Manoj Bajpayee: ತಲೆಗೆ ಎಣ್ಣೆ ಮೆತ್ಕೊಂಡು ಪಾರ್ಟಿಗೆ ಬಂದಿದ್ಲು, ಲವ್​ ಆಗೋಯ್ತು ಎಂದ ನಟ!

ಬಾಲಿವುಡ್​ ನಟ ಮನೋಜ್​ ಬಾಜಪೇಯಿ ಅವರು ತಮ್ಮ ಕುತೂಹಲದ ಪ್ರೇಮ ಕಥೆಯನ್ನು ತೆರೆದಿಟ್ಟಿದ್ದಾರೆ. ಏನದು ಇವರ ಲವ್​ ಸ್ಟೋರಿ?
 

Manoj Bajpayee opens up his love story with Shabana Raza aka Neha

ಕೋವಿಡ್ (Covid) ಮಹಾಮಾರಿಯನ್ನು ಭಾರತ ಮಣಿಸಿದ್ದು ಹೇಗೆ, ಇದಕ್ಕೆ ಭಾರತ  ಮದ್ದು  ಕಂಡು ಹಿಡಿದಿದ್ದು ಹೇಗೆ?  ಹೇಗಿತ್ತು ಭಾರತದ ವ್ಯಾಕ್ಸಿನೇಷನ್ (Vaccination) ಹೋರಾಟ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರವನ್ನು ನಿರೂಪಿಸಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇರುವವರು ಬಾಲಿವುಡ್​ ನಟ ಮನೋಜ್​ ಬಾಜಪೇಯಿ. ಹಿಸ್ಟರಿ ಟಿವಿ18 ತಯಾರಿಸಿದ ಸಾಕ್ಷ್ಯಚಿತ್ರ ‘ದಿ ವೈಲ್ - ಇಂಡಿಯಾಸ್ ವ್ಯಾಕ್ಸಿನ್ ಸ್ಟೋರಿ' ಭಾರತದ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಸಾಕ್ಷ್ಯಚಿತ್ರದಲ್ಲಿ  ಲಸಿಕೆಯನ್ನು ತಯಾರಿಸುವಲ್ಲಿ, ಅಭಿವೃದ್ಧಿಪಡಿಸುವಲ್ಲಿ ಮತ್ತು ತಲುಪಿಸುವಲ್ಲಿ ಭಾರತದ ಸಾಧನೆಯನ್ನು ವಿವರಿಸಲಾಗುತ್ತದೆ. ಇದಕ್ಕೆ ಧ್ವನಿ ನೀಡಿದವರು  ಬಾಲಿವುಡ್ ಖ್ಯಾತ ನಟ ಮನೋಜ್ ಬಾಜಪೇಯಿ.  ಕೋವಿಡ್ ಸಮಯದಲ್ಲಿ  ವೈದ್ಯರು, ವಿಜ್ಞಾನಿಗಳು ಹಾಗೂ ಇನ್ನೂ ಹಲವರು  ತಮ್ಮ ಜೀವನವನ್ನು ಪಣಕ್ಕಿಟ್ಟು  ಕೋವಿಡ್ ವಿರುದ್ಧ ಹೋರಾಡಿದ್ದನ್ನು  ಈ ಸಾಕ್ಷ್ಯಚಿತ್ರವು  ಸ್ಮರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದರ ನಡುವೆಯೇ ತಮ್ಮ ಕುತೂಹಲದ ಲವ್​ ಸ್ಟೋರಿಯನ್ನೂ ಇದೇ  ವೇಳೆ ಮನೋಜ್​ ಅವರು ತೆರೆದಿಟ್ಟಿದ್ದಾರೆ. ಅಂದಹಾಗೆ ಇವರದ್ದು ಪ್ರೇಮ ವಿವಾಹ.  ನಟಿ ಶಬಾನಾ ರಜಾ (Shabana Raza) ಅವರನ್ನು ವಿವಾಹವಾದರು. ನಂತರ ಅವರನ್ನು ನೇಹಾ ಎಂದು ಕರೆಯಲಾಯಿತು. ಇಬ್ಬರ ಪ್ರೇಮಕಥೆಯೂ ಕುತೂಹಲಕಾರಿಯಾಗಿದೆ. ಮನೋಜ್ ಬಾಜಪೇಯಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೇಹಾ ಅವರೊಂದಿಗಿನ ತಮ್ಮ ಪ್ರೇಮಕಥೆಯ ಬಗ್ಗೆ ಮಾತನಾಡಿದ್ದಾರೆ. ಮೊದಲ ನೋಟದಲ್ಲಿಯೇ ಹೇಗೆ ತಾವು ಶಬಾನಾ ಅವರಿಗೆ ಹೃದಯ ಕೊಟ್ಟುಬಿಟ್ಟೆ ಎನ್ನುವುದನ್ನು ಹೇಳಿದ್ದಾರೆ. 'ನಾನು ರೊಮ್ಯಾಂಟಿಕ್ ವ್ಯಕ್ತಿ ಅಲ್ಲವೇ ಅಲ್ಲ. ಆದರೂ ಶಬಾನಾ ಅವರನ್ನು ನೋಡಿದಾಗ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಯಿತು' ಎಂದಿದ್ದಾರೆ ಮನೋಜ್​ (Manoj Bajpayee).

ಚಪ್ಪಲಿಯಿಂದ ಶುರುವಾಯ್ತು ವಿರುಷ್ಕಾ ದಂಪತಿ ಪ್ರೇಮ ಕಥೆ!

 ಮೊದಲು ಶಬಾನಾ ರಜಾ  ಅವರನ್ನು ಹನ್ಸಲ್ ಮೆಹ್ತಾ ಅವರ ಪಾರ್ಟಿಯಲ್ಲಿ ಭೇಟಿಯಾಗಿದ್ದೆ. ಆಗಲೇ ಆಕೆಯ ಮೇಲೆ ಕಣ್ಣು ಬಿದ್ದಿತ್ತು.  ಅಷ್ಟಕ್ಕೂ ನನಗೆ ಆಕೆ ಇಷ್ಟವಾಗಲು ಅವಳ ರೂಪ ಮಾತ್ರ ಕಾರಣವಾಗಿರಲಿಲ್ಲ. ನಿಜವಾಗಿ ಹೇಳಬೇಕೆಂದರೆ ಅದು ತನ್ನ ಕೂದಲಿಗೆ ಮೆತ್ತಿಕೊಂಡು ಬಂದಿದ್ದ ಎಣ್ಣೆಯೇ  ಕಾರಣ ಎಂದರೂ ತಪ್ಪಾಗಲಿಕ್ಕಿಲ್ಲ ಎಂದಿದ್ದಾರೆ. ಸಾಮಾನ್ಯವಾಗಿ ಯಾರೇ ಪಾರ್ಟಿ, ಫಂಕ್ಷನ್​ಗಳಿಗೆ ಹೋಗುವಾಗ ಹೇರ್​ಸ್ಟೈಲ್​ ಮಾಡಿಕೊಂಡು ಹೋಗುತ್ತಾರೆ. ಅದರಲ್ಲಿಯೂ ನಟಿಯರು ಎಂದ ಮೇಲೆ ಕೇಳಬೇಕೆ? ಗಂಟೆಗಟ್ಟಲೆ ಕೂತು ಹೇರ್​ಸ್ಟೈಲ್​ ಮಾಡುತ್ತಾರೆ. ಆದರೆ ಉದ್ದನೆಯ ಕೂದಲು ಇರುವ ಶಬಾನಾ ಅವರು ಸಹಜವಾಗಿ ಬೇಕಾದಷ್ಟು ರೀತಿಯಲ್ಲಿ ಹೇರ್​ಸ್ಟೈಲ್​ ಮಾಡಬೇಕಿತ್ತು. ಅದನ್ನು ಬಿಟ್ಟು ಆಕೆ, ಒಂದು ರಾಶಿ ಎಣ್ಣೆ ಬಳಿದುಕೊಂಡು ಬಂದಿದ್ದರಂತೆ. ಇದೇ ಮನೋಜ್​ ಅವರಿಗೆ ಇಷ್ಟವಾಗಿದ್ದಂತೆ! 

'ಅಷ್ಟು ದೊಡ್ಡ ಪಾರ್ಟಿಗೆ (Party) ಅವಳು ಕೂದಲಿಗೆ ಎಣ್ಣೆ ಹಚ್ಚಿಕೊಂಡು ಬಂದಿದ್ದಳು. ತನ್ನ ಬಗ್ಗೆ ಜನ ಏನು ಹೇಳ್ತಾರೆ ಅಂತ ನೇಹಾ ತಲೆ ಕೆಡಿಸಿಕೊಂಡಿರಲಿಲ್ಲ. ಆಕೆಯ  ಸೌಂದರ್ಯಕ್ಕಿಂತ  ಸರಳತೆ ಮತ್ತು ನೈಜ ವ್ಯಕ್ತಿತ್ವ ನನ್ನನ್ನು ಆಕರ್ಷಿಸಿತು. ನಾನು ಹುಡುಕುತ್ತಿರುವ ನಿಜವಾದ ವ್ಯಕ್ತಿ ಈಕೆಯೇ  ಎಂದು ಆಗಲೇ ನನಗೆ ಅನಿಸಿತು' ಎಂದಿದ್ದಾರೆ ಮನೋಜ್​. ನನ್ನ ಪ್ರೀತಿಯನ್ನು ಆಕೆಯ ಒಪ್ಪಿದಳು. ಇದರ ನಂತರ ನಾವು ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದೇವೆ ಮತ್ತು ಅಂತಿಮವಾಗಿ 2006 ರಲ್ಲಿ ಮದುವೆಯಾದೆವು ಎಂದಿದ್ದಾರೆ ಮನೋಜ್​. ವರದಿಗಳ ಪ್ರಕಾರ,  ಶಬಾನಾ ರಜಾ ಅವರು ಮನೋಜ್​ ಅವರ ಎರಡನೇ ಪತ್ನಿ. ಕಾರಣಾಂತರಗಳಿಂದ ಮನೋಜ್ ಮೊದಲ ಮದುವೆ ಮುರಿದು ಬಿದ್ದಿತ್ತು. ಆದಾಗ್ಯೂ, ಇದಕ್ಕೆ ಕಾರಣವನ್ನು ಎಂದಿಗೂ ಬಹಿರಂಗಪಡಿಸಲಾಗಿಲ್ಲ. ಈ ದಂಪತಿಗೆ ಓರ್ವ ಮಗಳಿದ್ದಾಳೆ.  ಆಕೆಯ ಹೆಸರು ಅವಾ ನೈಲಾ. ಅವಾ ಆಗಾಗ್ಗೆ ತನ್ನ ತಂದೆಯೊಂದಿಗೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಭಿಕು ಮ್ಹಾತ್ರೆಯಿಂದ ಸರ್ದಾರ್ ಖಾನ್​ವರೆಗೆ , ಮನೋಜ್  ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯಾವುದೇ  ಪಾತ್ರವನ್ನು ನೀಡಿದರೂ ಅದಕ್ಕೆ ಜೀವ ತುಂಬುವಲ್ಲಿ ಮನೋಜ್​ ಅವರದ್ದು ಎತ್ತಿದ ಕೈ. ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರೋ ಮನೋಜ್​ ಅವರಿಗೆ ದೇವದಾಸ್ ವಾಲಾ ಪಾತ್ರ ಮಾಡುವ ಆಸೆಯಂತೆ. ಅದಿನ್ನೂ ಈಡೇರಲಿಲ್ಲ ಎಂದಿದ್ದಾರೆ.

ಕಂಗನಾ, ಹೃತಿಕ್​ ರೋಷನ್​ ಲವ್​ ಸ್ಟೋರಿಗೆ ಸಾಕ್ಷಿಯಾಯ್ತು ಎಲಾನ್​ ಮಸ್ಕ್​ ಟ್ವೀಟ್​!

Latest Videos
Follow Us:
Download App:
  • android
  • ios