ಸ್ಯಾಂಡಲ್‌ವುಡ್ ರಾಕಿಂಗ್ ಜೋಡಿ ಕುಟುಂಬಕ್ಕೆ ಡಿಸೆಂಬರ್ 2 ರಂದು ಲಿಟಲ್ ಪ್ರಿನ್ಸೆಸ್ ಆಗಮನವಾಗಿತ್ತು. ಸ್ಪೆಷಲ್ ಡೇ ನೋಡಿ ಮಗಳ ಫೋಟೋ ರಿವೀಲ್ ಮಾಡುವುದಾಗಿ ರಾಧಿಕಾ-ಯಶ್ ನಿರ್ಧಾರ ಮಾಡಿದ್ದಾರೆ.

ಸೂಕ್ತ ಸಮಯದಲ್ಲಿ ಯಶ್-ಮಗಳ ಫೋಟೋ ರಿಲೀಸ್ ಮಾಡ್ತೀನಿ: ರಾಧಿಕಾ ಪಂಡಿತ್

ಇನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಬ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು ಆ್ಯಕ್ಟಿವ್ ಇರುವ ರಾಧಿಕಾ ಪಂಡಿತ್ ಹೊಸ ಫೋಟೋ ಹಾಕುವ ಮೂಲಕ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ. ಅಷ್ಟೇ ಅಲ್ಲದೇ ಅದಕ್ಕೆ 'Photo bombed ಮಾಡಿರುವ ಕಾರಣ ಫೋಟೋವನ್ನು ಕ್ರಾಪ್ ಮಾಡಬೇಕಾಯ್ತು. ಬಟ್ ನಿಮಗೆಲ್ಲಾ ಒರಿಜಿನಲ್ ಫೋಟೋ ಇಷ್ಟವಾಗುತ್ತದೆ. ಅತಿ ಶ್ರೀಘ್ರದಲ್ಲಿ ಫೋಟೋ ಅಪ್ಲೋಡ್ ಮಾಡುತ್ತೀನಿ' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಆ ಫೋಟೋ ಅಡ್ಡ ಬಂದಿದ್ದಾದರೂ ಯಾರು ಎಂಬ ಕುತೂಹಲ ಎಲ್ಲರದ್ದು.