ಬಾಲಿವುಡ್‌ ಪರ್ಫೆಕ್ಟ್ ಮ್ಯಾನ್‌ ಅಮೀರ್ ಖಾನ್ ಅಭಿನಯದ 'ಮಂಗಲ್ ಪಾಂಡೆ' ಚಿತ್ರಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕಲಾವಿದ ರಾಜೇಶ್‌ ಕರೀರ್‌ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. 

ಹಿಂದಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ 'ಬೇಗುಸರೈ'ನಲ್ಲಿ ನಟಿಯ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಜೇಶ್‌ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಹಣ ಸಹಾಯ ಮಾಡಲು ಚಿತ್ರರಂಗದ ಗಣ್ಯರು ಹಾಗೂ ಇನ್ನಿತರರಿಗೆ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ವೈರಲ್ ವಿಡಿಯೋ:

ರಾಜೇಶ್‌ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡ ವಿಡಿಯೋ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ವಿಡಿಯೋ ಪ್ರಾರಂಭದಲ್ಲಿ ತನ್ನ ಮುಖವನ್ನು ಹಲವರು ಗುರುತಿಸಿಬಹುದು ಎಂದು ಭಾವಿಸಿರುವೆ ಎಂದು ಹೇಳಿದ್ದಾರೆ. 

ಬುಟ್ಟ ಬೊಮ್ಮ ಫೀವರ್: ಅಲ್ಲು ಸಾಂಗ್‌ಗೆ ಏಕ್ತಾ ಕಪೂರ್ ಮಗನ ಡ್ಯಾನ್ಸ್ ನೋಡಿ

'ನಾನು ನಾಚಿಕೆ ಪಟ್ಟು ಸುಮ್ಮನಾದರೆ ನನ್ನ ಜೀವನ ಇನ್ನು ಕಷ್ಟಕರವಾಗಲಿದೆ. ನನಗೆ ಸಹಾಯಬೇಕಿದೆ. ಕೈ ಮುಗಿದು ನಿಮ್ಮೆಲ್ಲರಿಗೂ ಮನವಿ ಮಾಡಿಕೊಳ್ಳುವೇ. ನನ್ನ ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ. ನಾನು 15-16 ವರ್ಷಗಳಿಂದ ಮುಂಬೈನಲ್ಲಿ ಕುಟುಂಬದವರ ಜೊತೆ ವಾಸವಿದ್ದೇನೆ.  ಕೆಲ ಎರಡು- ಮೂರು ತಿಂಗಳುಗಳಿಂದ ಅವಕಾಶಗಳಿಲ್ಲಿದೆ ಕೂತಿರುವೆ. ನಿಮ್ಮಿಂದ 300-400 ರೂ ನೀಡುವಂತೆ  ನಿಮ್ಮಲ್ಲಿ ಕೇಳಿಕೊಳ್ಳುವೆ. ನೀವು ನನಗೆ ಸಹಾಯ ಮಾಡುತ್ತೀರಾ ಎಂದು ತಿಳಿದುಕೊಳ್ಳುತ್ತಿರುವೆ' ಎಂದು ಕಣ್ಣೀರು ಹಾಕುತ್ತಾ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಲಾಕ್‌ಡೌನ್‌ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ ಈ ಸಮಯದಲ್ಲಿ ಚಿತ್ರೀಕರಣ ಶುರುವಾಗುತ್ತದೆ ಆಗ ನನಗೆ ಕೆಲಸ ಸಿಗುತ್ತದೆ ಎಂಬುದು ನನಗೆ ತಿಳಿದಿಲ್ಲ. ನಾನು ಬದುಕಲು ಬಯಸಿದ್ದೇನೆ ದಯವಿಟ್ಟು ಈ ಸಮದಲ್ಲಿ ಸಹಾಯ ಮಾಡಿ ನನ್ನ ಕುಟುಂಬಕ್ಕೂ ಸಹಾಯವಾಗುತ್ತದೆ.