Asianet Suvarna News Asianet Suvarna News

ಡಂಕಿಯಲ್ಲಿ ಸೆಕ್ಸ್​-ಗಿಕ್ಸ್​ ಇಲ್ಲಾ ತಾನೆ- ಅಪ್ಪನೊಟ್ಟಿಗೆ ನೋಡ್ಬೋದಾ? ನೆಟ್ಟಿಗನ ಪ್ರಶ್ನೆಗೆ ಶಾರುಖ್​ ಹೇಳಿದ್ದೇನು?

ಡಂಕಿಯಲ್ಲಿ  ಸೆಕ್ಸ್​ ದೃಶ್ಯಗಳೇನಾದರೂ ಇವೆಯೇ ಎಂಬ ನೆಟ್ಟಿಗನ ಪ್ರಶ್ನೆಗೆ ನಟ ಶಾರುಖ್​ ಖಾನ್​ ಹೇಳಿದ್ದೇನು?
 

Fan asks SRK if theres sax sux in Dunki His reply will leave you in splits suc
Author
First Published Dec 8, 2023, 12:23 PM IST

ಪಠಾಣ್​, ಜವಾನ್​ ಯಶಸ್ಸಿನ ಬಳಿಕ ಶಾರುಖ್​ ಖಾನ್​ ಅವರ ಮೂರನೆಯ ಚಿತ್ರ ಡಂಕಿಯ ಯಶಸ್ಸಿನ ಹಾದಿಯಲ್ಲಿದ್ದಾರೆ. ಹ್ಯಾಟ್ರಿಕ್​ ಹೀರೋ ಆಗುವ ಎಲ್ಲಾ ಸೂಚನೆಗಳೂ ಕಾಣುತ್ತಿವೆ ಎಂದು ಫ್ಯಾನ್ಸ್​ ಅಂದುಕೊಳ್ಳುತ್ತಿದ್ದು, ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಡಂಕಿಯ ಟ್ರೇಲರ್​ ಡಿಸೆಂಬರ್​ 7ರಂದು ರಿಲೀಸ್​ ಆಗಿದೆ. ಕಳೆದ ನವೆಂಬರ್​ 2ರಂದು ಶಾರುಖ್​ ಅವವರ ಹುಟ್ಟುಹಬ್ಬದಂದು  ಟೀಸರ್​ ರಿಲೀಸ್​ ಆಗಿತ್ತು. ಟೀಸರ್ ಕೈಬಿಟ್ಟ ನಂತರ, ಶಾರುಖ್ ಖಾನ್ ಅವರ ಅಭಿಮಾನಿಗಳು ಅದರ ಬಗ್ಗೆ ಉತ್ಸುಕರಾಗಿದ್ದರು.  ಇದೀಗ ಟ್ರೇಲರ್​ ಬಿಡುಗಡೆಯಾದ ಬಳಿಕವಂತೂ ಚಿತ್ರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಠಾಣ್​ ಮತ್ತು ಜವಾನ್ ನಂತರ ನಟನ ಮುಂದಿನ ಬ್ಲಾಕ್​ಬಸ್ಟರ್​ ಚಿತ್ರ ಡಂಕಿ ಎಂದೇ ಎಲ್ಲೆಡೆ ಹೇಳಲಾಗುತ್ತಿದೆ.  ಶಾರುಖ್ ಖಾನ್ ಅವರ ಹಿಂದಿನ ಚಿತ್ರಗಳಾದ ಪಠಾಣ್​ ಮತ್ತು ಜವಾನ್ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿವೆ.  ಪಠಾಣ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,055 ಕೋಟಿ ಗಳಿಸಿದರೆ, ಜವಾನ್ ವಿಶ್ವಾದ್ಯಂತ ಒಟ್ಟು 1,149.85 ಕೋಟಿ ಗಳಿಸಿದೆ. ಬಾಲಿವುಡ್​ನ ವಿವಾದಾತ್ಮಕ ವಿಮರ್ಶಕ ಎಂದು ಕರೆಸಿಕೊಳ್ಳುತ್ತಿರುವ ಕೆಆರ್​ಕೆ ಸೇರಿದಂತೆ ಹಲವರು ಇನ್ನೊಂದು ಸಾವಿರ ಕೋಟಿ ಫಿಕ್ಸ್​ ಎಂದು ಹೇಳುತ್ತಿದ್ದಾರೆ. 

 ಡಂಕಿ ಚಿತ್ರದ ಟೀಸರ್​ನಲ್ಲಿ  ಶಾರುಖ್ ಪಾತ್ರದ ಪರಿಚಯ ಇತ್ತು. ಹಾರ್ಡಿ ಅನ್ನೋದು ಶಾರುಖ್ ಪಾತ್ರದ ಹೆಸರಾಗಿದೆ. ಹಾರ್ಡಿ ತನ್ನ ಗೆಳೆಯರ ಬಗ್ಗೆ ಇರೋ ಪ್ರೀತಿಯನ್ನ ಇಲ್ಲಿ ವ್ಯಕ್ತಪಡಿಸುತ್ತಾನೆ. ಜೊತೆಗೆ ತಮ್ಮ ಗುಂಪಿನಲ್ಲಿರೋ ಮನು ಹೆಸರಿನ ಪಾತ್ರಧಾರಿ ತಾಪ್ಸಿ ಪನ್ನು ಬಗ್ಗೆನೂ ಹೇಳ್ತಾನೆ. ಇದು ಪಂಜಾಬ್​ನ ಕಥೆಯಾಗಿದೆ.  ಹಾರ್ಡಿ (ಶಾರುಖ್​ ಖಾನ್) ಮತ್ತು ಅವನ ಸ್ನೇಹಿತರಾದ ಮನು, ಸುಖಿ, ಬುಗ್ಗು ಮತ್ತು ಬಲ್ಲಿ ಅವರ ಪ್ರಪಂಚವನ್ನು ಇದು ತಿಳಿಸುತ್ತದೆ.  ಮನು ಮತ್ತು ಸುಖಿ ಪಾತ್ರಗಳನ್ನು ಕ್ರಮವಾಗಿ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ನಿರ್ವಹಿಸಿದ್ದಾರೆ.  ಇದರ ನಡುವೆಯೇ, ಶಾರುಖ್​ ತಮ್ಮ ಎಕ್ಸ್​ ಖಾತೆಯಲ್ಲಿ #asksrk ಪ್ರಶ್ನೋತ್ತರ ಮಾಲಿಕೆ ಮುಂದುವರೆಸಿದ್ದಾರೆ. ಪಠಾಣ್​ ಸಮಯದಲ್ಲಿ ಶುರುವಾಗಿರುವ ಈ ಪ್ರಶ್ನೋತ್ತರ ಸೆಷನ್​ನಲ್ಲಿ ಇದಾಗಲೇ ಸಹಸ್ರಾರು ಫ್ಯಾನ್ಸ್​ ಶಾರುಖ್​ ಅವರಿಗೆ ಪ್ರಶ್ನೆ ಕೇಳಿದ್ದು, ಹಲವು ಪ್ರಶ್ನೆಗಳಿಗೆ ಶಾರುಖ್​ ಉತ್ತರಿಸಿದ್ದಾರೆ.

ನೆಟ್ಟಿಗನ ಪ್ರಶ್ನೆಗೆ ಶಾರುಖ್​ ಫುಲ್​ ಗರಂ! ಲೂಸ್​ ಮೋಷನ್​ ಔಷಧ ಕಳಿಸಿಕೊಡ್ತೇನೆ ಎಂದ ನಟ: ಆಗಿದ್ದೇನು?

ಇದೀಗ ತರ್ಲೆ ಫ್ಯಾನ್​ ಒಬ್ಬ, ನಿಮ್ಮ ಡಂಕಿ ಚಿತ್ರದಲ್ಲಿ ಪಂಜಾಬಿ ಭಾಷೆಯಲ್ಲಿ ಲೈಂಗಿಕ ದೃಶ್ಯಗಳಿವೆಯೇ ಎಂದು ಕೇಳಿದ್ದಾನೆ. ಆತ ಕೇಳಿದ್ದು, ಡಂಕಿ ಚಿತ್ರದಲ್ಲಿ ಏನಾದರೂ 'ಸ್ಯಾಕ್ಸ್-ಸಕ್ಸ್' ದೃಶ್ಯಗಳವೆಯೇ? ಯಾಕೆಂದ್ರೆ ನಾನು ಅಪ್ಪನ ಜೊತೆ ಚಿತ್ರ ನೋಡಬೇಕು ಅದಕ್ಕೇ ಎಂದು ಕೇಳಿದ್ದಾನೆ. ಸ್ಯಾಕ್ಸ್​-ಸಕ್ಸ್​ ಎನ್ನುವುದು ಏನು ಎಂದು ಅದನ್ನು ಓದಿದವರಿಗೆ ಎಲ್ಲರಿಗೂ ಅರ್ಥವಾಗಿದೆ. ಇನ್ನು ಶಾರುಖ್​ ಅವರಿಗೆ ಅರ್ಥವಾಗದೇ ಇರುತ್ತದೆಯೆ? ಆದರೂ ಪ್ರಶ್ನೆ ನೇರಾನೇರ ಇಲ್ಲದ ಹಿನ್ನೆಲೆಯಲ್ಲಿ ಶಾರುಖ್​ ಖಾನ್​ ಕೂಡ ತಮ್ಮ ಎಂದಿನ ಹಾಸ್ಯದ ರೂಪದಲ್ಲಿ ಉತ್ತರ ಕೊಟ್ಟಿದ್ದಾರೆ. ಅದೇನೆಂದರೆ,   "ಸರ್  ಸ್ಯಾಕ್ಸ್ ಸಕ್ಸ್ ಅಂದ್ರೆ ಏನೆಂದು ಗೊತ್ತಾಗಲಿಲ್ಲ. ಆದರೆ, ಟಿಕೆಟ್​ಗೆ ಮಾತ್ರ ಟ್ಯಾಕ್ಸ್, ಟಕ್ಸ್​ ಎಲ್ಲಾ ಇದೆ. ಅಪ್ಪನನ್ನು ಕೇಳಿ ಪಡೆದುಕೊಂಡು ಚಿತ್ರ ನೋಡಿ ಎಂದಿದ್ದಾರೆ. ಶಾರುಖ್​ ಅವರ ಈ ತಮಾಷೆಗೆ ಉತ್ತರಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಕಿಂಗ್​ ಖಾನ್​ ಎಂದ್ರೆ ಸುಮ್ಮನೇನಾ ಅಂತಿದ್ದಾರೆ. 

ನಿನ್ನೆಯಷ್ಟೇ ಓರ್ವ ನೆಟ್ಟಿಗನನ್ನು ಶಾರುಖ್​ ತರಾಟೆಗೆ ತೆಗೆದುಕೊಂಡಿದ್ದರು. ನೆಟ್ಟಿಗನೊಬ್ಬ ಪಠಾಣ್​ ಮತ್ತು ಜವಾನ್​ ಚಿತ್ರವನ್ನು ಮಲಕ್ಕೆ ಹೋಲಿಸಿ, ಅದರಲ್ಲಿ ನಿಮ್ಮ ಪರಿಶ್ರಮವಿಲ್ಲ, ಪಿಆರ್​ ಪರಿಶ್ರಮವಿದೆ ಎಂದಿದ್ದರು. ಚಿತ್ರದಲ್ಲಿ ತಮ್ಮ ಪರಿಶ್ರಮ ಇಲ್ಲ ಎನ್ನುವ ಮಾತು ಕೇಳುತ್ತಿದ್ದಂತೆಯೇ ಶಾರುಖ್​ ಅವರಿಗೆ ಉರಿ ಹೊತ್ತಿಕೊಂಡಿದೆ. ಇದಕ್ಕಾಗಿ ಈ ಪ್ರಶ್ನೆಗೆ ಸ್ವಲ್ಪ ಗರಂ ಆಗಿಯೇ ಉತ್ತರಿಸಿರುವ ಅವರು, ಚಿತ್ರಗಳನ್ನು ಮಲಕ್ಕೆ ಹೋಲಿಸಿರುವ ಕಾರಣ, ನಿಮಗೆ ಲೂಸ್​ ಮೋಷನ್​ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಎನಿಸುತ್ತದೆ. ಅದಲ್ಲೆ ಟ್ರೀಟ್​ಮೆಂಟ್​ ತೆಗೆದುಕೊಳ್ಳಿ. ನಿಮಗೆ ಬೇಕಿದ್ದರೆ ನಮ್ಮ ಪಿಆರ್​ ಟೀಂ ಕಡೆಯಿಂದ ಲೂಸ್​ ಮೋಷನ್ ಔಷಧ ಕಳಿಸಿಕೊಡುತ್ತೇನೆ ಎಂದಿದ್ದರು. 

ಬ್ಲೂ ಫಿಲ್ಮ್ಂ ಕೇಸ್​ನಲ್ಲಿ ಸಿಕ್ಕಿಬಿದ್ದ ಶಿಲ್ಪಾ ಪತಿ ರಾಜ್​ ಕುಂದ್ರಾರ ತನಿಖಾಧಿಕಾರಿಗಳಿಂದ ಹೊಸ ವಿಷಯ ಬಯಲು!
 

Follow Us:
Download App:
  • android
  • ios