ಮಲೈಕಾ ಅರೋರಾ ಹಾಗೂ ಅರ್ಜುನ್ ಸರ್ಜಾ ಡೇಟಿಂಗ್ ಮಾಡುತ್ತಿರುವುದು ಹಳೆಯ ವಿಚಾರ. ಏಪ್ರಿಲ್ ತಿಂಗಳು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು ಈ ಸುದ್ದಿಯನ್ನು ಮಲೈಕಾ ತಳ್ಳಿ ಹಾಕಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ ಫೋಟೋ ಕ್ರಾಪ್ ಮಾಡಿದ ರಾಧಿಕಾ, ಏನಿರಬಹುದು?

"ನಾವಿಬ್ಬರೂ ಮದುವೆಯಾಗುತ್ತಿದ್ದೇವೆ ಎನ್ನುವ ಸುದ್ದಿಯಲ್ಲಿ ಹುರುಳಿಲ್ಲ" ಎಂದು ಮಲೈಕಾ ಹೇಳಿದ್ದಾರೆ. ನಾವು ಆಗಾಗ ಒಟ್ಟಿಗೆ ಸಿಗುತ್ತಿರುತ್ತೇವೆ. ಒಟ್ಟಿಗೆ ಊಟ ಮಾಡುತ್ತೇವೆ. ಪಾರ್ಟಿಗಳಿಗೆ ಹೋಗುತ್ತೇವೆ. ಇದು ನಮ್ಮಿಬ್ಬರ ನಡುವೆ ಸಂಬಂಧ ಇದೆ ಎನ್ನುವ ವದಂತಿಯನ್ನು ಹುಟ್ಟು ಹಾಕಿದೆ. ಇನ್ನೂ ಮುಂದುವರೆದು ಮದುವೆವರೆಗೆ ಬಂದು ನಿಂತಿದೆ ಎಂದು ಹೇಳಿದ್ದಾರೆ. 

‘ಬಾಹುಬಲಿ’ಯನ್ನು ಮೀರಿಸ್ತಾರಾ ಕಂಗನಾ ರಾಣಾವತ್?

ಆಂಗ್ಲ ಸುದ್ದಿವಾಹಿನಿಯೊಂದರ ವರದಿ ಪ್ರಕಾರ, ಏಪ್ರಿಲ್ 18 ರಿಂದ 22 ರೊಳಗೆ ಮಲೈಕಾ- ಅರ್ಜುನ್ ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ. ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಲಿದ್ದಾರೆ ಎಂದು ವರದಿ ಮಾಡಿತ್ತು. 

ಇತ್ತೀಚಿಗೆ ಮಲೈಕಾ, ಅರ್ಜುನ್ ಮಾಲ್ಡೀವ್ಸ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದು ಉರಿಯುವ ಬೆಂಕಿಗೆ ತುಪ್ಪವನ್ನು ಸುರಿದಂತಾಗಿತ್ತು.