'ಆದಿಪುರುಷ್' ಸೀತೆಯ ಸುಂದರ ನೋಟ: ಕೃತಿ ಧರಿಸಿರುವ ಸೀರೆ ಬೆಲೆ ಎಷ್ಟು, ಏನಿದರ ವಿಶೇಷತೆ?
'ಆದಿಪುರುಷ್' ಸ್ಟ್ರೀನಿಂಗ್ ವೇಳೆ ನಟಿ ಕೃತಿ ಸನೊನ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸೀರೆಯಲ್ಲಿ ಸುಂದರವಾಗಿ ಕಂಗೊಳಿಸಿದ ಸೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬಾಲಿವುಡ್ ನಟಿ ಕೃತಿ ಸನೊನ್ ಆದಿಪುರುಷ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಆದಿಪುರುಷ್ ಸಿನಿಮಾದಲ್ಲಿ ಕೃತಿ ಸೀತೆಯಾಗಿ ಮಿಂಚಿದ್ದಾರೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪ್ರಭಾಸ್ ಜೊತೆ ಕೃತಿ ತೆರೆಹಂಚಿಕೊಂಡಿದ್ದಾರೆ.
ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಓಂ ರಾವುತ್ ನಿರ್ದೇಶನ, ಸಿನಿಮಾದ ಡೈಲಾಗ್ಸ್, ವಿಎಕ್ಸ್‌ಎಫ್ ಸೇರಿದಂತೆ ಅನೇಕ ವಿಚಾರಗಳಿಗೆ ಆದಿಪುರುಷ್ ಟ್ರೋಲ್ ಆಗುತ್ತಿದೆ. ಸಿನಿಮಾ ರಿಲೀಸ್ ಆದ ಬಳಿಕ ಪ್ರಭಾಸ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಕೃತಿ ಸಿನಿಮಾ ಸ್ಟ್ರೀಮಿಂಗ್ ಸೇರಿದಂತೆ ಪ್ರಚಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿಗಷೆ ಸಿನಿಮಾ ಸ್ಟೀನಿಂಗ್‌ನಲ್ಲಿ ನಟಿ ಕೃತಿ ಸನೊನ್ ಕಾಣಿಸಿಕೊಂಡಿದ್ದರು. ಪ್ರಚಾರ ವೇಳೆ ಕೃತಿ ಧರಿಸಿದ್ದ ಡ್ರೆಸ್ ಅಭಿಮಾನಿಗಳ ಹೃದಯ ಗೆದ್ದಿವೆ. ಸಾಂಪ್ರದಾಯಿಕ ಉಡುಗೆಯಲ್ಲೇ ಕೃತಿ ಕಾಣಿಸಿಕೊಳ್ಳುತ್ತಿದ್ದರು.
ಇತ್ತೀಚಿಗಷ್ಟೆ ಕೃತಿ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಬೂದು ಹಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಖ್ಯಾತ ಫ್ಯಾಷನ್ ಡಿಸೈನರ್ ತರುಣ್ ತಹಿಲಿಯಾನಿ ಡಿಸೈನ್ ಮಾಡಿದ್ದ ಸೀರೆಯಲ್ಲಿ ಮಿಂಚಿದ್ದರು. ಈ ಸೀರೆಯ ಬೆಲೆ 114900 ರೂಪಾಯಿ.
ಫುಲ್ ಸ್ಲೀವ್ ಬ್ಲೌಸ್ ಧರಿಸಿದ್ದರು. ಕಲಂಕಾರಿ ಮಾದರಿಯಲ್ಲಿತ್ತು. ಶಿಫಾನ್ ರೇಷ್ಮೆ ಸೀರೆ ಇದಾಗಿದ್ದು ಕೃತಿ ಸುಂದರವಾಗಿ ಕಾಣಿಸುತ್ತಿದ್ದರು. ಸಿನಿಮಾಗೆ ನೆಗೆಟಿವ್ ಪ್ರತಿಕ್ರಿಯೆ ಬರುತ್ತಿದ್ದರು ಕೃತಿ ಪ್ರಮೋಷನ್ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೃತಿ ಸನೊನ್ ಸುಂದರ ಸೀರೆಯ ನೋಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃತಿ ಸೀತೆಯಾಗಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಆದರೆ ಕೆಲವು ಡೈಲಾಗ್‌ಗಳು ಧಕ್ಕೆ ತಂದಿದೆ ಎನ್ನುವ ಆರೋಪ ಕೇಳಿಬಂದಿದೆ.
ಆದಿಪುರುಷ್ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾದರೂ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಆದಿಪುರುಷ್ ಕೋಟಿಗಟ್ಟಲೇ ಬಾಚಿಕೊಂಡಿದೆ. ಓಂ ರಾವುತ್ ನಿರ್ದೇಶನ ಇಷ್ಟವಾಗದಿದ್ದರೂ ಆದಿಪುರುಷ್ ನೋಡಲು ಅಭಿಮಾನಿಗಳು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.