ಬಾಲಿವುಡ್ ಖ್ಯಾತ ನಟ ಮನೋಜ್ ಬಾಜಪಾಯಿ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಖಾನ್ ಜೊತೆಗಿನ ಸ್ನೇಹ ಬಿಚ್ಚಿಟ್ಟ ಮನೋಜ್ ಮೊದಲ ಬಾರಿಗೆ ನೈಟ್ ಕ್ಲಬ್ ಹೋಗಿದ್ದ ಘಟನೆ ವಿವರಿಸಿದ್ದಾರೆ.  

ಭಾರತದ ಖ್ಯಾತ ನಟರಲ್ಲಿ ಮನೋಜ್ ಬಾಜಪಾಯಿ ಕೂಡ ಒಬ್ಬರು. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಮನೋಜ್ ಬಾಜಪಾಯಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಟರಲ್ಲಿ ಒಬ್ಬರಾಗಿದ್ದಾರೆ. ಸತ್ಯ, ರಾಜನೀತಿ, ಗ್ಯಾಂಗ್ಸ್ ಆಫ್ ವಾಸೇಪುರ್, ದಿ ಫ್ಯಾಮಿಲಿ ಮ್ಯಾನ್ ಸೇರಿದಂತೆ ಅನೇಕ ಸಿನಿಮಾ ಮತ್ತು ಸೀರಿಸ್ ಮೂಲಕ ಅಭಿಮಾನಿಗಳ ಹೃದಯಗೆದ್ದಿರುವ ನಟ ಮನೋಜ್. ನಟ ಮನೋಜ್ ಬಾಜಪಾಯಿ ಸದ್ಯ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮನೋಜ್, ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ, ತಮ್ಮ ಆರಂಭದ ದಿನಗಳ ಬಗ್ಗೆ ಬಹಿರಂಗ ಪಡಿಸಿದರು.

ಮನೋಜ್ ಬಾಜಪಾಯಿ ಬಿಹಾರದ ಒಂದು ಪುಟ್ಟ ಹಳ್ಳಿಯಿಂದ ಬಂದವರು.1998ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಸತ್ಯ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಮಿಂಚಿದರು. ಸಿನಿಮಾಗಿಂತ ಮೊದಲು ರಂಗಭೂಮಿಯಲ್ಲಿ ಸಕ್ರೀಯರಾಗಿದ್ದ ಮನೋಜ್ ದೆಹಲಿಯಲ್ಲಿ ಅನೇಕ ವರ್ಷ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ವಿಶೇಷ ಎಂದರೆ ಮನೋಜ್ ಮತ್ತು ಶಾರುಖ್ ಖಾನ್ ಇಬ್ಬರೂ ಒಂದೇ ನಟನೆಯ ತಂಡಕ್ಕೆ ಸೇರಿದವರಾಗಿದ್ದರು. ಬ್ಯಾರಿ ಜಾನ್ ಎನ್ನುವ ನಟನಾ ತಂಡದಲ್ಲಿದ್ದರು. ಆಗಿನ ಒಂದಿಷ್ಟು ಘಟನೆಯನ್ನು ಮನೋಜ್ ಬಹಿರಂಗ ಪಡಿಸಿದ್ದಾರೆ. 

ಆ ಕಾಲದಲ್ಲಿ ಶಾರುಖ್ ಮಾಡಿದ ಸಹಾಯವನ್ನು ಮನೋಜ್ ಬಿಚ್ರುಚಿಟ್ಟಿದ್ದಾರೆ. ಶಾರುಖ್ ಖಾನ್ ತನ್ನನ್ನು ಡಿಸ್ಕೋಗೆ ಕರೆದೊಯ್ದ ಘಟನೆಯನ್ನು ಮನೋಜ್ ಬಹಿರಂಗ ಪಡಿಸಿದರು. 'ತುಂಬಾ ಸಮಯದ ಹಿಂದೆ ದೆಹಲಿಯಲ್ಲಿ ಘುಂಗ್ರೂ ಎಂಬ ನೈಟ್‌ಕ್ಲಬ್ ಹೋಗಿದ್ವಿ. ನಾನು ಚಪ್ಪಳಿ ಹಾಕಿದ್ದೆ ಆವಾಗ, ಆಮೇಲೆ ಹೇಗೋ ಶಾರುಖ್ ನನಗೋಸ್ಕರ ಶೂಸ್‌ ವ್ಯವಸ್ಥೆ ಮಾಡಿ ಕರೆದುಕೊಂಡು ಹೋದರು' ಎಂದು ಹೇಳಿದರು. 

'ನಂತರ ನಾನು ಒಳಗೆ ಹೋದೆ. ನಾನು ಜೀವನವನ್ನು ಮೊದಲ ಬಾರಿಗೆ ನೋಡಿದೆ. ರಾತ್ರಿಕ್ಲಬ್ ಎಂದರೇನು ಎಂದು ತಿಳಿಯಿತು. ಜನರು ನೃತ್ಯ ಮಾಡುತ್ತಿದ್ದರು ಆದರೆ ನಾನು ಒಂದು ಮೂಲೆಯಲ್ಲಿ ಕುಳಿತು ವೈನ್ ಕುಡಿಯುತ್ತಿದ್ದೆ' ಎಂದು ಹೇಳಿದರು. ಎಸ್‌ಆರ್‌ಕೆ, ಬೆನ್ನಿ ಮತ್ತು ರಾಮ ಕತ್ತಲೆ ಮತ್ತು ಮಸುಕಾದ ನೈಟ್‌ಕ್ಲಬ್‌ಗೆ ಕರೆದೊಯ್ದರು ಎಂದು ಹೇಳಿದರು. 

ಹೃತಿಕ್ ಕಾರಣಕ್ಕೆ ಡಾನ್ಸ್ ಮಾಡೋದನ್ನೇ ಬಿಟ್ಟೆ; ಫ್ಯಾಮಿಲಿ ಮ್ಯಾನ್ ಸ್ಟಾರ್ ಮನೋಜ್ ಬಾಜಪಾಯಿ ಶಾಕಿಂಗ್ ಹೇಳಿಕೆ

ಮನೋಜ್ ಸದ್ಯ ತಮ್ಮ ಮುಂದಿನ ಗುಲ್ಮೊಹರ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ರಾಹುಲ್ ವಿ ಚಿತ್ತೆಲ್ಲಾ ನಿರ್ದೇಶನದಲ್ಲಿರುವ ಬಂದಿರುವ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಸದ್ಯ ಪ್ರಚಾರದಲ್ಲಿ ಮನೋಜ್ ಬ್ಯುಸಿಯಾಗಿದ್ದಾರೆ. ಪ್ರಚಾರದ ವೇಳೆ ಮನೋಜ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಈ ಸಿನಿಮಾ ಮಾರ್ಚ್ 3ರಂದು ರಿಲೀಸ್ ಆಗುತ್ತಿದೆ. 

ಮತ್ತೆ ಬರ್ತಿದೆ 'ಫ್ಯಾಮಿಲಿ ಮ್ಯಾನ್': ಇಂಟ್ರಸ್ಟಿಂಗ್ ಅಪ್‌ಡೇಟ್ ನೀಡಿದ ಮನೋಜ್ ಬಾಜಪಾಯಿ, ಸಮಂತಾ ಇರ್ತಾರಾ?

ದಿ ಫ್ಯಾಮಿಲಿ ಮ್ಯಾನ್ 3

ದಿ ಫ್ಯಾಮಿಲಿ ಮ್ಯಾನ್ ಸೀರಿಸ್‌ನಲ್ಲಿ ಮನೋಜ್ ಬಾಜಪಾಯಿ ಶ್ರೀಕಾಂತ್ ಆಗಿ ಮಿಂಚಿದ್ದರು. ದಿ ಫ್ಯಾಮಿಲಿ ಮ್ಯಾನ್ 1 ಮತ್ತು 2 ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದು 3ನೇ ಭಾಗಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪಾರ್ಟ್ -3 ಬಗ್ಗೆ ಮನೋಜ್ ಇತ್ತೀಚೆಗಷ್ಟೆ ಸುಳಿವು ನೀಡುವ ಮೂಲಕ ಅಭಿಮಾನಿಗಳ ಕುತೂಹಲ ದುಪ್ಪಟ್ಟು ಮಾಡಿದ್ದರು. ಈ ಸೀರಿಸ್ ಜೊತೆಗೆ ಮನೋಜ್ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.