ಬಾಲಿವುಡ್‌ನ ಖ್ಯಾತ ನಿರ್ದೇಶಕ ಇನ್ನಿಲ್ಲ ನಟಿ ಮಂದಿರಾ ಬೇಡಿ ಪತಿ ರಾಜ್‌ ಕೌಶಲ್ ನಿಧನ

ನಟಿ ಮಂದಿರಾ ಬೇಡಿ ಪತಿ , ನಿರ್ದೇಶಕ ರಾಜ್ ಕೌಶಲ್ ನಿಧನರಾಗಿದ್ದಾರೆ. ನಿರ್ದೇಶಕ ಒನಿರ್ ಈ ವಿಚಾರವನ್ನು ದೃಢಪಡಿಸಿದ್ದಾರೆ. ಬಹಳ ಬೇಗ ಹೋದಿರಿ. ನಿರ್ದೇಶಕ ಮತ್ತು ನಿರ್ಮಾಪಕ ರಾಜ್ ಕೌಶಲ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಬೇಸರದ ವಿಷಯ. ನನ್ನ ಮೊದಲ ಸಿನಿಮಾ ಮೈ ಬ್ರದರ್ ನಿಖಿಲ್‌ನ ನಿರ್ಮಾಪಕರು ಅವರು. ನಮ್ಮ ವಿಷನ್ ನೋಡಿ ಬೆಂಬಲಿಸಿದ ಕೆಲವರಲ್ಲಿ ಇವರೂ ಒಬ್ಬರು ಎಂದು ಟ್ವೀಟ್ ಮಾಡಿದ್ದಾರೆ.

ರಾಜ್ ಅವರು ಮನೆಯಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ಮನೆಯವರೆಲ್ಲರೂ ಇದ್ದರು. ಆದರೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸೌಲಭ್ಯ ಸಿಗಲಿಲ್ಲ ಎಂದು ನಟ ರೋಹಿತ್ ಹೇಳಿದ್ದಾರೆ. ನಟಿ ದಿವ್ಯಾ ದತ್ತಾ ಅವರು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ದತ್ತು ಪಡೆದ ಮಗುವಿನ ಬಗ್ಗೆ ಕೆಟ್ಟ ಕಮೆಂಟ್..ಕೆಂಡವಾದ ಮಂದಿರಾ

ಬರಹಗಾರ-ನಿರ್ದೇಶಕ-ನಿರ್ಮಾಪಕ ಅವರ ವೃತ್ತಿಜೀವನದ ಮೂರು ಸಿನಿಮಾ ಮಾಡಿದ್ದಾರೆ - ಪ್ಯಾರ್ ಮೇ ಕಭಿ ಕಭಿ, ಶಾದಿ ಕಾ ಲಾಡೂ ಮತ್ತು ಆಂಥೋನಿ ಕೌನ್ ಹೈ. ಅವರು ಕಾಪಿರೈಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಚಲನಚಿತ್ರಗಳಲ್ಲಿ, ಅವರು ಸುಭಾಷ್ ಘಾಯ್ ಅವರ ತ್ರಿಮೂರ್ತಿ ಸೇರಿದಂತೆ ಮುಕುಲ್ ಆನಂದ್ ಅವರಿಗೆ ಸಹಾಯ ಮಾಡಲು ಪ್ರಾರಂಭಿಸಿದರು.

Scroll to load tweet…

ಅವರು 1998 ರಲ್ಲಿ ತಮ್ಮದೇ ಆದ ಜಾಹೀರಾತು ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು ಮತ್ತು 800 ಕ್ಕೂ ಹೆಚ್ಚು ಜಾಹೀರಾತುಗಳನ್ನು ನಿರ್ದೇಶಿಸಿದರು.