Asianet Suvarna News

ಮೆಗಾ ಸ್ಟಾರ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನವಾಜುದ್ಧೀನ್ ಸಿದ್ಧಿಕಿ!

ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟ ನವಾಜುದ್ಧೀನ್ ಸಿದ್ಧಿಕಿ.  'ಆಚಾರ್ಯ' ಸಿನಿಮಾದಲ್ಲಿ ದೊಡ್ಡ ಸ್ಟಾರ್‌ಗಳ ಬಳಗ.

Nawazuddin Siddiqui to star in Chiranjeevi Acharya film vcs
Author
Bangalore, First Published Jul 1, 2021, 12:06 PM IST
  • Facebook
  • Twitter
  • Whatsapp

ದೊಡ್ಡ ಸ್ಟಾರ್ ನಟ-ನಟಿಯರು ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕೆಲವೊಮ್ಮೆ ಸ್ನೇಹಕ್ಕೆ ಬಂದು ಸಿನಿಮಾ ಮಾಡಿಕೊಡುತ್ತಾರೆ. ಬಾಲಿವುಡ್‌ನಿಂದ ಹಲವಾರು ನಟರು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ನಟ ನವಾಜುದ್ಧೀನ್‌ ಸಿದ್ಧಿಕಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರದ ಮೂಲಕ ಎಂಬುವುದು ಮತ್ತೊಂದು ವಿಶೇಷ.  ಪ್ರಮುಖ ಪಾತ್ರದ ಮೂಲಕ ಚಿರಂಜೀವಿ ಎದುರು ಕಾಣಿಸಿಕೊಳ್ಳಲಿದ್ದಾರೆ.  ನವಾಜುದ್ಧೀನ್ ಪಾತ್ರದ ಬಗ್ಗೆ ಹೆಚ್ಚು ರಿವೀಲ್ ಮಾಡಿಲ್ಲ, ಸಿನಿಮಾ ಬಿಡುಗಡೆ ಮಾಡುವವರೆಗೂ ಸರ್ಪ್ರೈಸ್ ಆಗಿಡುವುದಕ್ಕೆ ತಂಡ ಪ್ಲಾನ್ ಮಾಡುತ್ತಿದೆ.

ತಮಿಳು 'ಪೇಟಾ' ಸಿನಿಮಾದಲ್ಲಿ ಕಳನಟನಾಗಿ ಕಾಣಿಸಿಕೊಂಡಿರುವ ನವಾಜುದ್ಧೀನ್‌ಗೆ ಇದು ಮೊದಲ ತೆಲುಗು ಸಿನಿಮಾ. 'ಆಚಾರ್ಯ' ಸಿನಿಮಾದಲ್ಲಿ ದೊಡ್ಡ ಸ್ಟಾರ್ ಬಳಗವಿದೆ.  ಚಿರಂಜೀವಿ ಜೊತೆ ರಾಮ್‌ ಚರಣ ತೇಜ, ಸೋನು ಸೂದ್, ಕಾಜಲ್, ಪೂಜಾ ಹೆಗ್ಡೆ ಮತ್ತು ನವಾಜುದ್ಧೀನ್ ಅಭಿನಯಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಅಭಿಮಾನಿಗಳಿಗೂ ಭರವಸೆ ಹೆಚ್ಚಾಗಿದೆ. 

ಮೆಗಾ ಸ್ಟಾರ್ ಚಿರಂಜೀವಿ 'ಆಚಾರ್ಯ' ರಿಲೀಸ್ ಡೇಟ್‌ ಮುಂದೂಡಿಕೆ! 

ಚಿರಂಜೀವಿ 'ಸೈರಾ ನರಸಿಂಹಾ ರೆಡ್ಡಿ' ಸಿನಿಮಾದಲ್ಲಿ ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದರು. ಚಿರಂಜೀವಿ ಸಿನಿಮಾ ಆಂದ್ಮೇಲೆ ಪರಭಾಷೆಯ ಸ್ಟಾರ್‌ಗಳು ಇದ್ದೇ ಇರುತ್ತಾರೆ.

Follow Us:
Download App:
  • android
  • ios