ಭಾರಿ ವಿರೋದದ ಬಳಿಕ ವಿವಾದಾತ್ಮಕ ಡೈಲಾಗ್‌ಗೆ ಕತ್ತರಿ: 'ಆದಿಪುರುಷ್' ತಂಡದ ಮಹತ್ವದ ನಿರ್ಧಾರ
ಭಾರಿ ವಿರೋದದ ಬಳಿಕ ಆದಿಪುರುಷ್ ವಿವಾದಾತ್ಮಕ ಡೈಲಾಗ್‌ಗೆ ಕತ್ತರಿ ಹಾಕುವುದಾಗಿ ಆದಿಪುರುಷ್ ಸಿನಿಮಾತಂಡ ಬಹಿರಂಗ ಪಡಿಸಿದೆ.
ಆದಿಪುರುಷ್ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಜೂನ್ 16ಕ್ಕೆ ಆದುಪುರುಷ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಸೀತೆಯಾಗಿ ಕೃತಿ ಸನೊನ್ ಮಿಂಚಿದ್ದಾರೆ. ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿನಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾದ ಡೈಲಾಗ್ಸ್, ವಿಎಕ್ಸ್‌ಎಫ್, ನಿರ್ದೇಶನಕ ಸೇರಿದಂತೆ ಅನೇತಕ ವಿಚಾಗಳಿಗೆ ಟೀಕೆ ವ್ಯಕ್ತವಾಗುತ್ತಿದೆ. ಆದಿಪುರುಷ್ ಡಿಸಾಸ್ಟರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಕೆಲವು ಡೈಲಾಗ್‌ಗಳು ವಿವಾದಕ್ಕೆ ಎಡೆಮಾಡಿ ಕೊಟ್ಟಿವೆ. ಸಿನಿಮಾದಿಂದ ತೆಗೆದು ಹಾಕಬೇಕೆಂದು ಒತ್ತಾಯ ಕೇಳಿಬಂದಿತ್ತು.
ಭಾರಿ ವಿವಾದಗಳ ಬಳಿಕ ಇದೀಗ ಸಿನಿಮಾದಿಂದ ವಿವಾದಾತ್ಮಕ ಡೈಲಾಗ್ಸ್ ತೆಗೆಯುವುದಾಗಿ ಸಂಭಾಷಣಗಾರ ಮನೋಜ್ ಮಂತಶೀರ್ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಶೇರ್ ಮಾಡಿದ್ದಾರೆ. ಬಳಿಕ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಅಭಿಮಾನಿಗಳ ಹೃದಯ ನೋಯಿಸುವ ಅಥವಾ ಅವರ ಭಾವನೆಗಳನ್ನು ನೋಯಿಸುವ ಎಲ್ಲಾ ಡೈಲಾಗ್‌ಗಳನ್ನು ಕೆಲವೇ ದಿನಗಳಲ್ಲಿ ಬದಲಾಯಿಸಲಾಗುವುದು ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
'ರಾಮಕಥೆಯಿಂದ ಕಲಿಯಬಹುದಾದ ಮೊದಲ ಪಾಠವೆಂದರೆ ಪ್ರತಿಯೊಂದು ಭಾವನೆಯನ್ನು ಗೌರವಿಸುವುದು. ಸರಿ ಅಥವಾ ತಪ್ಪು, ಸಮಯ ಬದಲಾಗುತ್ತದೆ, ಭಾವನೆ ಉಳಿದಿದೆ. ನಾನು ಆದಿಪುರುಷನಲ್ಲಿ 4000 ಕ್ಕೂ ಹೆಚ್ಚು ಸಾಲುಗಳ ಸಂಭಾಷಣೆಗಳನ್ನು ಬರೆದಿದ್ದೇನೆ, 5 ಸಾಲುಗಳಲ್ಲಿ ಕೆಲವರ ಭಾವನೆಗಳಿಗೆ ಧಕ್ಕಿಯಾಗಿದೆ' ಎಂದು ಹೇಳಿದ್ದಾರೆ.
ಈ ಚಿತ್ರದಲ್ಲಿ ಮನೋಜ್ 4000 ಕ್ಕೂ ಹೆಚ್ಚು ಸಂಭಾಷಣೆಗಳನ್ನು ಬರೆದಿದ್ದಾರೆ. ಆದರೆ ಅವರು ಬರೆದಿರುವ 5 ಡೈಲಾಗ್‌ಗಳಿಗೆ ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವಾರದೊಳಗೆ ಈ ಡೈಲಾಗ್‌ಗಳನ್ನು ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ.
Sonal Chauhan: ಆದಿಪುರುಷ್ನ ಎರಡೇ ದೃಶ್ಯಕ್ಕೆ 'ಮಂಡೋದರಿ'ಗೆ ಈ ಪರಿ ಸಂಭಾವನೆಯಾ?
ರಾಮಾಯಣವನ್ನು ಸಿನಿಮಾ ಮಾಡಿಲ್ಲ ಎಂದಿದ್ದ ಮನೋಜ್
‘ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್ಕ್ಲೈಮರ್ನಲ್ಲೂ ನಾವು ಅದನ್ನೇ ಹೇಳಿದ್ದೇವೆ’ ಎಂದು ಮನೋಜ್ ಮುಂತಶೀರ್ ಹೇಳಿರುವುದಾಗಿ ವರದಿ ಆಗಿದೆ.
'ಆದಿಪುರುಷ್' ಸೀತೆಯ ಸುಂದರ ನೋಟ: ಕೃತಿ ಧರಿಸಿರುವ ಸೀರೆ ಬೆಲೆ ಎಷ್ಟು, ಏನಿದರ ವಿಶೇಷತೆ?
ರಾಮಾಯಣ ಆಧರಿಸಿದ ಈ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ರಾವಣನಾಗಿ ಅಬ್ಬರಿಸಿದ್ದಾರೆ.