Asianet Suvarna News Asianet Suvarna News

ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಪ್ಪ-ಅಮ್ಮ ಆಗ್ತಿದ್ದಾರಾ? ನಟ ಹೇಳಿದ್ದೇನು?

ಕೆಲ ವರ್ಷಗಳಿಂದ ಡೇಟಿಂಗ್​ನಲ್ಲಿರೋ ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಪ್ಪ- ಅಮ್ಮ ಆಗ್ತಿದ್ದಾರೆ ಎನ್ನೋ ಸುದ್ದಿ ಬಹಳ ದಿನಗಳಿಂದ ಹರಿದಾಡ್ತಿದೆ. ಅರ್ಜುನ್​ ಹೇಳಿದ್ದೇನು? 
 

Malaika Arora pregnancy rumours Arjun Kapoor strongly reacts Dont try and make it personal
Author
First Published Jun 1, 2023, 1:21 PM IST

ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಫೇರ್ ಎಲ್ಲರಿಗೂ ತಿಳಿದದ್ದೇ. ಮಲೈಕಾಗೆ 49 ವರ್ಷ ವಯಸ್ಸಾಗಿದ್ದರೆ, ಅರ್ಜುನ್​ ಅವರಿಗಿಂತ 12 ವರ್ಷ ಚಿಕ್ಕವರು. ವಯಸ್ಸು 49 ಆದರೂ ಫಿಟ್​ನೆಸ್​ (Fitness) ಕಾಪಾಡಿಕೊಂಡಿರುವ ನಟಿ ಮಲೈಕಾ ಕೆಲ ವರ್ಷಗಳಿಂದ ದೇಹ ಪ್ರದರ್ಶನವಿಲ್ಲದ ಬಟ್ಟೆಗಳನ್ನು ಧರಿಸಿದ್ದೇ ಇಲ್ಲ ಎನ್ನಬಹುದೇನೋ. ರಿಯಾಲಿಟಿ ಷೋಗಳಿಗೆ ಜಡ್ಜ್​ ಆಗಿ ಬರುವುದರಿಂದ ಹಿಡಿದು ಹೊರಗಡೆ ಎಲ್ಲಿಯೇ ಹೋಗುವುದಿದ್ದರೂ ಅರ್ದಂಬರ್ಧ ಡ್ರೆಸ್​ ಧರಿಸುತ್ತಾರೆ. ಇತರ ಯುವ ನಟಿಯರ ಜೊತೆ ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುತ್ತಾ ತಿರುಗಾಡುವುದು ಇವರಿಗೆ ತುಂಬಾ ಇಷ್ಟ. ಇದಕ್ಕಾಗಿ ಸಾಕಷ್ಟು ಬಾರಿ ಟ್ರೋಲ್​ಗೆ ಒಳಗಾಗಿದ್ದರೂ, ಅದರಿಂದಲೇ ಇನ್ನಷ್ಟು ಫೇಮಸ್​ ಆಗುತ್ತಿರುವವರು ನಟಿ ಮಲೈಕಾ. ಅರ್ಬಾಜ್​ ಖಾನ್​ ಅವರಿಗೆ ಡಿವೋರ್ಸ್​ ಕೊಟ್ಟು ನಟ ಅರ್ಜುನ್​ ಕಪೂರ್​ ಜೊತೆ ಬಹಳ ವರ್ಷಗಳಿಂದ ಡೇಟಿಂಗ್​ನಲ್ಲಿದ್ದಾರೆ ಮಲೈಕಾ (Malaika Arora). ಇವರಿಬ್ಬರ ಡೇಟಿಂಗ್​ ವಿಷಯ ಬಿಗ್​-ಟೌನ್​ನಲ್ಲಿ ಬಹಳ ಹಳತಾಗಿದ್ದಾಗಿದೆ. ಮಾಜಿ ಪತಿಯ ಜೊತೆ ಮಧುರ ಸ್ನೇಹವನ್ನು ಇಟ್ಟುಕೊಂಡು, ನಟ ಅರ್ಜುನ್​ ಕಪೂರ್​ (Arjun Kapoor) ಜೊತೆ ಬಹಳ ವರ್ಷಗಳಿಂದ ಡೇಟಿಂಗ್​ನಲ್ಲಿರುವ ನಟಿ ಮಲೈಕಾ ತಮ್ಮಿಬ್ಬರ ಸಂಬಂಧದ ಕುರಿತು  ಕೆಲ ದಿನಗಳ ಹಿಂದೆ  ಮುಕ್ತವಾಗಿ ಮಾತನಾಡಿದ್ದರು. ನಾವು ಮದುವೆಯಾಗದಿದ್ದರೇನು,  ಪ್ರೀ ಹನಿಮೂನ್ ಹಂತವನ್ನು ಅನಭವಿಸುತ್ತಿದ್ದೇವೆ ಎಂದಿದ್ದರು. ಅರ್ಜುನ್​ ಕಪೂರ್​ ಜೊತೆ ಮದುವೆ ಆಗುವುದಿಲ್ಲವೆ ಎಂದು ಕೇಳಿದಾಗ, ಮದುವೆ ಯಾಕೆ? ಪ್ರೀ ಹನಿಮೂನ್​ ಆನಂದ ಅನುಭವಿಸುತ್ತಿದ್ದೇವೆ.  ಮದುವೆ ಎನ್ನುವುದು ಇಬ್ಬರ ನಡುವೆ ಚರ್ಚೆಯಾಗುವ ವಿಷಯ. ನಮಗೆ ಅನಿಸಿದರೆ, ನಾವು ಅದರ ಬಗ್ಗೆ ಯೋಚಿಸುತ್ತೇವೆ, ಆದರೆ ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ ಎಂದಿದ್ದರು. 

ವಯಸ್ಸಾದರೂ  ದೇಹವನ್ನು ಫಿಟ್​ ಆಗಿಟ್ಟುಕೊಂಡು ಯುವತಿಯಂತೆಯೇ ಮಿಂಚುತ್ತಿದ್ದಾರೆ ಮಪಲೈಕಾ.  ಸಿನಿ ತಾರೆಯರು ಸದಾ ವ್ಯಾಯಾಮ, ಯೋಗ, ಡಯೆಟ್​ (Diet) ಎನ್ನುತ್ತಾ ತಮ್ಮ ದೇಹವನ್ನು ಸುಂದರವಾಗಿಟ್ಟುಕೊಳ್ಳುವುದು ಹೊಸ ವಿಷಯವಲ್ಲ. ಅದರಂತೆಯೇ ಮಲೈಕಾ ಕೂಡ  ದೇಹಕ್ಕೆ ಅಗತ್ಯವಾಗಿ ಬೇಕಾದ ಯೋಗ, ವ್ಯಾಯಾಮ ಮಾಡುತ್ತಾ ಶರೀರವನ್ನು ಫಿಟ್​ ಆಗಿ ಇರಿಸಿಕೊಕೊಳ್ಳುವ ನಟಿಯರು ಕೆಲವರಿದ್ದಾರೆ. ಅವರ ಪೈಕಿ ಬಾಲಿವುಡ್​ ನಟಿ ಮಲೈಕಾ ಕೂಡ ಫಿಟ್​ ಆಗಿದ್ದಾರೆ.  ಡಯೆಟ್​ ಆಹಾರದ ಜೊತೆ ನಿಯಮಿತ ವ್ಯಾಯಾಮ ಮತ್ತು ಯೋಗ (Yoga) ಮಾಡುವ ಮೂಲಕ ಮಲೈಕಾ  ಅಷ್ಟೊಂದು ವಯಸ್ಸಾದಂತೆ ಕಾಣುತ್ತಿಲ್ಲ.  ಇದೀಗ ಅರ್ಧ ಸೆಂಚುರಿ ಹತ್ತಿರ ವಯಸ್ಸಾಗಿದ್ದರೂ ಇದೇ ಕಾರಣಕ್ಕೆ ಇದೀಗ ಮದುಮಗಳಾಗಲು ಈಕೆ ರೆಡಿಯಾಗಿದ್ದಾರೆ ಎನ್ನಲಾಗಿತ್ತು. 

Arjun Kapoor ಜತೆಗಿನ ಪ್ರೀ ಹನಿಮೂನ್​ ಅನುಭವ ಹಂಚಿಕೊಂಡ ನಟಿ ಮಲೈಕಾ!

ಇದರ ನಡುವೆಯೇ ಈಗ ಹೊಸ ವಿಷಯವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದೇನೆಂದರೆ ಮಲೈಕಾ ಅರೋರಾ ಗರ್ಭಿಣಿಯಾಗಿದ್ದಾರೆ ಎನ್ನುವುದು. ಮಲೈಕಾ ಅರೋರಾ ಅರ್ಜುನ್‌ ಕಪೂರ್‌ ಜತೆ ಮದುವೆ ಆಗದೇ, ಗರ್ಭಿಣಿ ಆಗಿದ್ದಾರೆಂಬ ಸುದ್ದಿ ಬಾಲಿವುಡ್‌ನಲ್ಲಿ ಮತ್ತೆ ಹಲ್‌ಚಲ್‌ ಸೃಷ್ಟಿಸಿದ್ದು, ದಿನವೂ ಇದರ ಕುರಿತು ಹಲವಾರು ಸುದ್ದಿಗಳು ಬರುತ್ತಲೇ ಇವೆ. ಮಲೈಕಾ 19 ವರ್ಷಗಳ ದಾಂಪತ್ಯದ ನಂತರ 2017ರಲ್ಲಿ ಅರ್ಬಾಜ್​ ಖಾನ್​ಗೆ  (Arbaz Khan) ವಿಚ್ಛೇದನ ನೀಡಿದ್ದರು. ಅವರಿಗೆ ಓರ್ವ 20 ವಯಸ್ಸಿ ಅಹ್ರಾ ಖಅನ್​ ಎಂಬ ಮಗ ಇದ್ದಾನೆ. ಇದೀಗ ಅರ್ಜುನ್ ಕಪೂರ್ ಮಗುವಿಗೆ ಮಲೈಕಾ ತಾಯಿಯಾಗುತ್ತಿದ್ದಾರೆ ಎನ್ನುವ ಬಿಸಿಬಿಸಿ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. 

ಈ ಸುದ್ದಿ ಒಂದು ಹಂತವನ್ನು ಮೀರಿದ್ದು, ಇದಕ್ಕೆ ಅರ್ಜುನ್​ ಕಪೂರ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಯನ್ನು ಕೇಳಿ  ಗರಂ ಆಗಿರೋ ನಟ, ಖಾರವಾಗಿ  ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮ ವೈಯಕ್ತಿಕ ಬದುಕಿನೊಂದಿಗೆ ಆಟವಾಡುವ ಧೈರ್ಯ ಬೇಡ. ಸೆಲೆಬ್ರಿಟಿಗಳೂ (Celebrity) ಮನುಷ್ಯರು ಎಂಬುದನ್ನು ಜನರು ಮರೆತಂತಿದೆ.  ನೆಗೆಟಿವಿಟಿ ಹರಡುವುದು ಬಹಳ ಸುಲಭ. ನಾವು ಕಲಾವಿದರು. ನಮಗೂ ಒಂದು ವೈಯಕ್ತಿಕ ಜೀವನವಿದೆ. ಈಗಾಗಲೇ ನಮ್ಮ ಜೀವನದಲ್ಲಿ ನೀವೂ ಎಂಟ್ರಿ ಆಗಿದ್ದೀರಿ. ಹಾಗಾಗಿ ಏನೂ ವಿಚಾರ ಹೊರಹಾಕಬೇಕಿದ್ದರೂ ಸತ್ಯಾಸತ್ಯತೆ ಗಮನದಲ್ಲಿರಲಿ. ಊಹೆ ಮಾಡಿ ಬರೆಯುವುದಲ್ಲ. ಏಕೆಂದರೆ ನಾವೂ ಮನುಷ್ಯರೇ. ಏನಾದರೂ ಸುದ್ದಿಯನ್ನು ಹರಡುವ ಮುನ್ನ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಿ' ಎಂದು ಖಾರವಾಗಿ ಪ್ರತಿಕ್ರಿಯೆ  ನೀಡಿದ್ದಾರೆ.

Arjun Kapoor, Malaika Arora: ಮದುವೆ ಹಿಂಟ್​ ಕೊಡುತ್ತಲೇ ಅಜ್ಞಾತ ಸ್ಥಳಕ್ಕೆ ಎಸ್ಕೇಪ್​!
 
ನೀವು ಏನಾದರೂ ಇಂಥದ್ದೊಂದು ಸುದ್ದಿ ಬರೆಯುವ ಮುನ್ನ  ಒಮ್ಮೆ ನಮ್ಮೊಂದಿಗೆ ಚರ್ಚಿಸಿ. ಕನಿಷ್ಠ ಇಷ್ಟು ಮಾಡುತ್ತೀರಿ ಎಂದು ಭಾವಿಸುತ್ತೇನೆ. ಇಂಥ ವಿಷಯ ನಿಜವಾಗಿದ್ದರೆ ನಾವು  ಏನನ್ನೂ ಮುಚ್ಚಿಡುವುದಿಲ್ಲ. ಏನಾದರೂ ಒಳ್ಳೆಯ ಸುದ್ದಿಗಳು ಇದ್ದರೆ  ಅದನ್ನು ಜನರಿಗೆ ರವಾನಿಸಬೇಕು. ವದಂತಿಗಳನ್ನು ಏಕೆ ಸ್ಪಷ್ಟಪಡಿಸಬೇಕು ಎಂದು ಅರ್ಜುನ್​ ಪ್ರಶ್ನಿಸಿದ್ದಾರೆ. 

Follow Us:
Download App:
  • android
  • ios