ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರನ್ನು ಮಾಡಿದ ಚಿತ್ರ.  ಈ ಚಿತ್ರವನ್ನು ಮೀರಿಸುವಂತಹ ಚಿತ್ರವನ್ನು ಮಾಡಲು ಹೊರಟಿದ್ದಾರೆ ಕಂಗನಾ ರಾಣಾವತ್. 

ಟಾಲಿವುಡ್‌ಗೂ ‘ಚಮಕ್‌’ ಕೊಡಲಿದ್ದಾರೆ ಗಣೇಶ್-ರಶ್ಮಿಕಾ

ಕಂಗಾನಾ ರಾಣಾವತ್ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಬಾಲಿವುಡ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಹೊಸ ರೀತಿಯ, ಢಿಪರೆಂಟ್ ಎನಿಸುವಂತಹ ಬಿಗ್ ಬಜೆಟ್ ಸಿನಿಮಾವನ್ನು ಕಂಗನಾ ಮಾಡುತ್ತಿದ್ದಾರಂತೆ. ಈಗಾಗಲೇ ಈ ಚಿತ್ರಕ್ಕೆ ಕಥೆ ಅಂತಿಮವಾಗಿದ್ದು ಸದ್ಯದಲ್ಲೇ ಭರ್ಜರಿ ಫೋಟೋಶೂಟ್ ಮಾಡುತ್ತೇನೆ ಎಂದಿದ್ದಾರೆ. 

ಅಮೀರ್ ಖಾನ್ ಪುತ್ರಿ ಪ್ರೈವೇಟ್ ಪೋಟೋ ಲೀಕ್..?

ಈ ಬಾರಿ ಮಾಡುತ್ತಿರುವುದು ಬಯೋಪಿಕ್ ಅಥವಾ ಐತಿಹಾಸಿಕ ಸಿನಿಮಾವಲ್ಲ. ಬದಲಾಗಿ ಕಬಡ್ಡಿ ಕಥೆಯನ್ನು ಆಧಾರಿತ ಸಿನಿಮಾವನ್ನು ಮಾಡುತ್ತಿದ್ದಾರೆ. ಹಾಗಾಗಿ ಕಬಡ್ಡಿ ಟ್ರೇನಿಂಗ್ ಪಡೆದುಕೊಳ್ಳುತ್ತಿದ್ದಾರೆ ಕಂಗನಾ. 

ಸದ್ಯ ಕಂಗನಾ ಜಯಲಿಲತಾ ಅವರ ಬಯೋಪಿಕ್‌ನಲ್ಲಿ ಬ್ಯುಸಿಯಾಗಿದ್ದಾರೆ. ಎ ಎಲ್ ವಿಜಯ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ಹೊಸ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ ಕಂಗನಾ.