ಭಾರೀ ನಿರೀಕ್ಷೆ ಮೂಡಿಸಿರುವ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದಲ್ಲಿ ಬಾಹುಬಲಿ ನಟ ರಾಮನಾಗಿ ನಟಿಸಲಿದ್ದಾರೆ. ಹಾಗಾದ್ರೆ ಇನ್ನೊಂದು ಪ್ರಮುಖ ಪಾತ್ರ ಲಕ್ಷ್ಮಣನಾಗಿ ನಟಿಸೋದ್ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು.

ಓಂ ರಾವತ್ ನಿರ್ದೇಶನದ ಸಿನಿಮಾ ಆದಿಪುರುಷ್ ಈಗಾಗಲೇ ಸಾಕಷ್ಟು ಹವಾ ಸೃಷ್ಟಿಸಿದೆ. ರಾಮ ಇದ್ದಾನೆ ಅಂದ ಮೇಲೆ ಲಕ್ಷ್ಮಣ ಇರಲೇ ಬೇಕಲ್ಲ..? ಹಾಗಾದ್ರೆ ಲಕ್ಷ್ಮಣನ ಪಾತ್ರ ಮಾಡೋರ್ಯಾರು...?

ಪತ್ನಿ ಪಾರ್ಟಿ ಮಾಡೋವಾಗ ತನ್ನ ಮಗಳ ಜೊತೆ, ಪತ್ನಿ ಫ್ರೆಂಡ್ಸ್ ಮಕ್ಕಳನ್ನೂ ಒಬ್ರೇ ನೋಡ್ಕೊಳ್ತಿದ್ರು ಶಾರೂಖ್

ಸೋನು ಕಿ ಟಿಟು ಕಿ ಸ್ವೀಟಿ ಸಿನಿಮಾ ಮೂಲಕ ಪರಿಚಯವಾದ ನಟ ಸನ್ನಿ ಸಿಂಗ್ ಪ್ರಭಾಸ್ ಜೊತೆ ಲಕ್ಷ್ಮಣನಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನಾಗಿ ನಟಿಸುತ್ತಿದ್ದು, ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಲಕ್ಷ್ಮಣನಾಗಿ ಅಭಿನಯಿಸೋಕೆ ಒಪ್ಪಿಕೊಂಡಿದ್ದಾರೆ ಸನ್ನಿ ಸಿಂಗ್.

ಈವರೆಗೂ ಸಿನಿಮಾ ಪಾತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಸಿನಿಮಾದ ಉಳಿದ ಪ್ರಮುಖ ಪಾತ್ರಗಳ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಸಿನಿಮಾ 2022ರಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಪ್ರಭಾಸ್ ರಾಧೇಶ್ಯಾಮ್ ಶೂಟಿಂಗ್ ಕೊನೆಯ ಹಂತಕ್ಕೆ ತಲುಪಿದ್ದು, ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನೂ ಭೇಟಿಯಾಗಿದ್ದಾರೆ.