ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ನಟಿಸಿದ ಅಲಾ ವೈಕುಂಠಪುರಂಲೂ ತೆಲುಗು ಸಿನಿಮಾದ ಬುಟ್ಟ ಬೊಮ್ಮ ಹಾಡು ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಪುಟ್ಟ ಮಕ್ಕಳಿಂದ ಹಿಡಿದು, ಅಜ್ಜಂದಿರೂ ಈ ಸಾಂಗ್‌ಗೆ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ರು. ಇದೀಗ ಬಾಲಿವುಡ್ ಸ್ಟಾರ್ ಕಂದಮ್ಮ ಕೂಡಾ ಈ ಹಾಡಿಗೆ ಕ್ಯೂಟ್‌ ಆಗಿ ಡ್ಯಾನ್‌ ಮಾಡಿ ವಿಡಿಯೋ ವೈರಲ್ ಆಗಿದೆ.

 
 
 
 
 
 
 
 
 
 
 
 
 

Fav song of my fav boy! ) also #gendaphool ! How music has no language!!!

A post shared by Erk❤️rek (@ektarkapoor) on May 31, 2020 at 12:44am PDT

ಜನವರಿಯಲ್ಲಿ ರಿಲೀಸ್ ಆಗಿದ್ದ ಸಾಂಗ್ ಬಾಕ್ಸ್‌ ಆಫೀಸ್ ಹಿಟ್ ಆಗಿತ್ತು. ಪ್ರಮುಖ ಸೆಲೆಬ್ರಿಟಿಗಳೂ ಈ ಫಿಲ್ಮ್ ಸಾಂಗ್‌ಗೆ ಸ್ಟೆಪ್ ಹಾಕಿದ್ರು. ಆಸ್ಟ್ರೇಲಿಯಾ ಕ್ರಿಕೆಟರ್ ಡೇವಿಡ್ ತಮ್ಮ ಪತ್ನಿಯೊಂದಿಗೆ ಹಾಡಿಗೆ ಸ್ಟೆಪ್ ಹಾಕಿದ್ದರು. ಬಾಲಿವುಡ್ ಸಿಂಗರ್ ಅರ್ಮಾನ್ ಮಲ್ಲಿಕ್ ಹಾಡಿದ ಹಾಡು ಮತ್ತೊಮ್ಮೆ ಸುದ್ದಿಯಾಗಿರೋದು ಏಕ್ತಾ ಕಪೂರ್ ಅವರ ಮಗ ರವಿ ಕಪೂರ್‌ನಿಂದ.

ಮದ್ವೆಯಾಗೋಕೆ ದೀಪಿಕಾಳಂತ ಹುಡುಗಿ ಬೇಕು ಎಂದ ಬಾಲಿವುಡ್ ನಟ: ಕಾರಣ ಇದು

ಏಕ್ತಾ ಕಪೂರ್ ತಮ್ಮ ಮಗನ ವಿಡಿಯೋವನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ನನ್ನ ಫೇವರೇಟ್‌ ಹುಡುಗನ ಫೇವರೇಟ್ ಹಾಡು, ಅಂದಹಾಗೆ ಸಂಗೀತಕ್ಕೆ ಭಾಷೆ ಇಲ್ಲ' ಎಂದು ಬರೆದುಕೊಂಡಿದ್ದಾರೆ.

ಏಕ್ತಾ ಕಪೂರ್ ಮಗನ ವಿಡಿಯೋಗೆ ಕಮೆಂಟ್‌ ಮಾಡಿದ ಅಲಾ ವೈಕುಂಠಪುರಂಲೂ ಚಿತ್ರದ ನಾಯಕಿ ಪೂಜಾ ಹೆಗ್ಡ, ಅವನ ಖುಷಿ ನೋಡಿ ನನಗೆ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ. ಈ ಸಿನಿಮಾ ಹಿಂದಿಗೂ ಡಬ್ ಆಗುತ್ತಿದೆ.