ಶಾರೂಖ್‌ ಖಾನ್‌ಗೆ ಮಕ್ಕಳ ಜೊತೆ ಒಂದು ಸುಂದರ ನಂಟಿದೆ. ಸೂಪರ್ ಸ್ಟಾರ್ ಆಗಿರೋದರ ಜೊತೆಗೆ ನಟ ಯಾವಾಗಲೂ ಫ್ಯಾಮಿಲಿಗೆ ಸಮಯ ಕೊಡುತ್ತಾರೆ. ಪತ್ನಿ ಗೌರಿ ಖಾನ್ ಗೆಳತಿಯರ ಜೊತೆ ಲಂಡನ್‌ನಲ್ಲಿ ಪಾರ್ಟಿ ಮಾಡೋವಾಗ ತನ್ನ ಮಗಳು ಸುಹಾನಾ ಜೊತೆ ಪತ್ನಿಯ ಗೆಳತಿಯ ಮಕ್ಕಳನ್ನು ಶಾರೂಖ್ ನೋಡಿಕೊಂಡಿದ್ರು ಗೊತ್ತಾ..?

ಹೌದು. ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಇದನ್ನು ರಿಯಾಲಿಟಿ ಶೋ ಒಂದರಲ್ಲಿ ರಿವೀಲ್ ಮಾಡಿದ್ರು. ತಾನು, ಗೌರಿ ಖಾನ್, ಭಾವನಾ ಪಾಂಡೆ ನೀಲಂ ಕೊಥಾರೆ ಮತ್ತು ಉಳಿದವರು ಲಂಡನ್‌ನಲ್ಲಿ ಪಾರ್ಟಿ ಮಾಡುವಾಗ ಮಕ್ಕಳನ್ನು ಶಾರೂಖ್ ಖಾನ್ ನೋಡ್ಕೊಳ್ತಿದ್ರು ಎಂದಿದ್ದಾರೆ ಈಕೆ. ನಾವೆಲ್ಲರೂ ಚಿಂತೆ ಇಲ್ಲದೆ ಮಕ್ಕಳನ್ನು ಶಾರೂಖ್ ಹತ್ರ ಬಿಟ್ಟು ಬಂದ್ವಿ ಎಂದಿದ್ದಾರೆ ಆಕೆ.

ಗೌರಿಗೆ ಬುರ್ಖಾ ಧರಿಸಿ ಆಯೆಷಾ ಎಂದು ಹೆಸರು ಬದಲಾಯಿಸಲು ಹೇಳಿದ ಶಾರುಖ್!

ಹಿಂದಿನ ಘಟನೆ ಬಗ್ಗೆ ಹೇಳಿದ ಮಹೀಪ್ ಅವರು ಹಿಂದಿರುಗಿ ಬಂದಾಗ ಶನಾಯ ಅಳುತ್ತಿದ್ದಳಂತೆ. ಅಮ್ಮಂದಿರು ಬಂದ ಕಾರಣ ಈ ಪುಟ್ಟ ಮಕ್ಕಳು ಶಾರೂಖ್‌ನನ್ನು ಬಿಟ್ಟು ಒಂದು ದಿನ ಮುಂಚಿತವಾಗಿ ಹೋಗಬೇಕಿತ್ತು.

ಶಾರೂಖ್ ಮಕ್ಕಳನ್ನು ಶಾಪಿಂಗ್‌ಗೆ ಕರೆದೊಯ್ಯುತ್ತಿದ್ದರು. ಶನಾಯಾಳನ್ನು ಒಂದು ಶಾಪ್‌ಗೆ ಕರೆದೊಯ್ದು ಏನು ಬೇಕು ಎಂದಾಗ ಡಾಲ್ ಕೇಳಿದ್ದಳಾಕೆ. ಶನಾಯ ಹಿಂದಿರುಗಿ ಹೋದರೂ ಆಕೆಗಾಗಿ ಡಾಲ್ ಕೊಂಡು ಕಳುಹಿಸಿದ್ದರು ಶಾರೂಖ್

ಶಾರೂಖ್ ಖಾನ್‌ನ ಲಂಡನ್‌ನ ಮನೆ ಬೇಕು ಎಂದ ಕರೀನಾ ಕಪೂರ್..!

ಸುಹಾನಾ ಖಾನ್, ಅನನ್ಯಾ ಪಾಂಡೆ, ಶನಾಯಾ ಕಪೂರ್ ಬಾಲ್ಯದಿಂದಲೂ ಬೆಸ್ಟ್ ಫ್ರೆಂಡ್ಸ್. ಕೆಲವೊಂದು ಬಾರಿ ಬಾಲ್ಯದ ಫೋಟೋ ಶೇರ್ ಮಾಡ್ಕೊಳ್ತಾರೆ ಈ ಸೆಲೆಬ್ರಿಟಿ ಕಿಡ್ಸ್. ಅನನ್ಯಾ ಈಗಾಗಲೇ ಮೂರು ಸಿನಿಮಾ ಮಾಡಿದ್ದು, ಸುಹಾನಾ ಮತ್ತು ಶನಾಯಾ ಬಾಲಿವುಡ್ ಎಂಟ್ರಿ ಮಾಡಬೇಕಷ್ಟೆ