ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸೂಚನೆಯ ಮೇರೆಗೆ ಮನೋಜ್ ಕುಮಾರ್ ಕೇವಲ 24 ಗಂಟೆಗಳಲ್ಲಿ ಚಿತ್ರಕಥೆ ರಚಿಸಿದ್ದರು. ಈ ಚಿತ್ರವು ದೊಡ್ಡ ಯಶಸ್ಸು ಕಂಡಿತು ಮತ್ತು ಅದರ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.

ನವದೆಹಲಿ: ಪ್ರಧಾನ ಮಂತ್ರಿಗಳೇ ಸ್ವತಃ ಕಥೆಯೊಂದರ ಮೇಲೆ ಸಿನಿಮಾ ಮಾಡುವಂತೆ ಸೂಚಿಸಿದ್ದರು. ಪ್ರಧಾನಿಗಳು ಸೂಚನೆ ನೀಡಿದ ಬೆನ್ನಲ್ಲೇ ಕೇವಲ ಒಂದು ಗಂಟೆಯಲ್ಲಿಯೇ ಮನೋಜ್ ಕುಮಾರ್ ಚಿತ್ರಕಥೆಯನ್ನು ಬರೆದಿದ್ದರು. ಸಿನಿಮಾ ಬಿಡುಗಡೆಯಾದ ನಂತರ ಯಶಸ್ವಿ ಪ್ರದರ್ಶನ ಕಂಡಿತ್ತು. ಜನರು ಗಂಟೆಗಟ್ಟಲೇ ಕೌಂಟರ್ ಬಳಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದ್ದರು. ಚಿತ್ರಮಂದಿರದ ಮುಂದೆ ಜನದಟ್ಟಣೆ ಸಹ ಉಂಟಾಗುತ್ತಿತ್ತು. ಈ ಚಿತ್ರದ ಹಾಡು ಇಂದಿಗೂ ಜನಪ್ರಿಯವಾಗಿದೆ 

ದೇಶದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರೇ ಸಿನಿಮಾ ಮಾಡಲು ಟಾಪಿಕ್ ನೀಡಿದ್ದರು. ಬಾಲಿವುಡ್ ಮಾತ್ರವಲ್ಲದೇ ಇಡೀ ದೇಶದಲ್ಲಿ ಮನೋಜ್ ಕುಮಾರ್ ಅವರನ್ನು ಭಾರತದ ಪುತ್ರ ಎಂದು ಕರೆಯಲಾಗುತ್ತದೆ. ದೇಶಭಕ್ತಿ ಹಾಗೂ ದೇಶಪ್ರೇಮದ ಕಥೆಯುಳ್ಳ ಹಲವು ಸಿನಿಮಾಗಳನ್ನು ಮನೋಜ್ ಕುಮಾರ್ ಮಾಡಿದ್ದಾರೆ. ಮನೋಜ್ ಕುಮಾರ್ ಅವರ ಸಿನಿಮಾದ ಹಾಡುಗಳು, ಡೈಲಾಗ್ ಎಷ್ಟು ಹಿಟ್ ಆಗಿತ್ತು ಅಂದ್ರೆ ಚಿತ್ರ ನೋಡಿದ ಬಹುತೇಕರು ತಪ್ಪಿಲ್ಲದೇ ಹೇಳುತ್ತಿದ್ದರು. ಒಮ್ಮೆ ಮನೋಜ್ ಕುಮಾರ್ ಅವರನ್ನು ಕರೆಸಿಕೊಂಡಿದ್ದ ಶಾಸ್ತ್ರೀಜಿ, ವಿಷಯವೊಂದರ ಮೇಲೆ ಚಿತ್ರ ಮಾಡುವಂತೆ ಹೇಳದ್ದರು. ಪ್ರಧಾನಿಗಳ ಸೂಚನೆಯಂತೆ ಅದೇ ಕಥೆ ಮೇಲೆ ಸಿನಿಮಾ ಮಾಡಿ ಯಶಸ್ವಿಯಾದರು. ಈ ಮೂಲಕ ಪ್ರಧಾನಿಗಳ ನಂಬಿಕೆಯನ್ನು ಮನೋಜ್ ಕುಮಾರ್ ಉಳಿಸಿಕೊಂಡಿದ್ದರು.

1965ರಲ್ಲಿ ಮನೋಜ್ ಕುಮಾರ್ ಅವರ 'ಶಹೀದ್' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಮನೋಜ್ ಕುಮಾರ್ ಅವರ ದೇಶಭಕ್ತಿ ಇಡೀ ದೇಶದ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಈ ಚಿತ್ರದ ಸ್ಕ್ರೀನಿಂಗ್ ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಸ್ವತಃ ಅಂದಿನ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರೇ ಸಿನಿಮಾ ವೀಕ್ಷಣೆಗೆ ಆಗಮಿಸಿದ್ದರು. "ಜೈ ಜವಾನ್, ಜೈ ಕಿಸಾನ್" ಘೋಷಣೆ ಆಧಾರದ ಮೇಲೆ ಸಿನಿಮಾ ಮಾಡುವಂತೆ ಲಾಲ್‌ ಬಹದ್ದೂರ್ ಶಾಸ್ತ್ರೀಗಳು ಮನೋಜ್ ಕುಮಾರ್ ಅವರಿಗೆ ಸೂಚಿಸಿದ್ದರು. ಆ ದಿನಗಳಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ವಿಜಯದ ನಂತರ ಜೈ ಜವಾನ್, ಜೈ ಕಿಸಾನ್" ಘೋಷಣೆ ಹೆಚ್ಚು ಜನಪ್ರಿಯವಾಗಿತ್ತು. ಜನರು ಸಹ ಅತ್ಯಂತ ಹೆಮ್ಮೆಯಿಂದ ಈ ಘೋಷಣೆಯನ್ನು ಕೂಗುತ್ತಿದ್ದರು. 

70 ಕೋಟಿ ಬಜೆಟ್, 400 ಕೋಟಿ ಗಳಿಕೆ; 2 ಗಂಟೆ 33 ನಿಮಿಷದ ಚಿತ್ರ ಭಾರತಕ್ಕೆ ಬರಲು 2 ವರ್ಷ ತೊಗೊಂಡಿದ್ಯಾಕೆ?

ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ್ದ ಲಾಲ್ ಬಹದ್ಧೂರ್ ಶಾಸ್ತ್ರಿ, ಪ್ರತಿಯೊಬ್ಬರೂ ಸೇನೆಯ ಶೌರ್ಯವನ್ನು ನೋಡಿದ್ದಾರೆ. ಹಾಗೆ ದೇಶದ ರೈತನ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದ್ದರು. ಈ ಮೂಲದ ದೇಶಕ್ಕೆ ಸೈನಿಕರು ಎಷ್ಟು ಮುಖ್ಯವೋ, ಅನ್ನ ಕೊಡುವ ರೈತನ ಪಾತ್ರವೂ ಅಷ್ಟೇ ಪ್ರಮುಖವಾಗಿರುತ್ತದೆ ಎಂಬ ಸಂದೇಶವನ್ನು ಶಾಸ್ತ್ರಿಗಳು ರವಾನಿಸಿದ್ದರು. ಶಹೀದ್ ಸೈನಿಕರ ಕಥೆಯನ್ನು ಹೊಂದಿತ್ತು. ನಂತರ ರೈತರಿಗಾಗಿ ಉಪಕಾರ್ ಸಿನಿಮಾ ಮಾಡಿದ್ದರು.

ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹೇಳಿದ ಕೂಡಲೇ ಜೈ ಜವಾನ್, ಜೈ ಕಿಸಾನ್ ಘೋಷಣೆ ಆಧಾರದ ಮೇಲೆ ಸಿನಿಮಾ ಮಾಡಲು ಮುಂದಾಗಿದ್ದರು. ಪ್ರಧಾನಿಗಳು ಸೂಚನೆ ಮೇರೆಗೆ ದೆಹಲಿಯಿಂದ ಮುಂಬೈನತ್ತ ಪ್ರಯಾಣ ಬೆಳೆಸಿದ ಮನೋಜ್ ಕುಮಾರ್, ರೈಲಿನಲ್ಲಿಯೇ ಕಥೆ ಬರೆಯಲು ಶುರು ಮಾಡಿದ್ದರು. ಮುಂಬೈ ತಲುಪುವ ಮೊದಲೇ ಕಥೆ ರೆಡಿಯಾಗಿತ್ತು. ಈ ಸಿನಿಮಾ "ಉಪಕಾರ್" ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ರೈತರ ಕಥೆಯನ್ನು ಒಳಗೊಂಡಿತ್ತು. ಈ ಚಿತ್ರದ ಮೇರೆ ದೇಶ್ ಕಿ ಧರ್ತಿ... ಹಾಡು ಇಂದಿಗೂ ಜನಪ್ರಿಯವಾಗಿದೆ. ಆಗಸ್ಟ್ 15, ಜನವರಿ 26ರಂದು ಈ ಹಾಡು ಮೊಳಗುತ್ತದೆ. ಈ ಸಿನಿಮಾ ಯುಟ್ಯೂಬ್‌ನಲ್ಲಿ ಲಭ್ಯವಿದ್ದು, ವೀಕ್ಷಣೆ ಮಾಡಬಹುದಾಗಿದೆ.

1980ರಲ್ಲಿ ಬಿಡುಗಡೆಯಾದ ಸಿನಿಮಾದಿಂದ ನಷ್ಟ ಅನುಭವಿಸಿತ್ತು ರೈಲ್ವೆ

YouTube video playerYouTube video player