RRR ಬಾಲಿವುಡ್ ಸಿನಿಮಾವಲ್ಲ, ದಕ್ಷಿಣ ಭಾರತದ ತೆಲುಗು ಚಿತ್ರ; ಅಮೆರಿಕಾದಲ್ಲಿ ರಾಜಮೌಳಿ ಹೇಳಿಕೆ ವೈರಲ್
ಆರ್ ಆರ್ ಆರ್ ಬಾಲಿವುಡ್ ಸಿನಿಮಾವಲ್ಲ ದಕ್ಷಿಣ ಭಾರತದ ತೆಲುಗು ಸಿನಿಮಾ ಎಂದು ರಾಜಮೌಳಿ ಅಮೆರಿಕಾದ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.
ಎಸ್ ಎಸ್ ರಾಜಮೌಳಿ, ತೆಲುಗು ಸಿನಿಮಾರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಬಾಹುಬಲಿ ಸೀರಿಸ್ ಹಾಗು ಆರ್ ಆರ್ ಆರ್ ಸಿನಿಮಾ ಮೂಲಕ ರಾಜಮೌಳಿ ವಿಶ್ವಾದ್ಯಂತ ಸದ್ದು ಮಾಡುತ್ತಿದ್ದಾರೆ. ಭಾರತೀಯ ಸಿನಿಮಾರಂಗ ಎಂದರೆ ಬಾಲಿವುಡ್ ಮಾತ್ರ ಎನ್ನುವ ಪರಿಕಲ್ಪನೆಯನ್ನು ರಾಜಮೌಳಿ ಬದಲಾಯಿಸಿದ್ದಾರೆ. ಭಾರತದಲ್ಲಿ ಬೇರೆ ಬೇರೆ ಭಾಷೆಯ ಸಿನಿಮಾಗಳು ಇವೆ, ದಕ್ಷಿಣ ಭಾರತದ ಸಿನಿಮಾರಂಗದಿಂದನೂ ಉತ್ತಮ ಸಿನಿಮಾಗಳು ಬರ್ತಿವೆ ಎನ್ನುವುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿಕೊಟ್ಟಿದ್ದಾರೆ. ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ಈಗ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು...ಹಾಡಿಗೆ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್ ಸಿನಿಮಾ ಅಂತಾರಾಷ್ಟ್ರೀಯ ಬ್ರಾಂಡ್ ಆಗಿ ಹೊರಹೊಮ್ಮಿದ್ದಾರೆ. ಅಮೆರಿಕಾದ ಸ್ಕ್ರೀನಿಂಗ್ ಸಮಯದಲ್ಲಿ ರಾಜಮೌಳಿ ತಮ್ಮ ಕನಸಿನ ಯೋಜನೆಯಲ್ಲಿ ಹಾಡುಗಳನ್ನು ಹೇಗೆ ಬಳಸಿದರು ಎಂಬುದರ ಕುರಿತು ಮಾತನಾಡಿದ್ದಾರೆ. ಮಾದ್ಯಮ ಸಂವಾದಲ್ಲಿ ಮಾತನಾಡಿದ ರಾಜಮೌಳಿ, ಆರ್ ಆರ್ ಆರ್ ಬಾಲಿವುಡ್ ಸಿನಿಮಾವಲ್ಲ ಎಂದು ಒತ್ತಿ ಹೇಳಿದ್ದಾರೆ. ಬಾಲಿವುಡ್ ಸಿನಿಮಾಗಳ ಹಾಡಿಗಿಂತ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ.
RRR ತಂಡದಲ್ಲಿ ಎಲ್ಲವೂ ಸರಿಯಿಲ್ಲ; ನಿರ್ಮಾಪಕರನ್ನು ದೂರ ಇಟ್ಟಿದ್ದೇಕೆ ರಾಜಮೌಳಿ ಮತ್ತು ತಂಡ?
ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ನಿರ್ದೇಶಕ ರಾಜಮೌಳಿ, 'ಆರ್‌ಆರ್‌ಆರ್ ಬಾಲಿವುಡ್ ಚಿತ್ರವಲ್ಲ. ಇದು ದಕ್ಷಿಣ ಭಾರತದ ತೆಲುಗು ಚಿತ್ರ. ಆದರೆ ಚಿತ್ರವನ್ನು ನಿಲ್ಲಿಸಿ ಸಂಗೀತ ಮತ್ತು ನೃತ್ಯದ ತುಣುಕನ್ನು ನೀಡುವುದಕ್ಕಿಂತ ಕಥೆಯನ್ನು ಮುಂದಕ್ಕೆ ಸಾಗಿಸಲು ನಾನು ಹಾಡನ್ನು ಬಳಸುತ್ತೇನೆ. ಕಥೆಯನ್ನು ಮುಂದಕ್ಕೆ ಕೊಂಡೊಯ್ಯಲು ಬಳಸುತ್ತೇನೆ' ಎಂದು ಹೇಳಿದರು. ರಾಜಮೌಳಿ ಅವರ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೌತ್ ಅಭಿಮಾನಿಗಳು ರಾಜಮೌಳಿ ಹೇಳಿಕೆಯನ್ನು ಮೆಚ್ಚಿಕೊಂಡಿದ್ದಾರೆ.
ಭಾರತೀಯರಿಗಿಂತ ಜಪಾನರು RRR ಮೆಚ್ಚಿಕೊಂಡರು; ಆಸ್ಕರ್ ನಂತರ ವರಸೆ ಬದಲಾಯಿಸಿದ ಜ್ಯೂ. ಎನ್‌ಟಿಆರ್
RRR ಚಿತ್ರದ ಬಗ್ಗೆ
ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಅಲಿಯಾ ಭಟ್ ನಟಿಸಿದ್ದರು. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದ್ದ ಈ ಸಿನಿಮಾ ಇದೀಗ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ಸದ್ಯ ಈ ಸಿನಿಮಾ ಆಸ್ಕರ್ ರೇಸ್ ನಲ್ಲಿಯ ಸ್ಪರ್ಧೆಗಿಳಿದಿದೆ. ಸದ್ಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದಿರುವ ಆರ್ ಆರ್ ಆರ್ ಆಸ್ಕರ್ ಮೇಲೆ ಕಣ್ಣಿಟ್ಟಿದೆ.