ತೂಗುದೀಪ ಕುಟುಂಬದ ಆಶೀರ್ವಾದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಿನಕರ್ ಸಹಕಾರದೊಂದಿಗೆ ಎಸ್‌ಎಲ್‌ಎನ್‌ ಕ್ರಿಯೇಷನ್‌ನಲ್ಲಿ ಮೂಡಿ ಬರುತ್ತಿರುವ ’ಟಕ್ಕರ್’ ಟೀಸರ್ ಇಂದು ಬಿಡುಗಡೆಯಾಗಿದೆ.

’ಟಕ್ಕರ್’ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡುತ್ತಿರುವ ಮನೋಜ್‌ ಫುಲ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಪುಟ್ಟಗೌರಿ ಮದುವೆ ಸೀರಿಯಲ್ ಖ್ಯಾತಿಯ ರಜಿನಿ ರಾಘವನ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ನಿರ್ದೇಶಕ ರಘು ಶಾಸ್ತ್ರಿ ಹಾಗೂ ನಿರ್ಮಾಪಕ ನಾಗೇಶ್ ಕೋಗಿಲು ಒಟ್ಟಾಗಿ ಹೊಸದೊಂದು ಪ್ರಯತ್ನ ಇದಾಗಿದ್ದು ಯಶಸ್ಸು ಸಿಗಲಿ ಎಂಬುದು ಎಲ್ಲರ ಆಶಯ.