IAS ಅಧಿಕಾರಿಯಾಗ್ಬೇಕಿದ್ದ ಮಲ್ಲಿಕಾ ಮನೆಬಿಟ್ಟು ಓಡಿ ಬಿಚ್ಚೋಲೆ ಗಂಗಮ್ಮ ಆಗಿದ್ದೇ ರೋಚಕ!
IAS ಅಧಿಕಾರಿಯಾಗ್ಬೇಕಿದ್ದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಮನೆಬಿಟ್ಟು ಓಡಿ ಬಿಚ್ಚೋಲೆ ಗಂಗಮ್ಮ ಆಗಿದ್ದೇ ರೋಚಕ. ಬೋಲ್ಡ್ ನಟಿಯ ಕುತೂಹಲದ ಮಾಹಿತಿ.
ಬಾಲಿವುಡ್ ಹಾಗೂ ಹಾಲಿವುಡ್ನಲ್ಲೂ ಬಿಚ್ಚೋಲೆ ಗಂಗಮ್ಮಾ ಎಂದೇ ಫೇಮಸ್ ಆಗಿರೋ ನಟಿ ಮಲ್ಲಿಕಾ ಶೆರಾವತ್ (Mallika Sherawat). 'ಮರ್ಡರ್', 'ಪ್ಯಾರ್ ಕೆ ಸೈಡ್ ಎಫೆಕ್ಟ್ಸ್', 'ಶಾದಿ ಸೆ ಪೆಹ್ಲೆ', 'ವೆಲ್ ಕಮ್', 'ಹಿಸ್' ಮತ್ತು 'ಡಬಲ್ ಧಮಾಲ್' ನಂತಹ ಅನೇಕ ಚಿತ್ರಗಳಲ್ಲಿ ಬೋಲ್ಡ್ ಸೀನ್ಗಳಿಂದಲೇ ಹಲ್ಚಲ್ ಸೃಷ್ಟಿಸಿದ ಕಲಾವಿದೆ. ಅದರಲ್ಲಿಯೂ ಅವರು ನಟಿಸಿದ್ದ ಮರ್ಡರ್ ಚಿತ್ರದಲ್ಲಿ ಅವರು ಮಾಡಿದ ದೃಶ್ಯಗಳನ್ನು ನೋಡಿ ಹುಬ್ಬೇರಿಸಿದವರೇ ಜಾಸ್ತಿ. ಈ ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳಿಂದ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದಾಕೆ. ಈಕೆಯ ಈ ಬೋಲ್ಡ್ನೆಸ್ ನೋಡಿ ಕೆಲವು ನಾಯಕರು, ನಿರ್ದೇಶಕರು, ನಿರ್ಮಾಪಕರು ನೇರವಾಗಿ ಮಂಚಕ್ಕೂ ಕರೆದಿದ್ದರಂತೆ. ಈ ಕುರಿತು ನಟಿಯೇ ಹೇಳಿಕೊಂಡಿದ್ದರು. 'ಎಲ್ಲಾ ಎ-ಲಿಸ್ಟರ್ ನಾಯಕರು ನನ್ನೊಂದಿಗೆ ಸಿನಿಮಾ ಮಾಡಲು ನಿರಾಕರಿಸಿದರು. ಏಕೆಂದರೆ ನಾನು ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ಎಂದಿದ್ದರು. ಎಲ್ಲರೂ ತಮ್ಮೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಮಾತ್ರ ಇಷ್ಟಪಡುತ್ತಾರೆ. ಆದರೆ ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ. ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ ಎಂದು ನಟಿ ಹೇಳಿದ್ದರು.
ಇದೀಗ 46 ವರ್ಷದ ನಟಿ ಮಲ್ಲಿಕಾ ಕುರಿತು ಇಂಟೆರೆಸ್ಟಿಂಗ್ (interesting) ಮಾಹಿತಿಯೊಂದು ಹೊರಬಂದಿದೆ. ಅದೇನೆಂದರೆ, ಈಕೆಯನ್ನು ಈಗಿನ ವೇಷದಲ್ಲಿ ನೋಡಿದರೆ ಸಂಪ್ರದಾಯಸ್ಥ ಕುಟುಂಬದಿಂದ ಬಂದ ಹೆಣ್ಣುಮಗಳು ಎಂದು ಬಹುಶಃ ಯಾರೂ ಒಪ್ಪಿಕೊಳ್ಳಲಿಕ್ಕೆ ಇಲ್ಲ. ಅತಿಯಾದ ಬೋಲ್ಡ್ನೆಸ್ನಿಂದಲೇ ಹೆಸರು ಮಾಡಿರುವ ನಟಿ ಮಲ್ಲಿಕಾ ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಜನಿಸಿದವರು. ಇವರದ್ದು ಸಂಪ್ರದಾಯಸ್ಥ ಕುಟುಂಬ. ಮಲ್ಲಿಕಾ ತಂದೆ ಮಗಳನ್ನು ಐಎಎಸ್ ಅಧಿಕಾರಿ ಮಾಡಬೇಕು ಎಂದುಕೊಂಡಿದ್ದರು. ಆದರೆ ನಟನೆಯಲ್ಲಿ ಆಸಕ್ತಿಯಿದ್ದ ಮಲ್ಲಿಕಾ ತಂದೆಗೆ ಈ ರೀತಿ ಆಸೆ ಇದ್ದುದು ತಿಳಿಯುತ್ತಲೇ ಮನೆ ಬಿಟ್ಟು ಓಡಿ ಬಂದಿದ್ದರು. ಈಕೆ ಹಾದಿ ತಪ್ಪುತ್ತಿದ್ದಾಳೆ ಎಂದು ತಿಳಿದ ತಂದೆ ಮದುವೆಗೂ ರೆಡಿ ಮಾಡಿದ್ದರಂತೆ. ಆದರೆ ಅಷ್ಟರಲ್ಲಿಯೇ ನಟಿ ಓಡಿ ಹೋಗಿಬಿಟ್ಟರು.
ಯುವಕರು, ವಯಸ್ಸಾದೋರು ... ನಿಮ್ಗೆ ಸುಖ ಎಲ್ಲಿ ಸಿಗತ್ತೆ ಎಂದ ಪ್ರಶ್ನೆಗೆ ಶಿಲ್ಪಾ ಹೇಳಿದ್ದೇನು?
ಖುದ್ದು ಮಲ್ಲಿಕಾ ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ನಟಿಯ ಮೂಲ ನಿಜವಾದ ಹೆಸರು ರೀಮಾ ಲಂಬಾ, ಆದರೆ ಚಿತ್ರರಂಗ ಪ್ರವೇಶಿಸುವ ಮುನ್ನ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಇದಕ್ಕೆ ಕಾರಣವೂ ಇದೆ. ಸಂಪ್ರದಾಯಸ್ಥ ಕುಟುಂಬದ ತಂದೆಗೆ ಮಗಳು ಸಿನಿಮಾ ರಂಗ ಪ್ರವೇಶಿಸುವ ಮನಸ್ಸು ಇರಲಿಲ್ಲ. ಅದಕ್ಕೆ ಅವರು ವಿರೋಧಿಸಿದ್ದರು. ಮಗಳು ಒಪ್ಪದಿದ್ದಾಗ, ಸಿನಿಮಾದಲ್ಲಿ ಕೆಲಸ ಮಾಡಬೇಕೆಂದರೆ ಕುಟುಂಬದ ಸರ್ನೇಮ್ ಬಳಸುವಂತಿಲ್ಲ ಎಂದು ಕಂಡೀಷನ್ ಹಾಕಿದ್ದರು. ಇದಕ್ಕೆ ನಟಿ ಒಪ್ಪಿಕೊಂಡು ಹೆಸರನ್ನೇ ಬದಲಾಯಿಸಿಕೊಂಡರಂತೆ!
ಅಷ್ಟಕ್ಕೂ ಶೆರಾವತ್ ಎಂಬುದು ನಟಿಯ ತಾಯಿಯ ತವರು ಮನೆಯ ಸರ್ನೇಮ್. ಇದನ್ನೇ ಸರ್ನೇಮ್ ಆಗಿ ಇಟ್ಟುಕೊಂಡರು. ಬಾಲ್ಯದಿಂದಲೂ ನನ್ನ ತಾಯಿ ನನಗೆ ಸಾಕಷ್ಟು ಬೆಂಬಲ ನೀಡಿದ್ದರು ಎಂದಿದ್ದಾರೆ ನಟಿ. ಆದರೆ, ಚಿತ್ರರಂಗಕ್ಕೆ ಬಂದ ನಂತರ ಕುಟುಂಬದವರು ದೂರವಾದರು. ಸಿನಿಮಾಕ್ಕೂ ಬರುವ ಮುನ್ನೆ ಗಗನಸಖಿಯಾಗಿಯೂ ಕೆಲಸ ಮಾಡಿದ್ದರು. ಈ ಸಮಯದಲ್ಲಿಯೇ ಪೈಲಟ್ ಆಗಿದ್ದ ಕರಣ್ ಸಿಂಗ್ ಗಿಲ್ (Karan Singh Gill) ಅವರ ಜೊತೆ ಪ್ರೇಮವಾಗಿ ಮದುವೆಯೂ ಆಯಿತು. ಆದರೆ ವರ್ಷದಲ್ಲಿಯೇ ಇಬ್ಬರೂ ಬೇರೆಯಾದರು. ನಂತರ ಸಿನಿಮಾ ಪ್ರವೇಶಿಸಿದ ನಟಿ ಮದುವೆ ಬಗ್ಗೆ ಗೌಪ್ಯತೆ ಕಾಪಾಡಿದ್ದರು.
2004ರಲ್ಲಿ ಮಲ್ಲಿಕಾ ಶೆರಾವತ್ ‘ಮರ್ಡರ್’ ಚಿತ್ರದಲ್ಲಿ ನಟಿಸಿದಾಗ ವರ್ಷಗಟ್ಟಲೆ ಕಾಯುತ್ತಿದ್ದ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ಅವರು ತಮ್ಮ ಬೋಲ್ಡ್ ಸ್ಟೈಲ್ನಿಂದ ಪ್ರೇಕ್ಷಕರಲ್ಲಿ ಜನಪ್ರಿಯರಾದರು. 2002ರಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಮಲ್ಲಿಕಾ ವಿಶೇಷ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದರು. ಬಳಿಕ 2003ರಲ್ಲಿ ಬಂದ ಖ್ವಾಹಿಶ್ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ನಂತರ ಬಂದ ಮರ್ಡರ್ ಸಿನಿಮಾ ದೊಡ್ಡ ಮಟ್ಟದ ಬ್ರೇಕ್ ತಂದು ಕೊಡ್ತು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಮಲ್ಲಿಕಾ 2019ರಲ್ಲಿ ವೆಬ್ ಸೀರಿಸ್ ಮೂಲಕ ಒಟಿಟಿಯಲ್ಲಿ ಮಿಂಚಿದ್ದರು. ಸದ್ಯ ಮಲ್ಲಿಕಾ ಅನೇಕ ವರ್ಷಗಳ ಬಳಿಕ RK/RKay ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಲ್ಲಿಕಾ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನೆಲೆಸಿದ್ದಾರೆ. ಭಾರತಕ್ಕಿಂತ ಹೆಚ್ಚಾಗಿ ಅಮೆರಿಕದಲ್ಲೇ ಸಮಯ ಕಳೆಯುತ್ತಿದ್ದಾರೆ.
ಟಾಲಿವುಡ್ ನಟಿ ಸಮಂತಾ ರಾಜಕೀಯಕ್ಕೆ ಎಂಟ್ರಿ ಫಿಕ್ಸ್? ಪಕ್ಷದ ಮಾಹಿತಿಯೂ ವೈರಲ್