತಿಕ್ ಕುರಿತು ವಿವಾದಾತ್ಮಕ ಹೇಳಿಕೆಗೆ ರಾಜಮೌಳಿ ಸ್ಪಷ್ಟನೆ

ಪ್ರಭಾಸ್ ಮುಂದೆ ಬಾಲಿವುಡ್ ನಟ ಹೃತಿಕ್ ರೋಷನ್ ಏನೇನು ಅಲ್ಲ ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದ ರಾಜಮೌಳಿ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬಳಸಿದ ಪದ ಸರಿ ಇಲ್ಲ ಎಂದು ರಾಜಮೌಳಿ ಹೇಳಿದ್ದಾರೆ. 

SS Rajamouli clarifies old comment about Hrithik Roshan being nothing in front of Prabhas sgk
Author
First Published Jan 15, 2023, 4:56 PM IST

ಪ್ರಭಾಸ್ ಮುಂದೆ ಬಾಲಿವುಡ್ ನಟ ಹೃತಿಕ್ ರೋಷನ್ ಏನೇನು ಅಲ್ಲ ಎಂದು ಆರ್ ಆರ್ ಆರ್ ನಿರ್ದೇಶಕ ರಾಜಮೌಳಿ ಹೇಳಿದ್ದ ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವೇದಿಕೆಯ ಮೇಲೆ ಹೃತಿಕ್ ರೋಷನ್ ಅವರನ್ನು ತೆಗಳಿದ್ದ ರಾಜಮೌಳಿ ಅವರ ಹಳೆಯ ವೈರಲ್ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. 2008ರ ವಿಡಿಯೋ ಇಗಾದಿದ್ದು ಪ್ರಭಾಸ್ ನಟನೆಯ 'ಬಿಲ್ಲಾ' ಸಿನಿಮಾದ ಟ್ರೈಲರ್ ಲಾಂಚ್ ಈವೆಂಟ್ ನಲ್ಲಿ ರಾಜಮೌಳಿ ಮಾತನಾಡಿದ್ದರು. ಟ್ರೈಲರ್ ನೋಡಿ ರಾಜಮೌಳಿ ಪ್ರಭಾಸ್ ಅವರನ್ನು ಹೊಗಳುವ ಭರದಲ್ಲಿ ಹೃತಿಕ್ ಅವರನ್ನು ತೆಗಳಿದ್ದರು. 

ಈ ಬಗ್ಗೆ ರಾಜಮೌಳಿ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಾಜಮೌಳಿ ಅವರು ಹೃತಿಕ್ ಬಗ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಯಿಟರ್ಸ್ ಜೊತೆ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಜಮೌಳಿ, ಹೃತಿಕ್ ಬಗ್ಗೆ ಹೇಳಿರುವ ಮಾತುಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಪದಗಳ ಆಯ್ಕೆ ತಪ್ಪಾಗಿದೆ ಎಂದು ರಾಜಮೌಳಿ ಹೇಳಿದ್ದಾರೆ. 'ಇದು ತುಂಬಾ ತುಂಬಾ ಹಿಂದಿನ ವಿಡಿಯೋ ಆಗಿದೆ. ಸುಮಾರು 15-16 ವರ್ಷಗಳ ಹಿಂದೆ ಎಂದು ಭಾವಿಸುತ್ತೇನೆ. ಆದರೆ ಹೌದು, ನನ್ನ ಪದಗಳ ಆಯ್ಕೆ ಸರಿ ಇಲ್ಲ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಉದ್ದೇಶ ಅವರನ್ನು ಎಂದಿಗೂ ಕೀಳಾಗಿ ನೋಡುವುದು ಆಗಿರಲಿಲ್ಲ. ನಾನು ಅವವರನ್ನು ತುಂಬಾ ಗೌರವಿಸುತ್ತೇನೆ. ಇದು ತುಂಬಾ ಹಳೆಯದು' ಎಂದು ಹೇಳಿದ್ದಾರೆ.  

ಭಾರತೀಯರಿಗಿಂತ ಜಪಾನರು RRR ಮೆಚ್ಚಿಕೊಂಡರು; ಆಸ್ಕರ್‌ ನಂತರ ವರಸೆ ಬದಲಾಯಿಸಿದ ಜ್ಯೂ. ಎನ್‌ಟಿಆರ್‌

ಬಾಹುಬಲಿ, ಆರ್ ಆರ್ ಆರ್ ಅಂಥ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಾಜಮೌಳಿಯ ಹಳೆಯ ವಿಡಿಯೋ ನೋಡಿ ಅನೇಕರು ಅಚ್ಚರಿ ಪಡುತ್ತಿದ್ದರು. ವೈರಲ್ ಆಗಿರುವ ವಿಡಿಯೋದಲ್ಲಿ ರಾಜಮೌಳಿ, 'ಎರಡು ವರ್ಷಗಳ ಹಿಂದೆ ಧೂಮ್ 2 ಬಿಡುಗಡೆಯಾದಾಗ, ಬಾಲಿವುಡ್‌ನಲ್ಲಿ ಮಾತ್ರ ಏಕೆ ಅಂತಹ ಗುಣಮಟ್ಟದ ಚಲನಚಿತ್ರಗಳನ್ನು ಮಾಡಲು ಸಾಧ್ಯ ಎಂದು ನಾನು ಆಶ್ಚರ್ಯಪಟ್ಟೆ. ಹೃತಿಕ್ ರೋಷನ್ ಅವರಂತಹ ಹೀರೋಗಳು ನಮ್ಮಲ್ಲಿ ಇಲ್ಲವೇ? ಅಂದಿಕೊಂಡಿದ್ದೆ. ಬಿಲ್ಲಾ ಚಿತ್ರದ ಹಾಡುಗಳು, ಪೋಸ್ಟರ್ ಮತ್ತು ಟ್ರೇಲರ್ ಅನ್ನು ನಾನು ಈಗಷ್ಟೇ ನೋಡಿದೆ. ನಾನು ಒಂದೇ ಒಂದು ವಿಷಯವನ್ನು ಹೇಳುತ್ತೇನೆ. ಪ್ರಭಾಸ್ ಮುಂದೆ ಹೃತಿಕ್ ರೋಷನ್ ಏನೂ ಅಲ್ಲ. ತೆಲುಗು ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ಮೆಹರ್ ರಮೇಶ್ (ನಿರ್ದೇಶಕ) ಅವರಿಗೆ ನಾನು ಧನ್ಯವಾದ ಹೇಳುತ್ತೇನೆ' ಎಂದು ಹೇಳಿದ್ದರು. ರಾಜಮೌಳಿ ಅವರ ಮಾತುಗಳು ಹೃತಿಕ್ ರೋಷನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.

ಇಂಗ್ಲಿಷರನ್ನು ಆಡಿಕೊಂಡ ನಾಟು ನಾಟುಗೆ ಜಾಗತಿಕ ಪ್ರಶಸ್ತಿ ಸಿಕ್ಕಿದ್ದು ಭಾರತೀಯರಿಗೆ ಸಂದ ಗೌರವ!

ರಾಜಮೌಳಿ ಸದ್ಯ ಗೋಲ್ಡನ್ ಗ್ಲೋಬ್ಸ್ ನಲ್ಲಿ ಮಿಂಚುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗಿದೆ. ಆರ್ ಆರ್ ಆರ್ ಸಿನಿಮಾದ ಎಂಎಂ ಕೀರವಾಣಿ ಪ್ರಶಸ್ತಿ ಎತ್ತಿಹಿಡಿದು ಸಂತಸ ಹಂಚಿಕೊಂಡಿದ್ದಾರೆ. ತೆಲುಗು ಸಿನಿಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ರಾಜಮೌಳಿ ಅವರಿಗೆ ಇಡೀ ಭಾರತೀಯ ಸಿನಿಮಾರಂಗ ಅಭಿನಂದನೆ ಸಲ್ಲಿಸುತ್ತಿದೆ. ಈ ನಡುವೆ ಹೃತಿಕ್ ಬಗ್ಗೆ ಹೇಳಿಕೆಕೆ ಪ್ರತಿಕ್ರಿಯೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.  
 

Follow Us:
Download App:
  • android
  • ios