Asianet Suvarna News Asianet Suvarna News

ಡಿವೋರ್ಸ್‌ಗೆ ಹೆದರ ಬೇಡಿ, ಬಾಯ್‌ಫ್ರೆಂಡ್‌ ಜತೆ ಖುಷಿಯಾಗಿರುವೆ: ಮಾಜಿ ಪತಿ ಬಗ್ಗೆ Malaika Arora ಹೇಳಿಕೆ

ಕೊನೆಗೂ ಮಾಜಿ ಪತಿ ಬಗ್ಗೆ ಮೌನ ಮುರಿದ ಮಲೈಕಾ ಅರೋರಾ. ಬಾಯ್‌ ಫ್ರೆಂಡ್‌ ಮತ್ತು ಮನ ಜೊತೆ ಸಂತೋಷವಾಗಿರುವೆ ಎಂದ ನಟಿ...

Malaika Arora opens about ex husband Arbaaz khan vcs
Author
First Published Oct 4, 2022, 2:06 PM IST

48ರ ಹಾಟ್‌ ನಟಿ, ಬ್ಯೂಟಿಫುಲ್ ಸಿಂಗಲ್ ಪೇರೆಂಟ್ ಮಾಮ್, ಟಾಪ್ ಮಾಡಲ್ ಹೀಗೆ ಡಿಫರೆಂಟ್ ಡಿಫರೆಂಟ್ ಬಿರುದುಗಳಿಗೆ ಪಾತ್ರರಾಗಿರುವ ಬಾಲಿವುಡ್ ನಟಿ ಮಲೈಕಾ ಅರೋರಾ ಮೊದಲ ಬಾರಿಗೆ ಡಿವೋರ್ಸ್‌, ಮಗ ಮತ್ತು ಬಾಯ್‌ಫ್ರೆಂಡ್‌ ಬಗ್ಗೆ ಮಾತನಾಡಿದ್ದಾರೆ. ಕುಟುಂಬಕ್ಕೆ ಹೆದರಿ ಸಂಸಾರ ಅನುಸರಿಸಿಕೊಂಡು ಹೋಗುವ ಹೆಣ್ಣು ಮಕ್ಕಳಿಗೆ ಧೈರ್ಯ ಕೊಟ್ಟಿದ್ದಾರೆ ಜೊತೆಗೆ ತಮ್ಮ ಪರ್ಸನಲ್ ಲೈಫ್‌ನ ಒಂದೆರಡು ವಿಚಾರವನ್ನು ಹಂಚಿಕೊಂಡಿದ್ದಾರೆ.

ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 1998ರಲ್ಲಿ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮನಸ್ಥಾಪಗಳಿಂದ 2017ರಲ್ಲಿ ವಿಚ್ಛೇದನ ಪಡೆದುಕೊಂಡರು. ಆದರೆ ಇಬ್ಬರು ಮಗ ಆರ್ಹಾ ಖಾನ್‌ಗೆ ಕೋ-ಪೇರೆಂಟಿಂಗ್ ಮಾಡುತ್ತಿದ್ದಾರೆ. ಈಗ ಅರ್ಬಾಜ್ ಖಾನ್‌ ಮತ್ತು ಜಾರ್ಜಿಯಾ ಆಂಡ್ರಿಯಾನಿ ಡೇಟಿಂಗ್ ಮಾಡುತ್ತಿದ್ದಾರೆ, ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ರಿಲೇಷನ್‌ಶಿಪ್‌ನಲ್ಲಿದ್ದಾರೆ.

Malaika Arora opens about ex husband Arbaaz khan vcs

ಮಲೈಕಾ ಮಾತು:

ಅರ್ಬಾಜ್‌ ಖಾನ್‌ ಜೊತೆ ವಿಚ್ಛೇದನ ಪಡೆದ ನಂತರ ಮಲೈಕಾ ಸಂತೋಷವಾಗಿದ್ದಾರಂತೆ. 'ಅರ್ಬಾಜ್ ಮತ್ತು ನಾನು ಈಗ ತುಂಬಾನೇ ಮೆಚ್ಯೂರ್ ಆಗಿದ್ದೀವಿ ಹಾಗೂ ನೆಮ್ಮದಿಯಾಗಿದ್ದೀವಿ. ಅರ್ಬಾಜ್‌ ವಂಡರ್‌ಫುಲ್‌ ಮ್ಯಾನ್ ಹೀಗಾಗಿ ಆತನಿಗೆ ಬೆಸ್ಟ್‌ ಲೈಫ್‌ ಸಿಗಬೇಕು. ಕೆಲವೊಮ್ಮೆ ಜನರು ತುಂಬಾನೇ ಒಳ್ಳೆಯವರಾಗಿರುತ್ತಾರೆ ಆದರೆ ಒಟ್ಟಿಗೆ ಜೀವನ ಮಾಡಲು ಆಗುವುದಿಲ್ಲ. ಅದೇ ರೀತಿ ನಮ್ಮ ಕಥೆ ಆಗಿದೆ. ಆಗನಿಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡುವೆ' ಎಂದು ಮಲೈಕಾ ಮಸಾಲ ಮ್ಯಾಗಜಿನ್‌ ಜೊತೆ ಮಾತನಾಡಿದ್ದಾರೆ.

ಎಷ್ಟು ಟ್ರೋಲ್‌ ಮಾಡಿದ್ದರೂ ನಾನು ಇಂತಹ ಬಟ್ಟೆ ಹಾಕೋದು ಬಿಡಲ್ಲ ಎನ್ನುವ ಮಲೈಕಾ

ಜೀವನದಲ್ಲಿ ಸಂತೋಷವಾಗಿರಬೇಕು ಅಂದ್ರೆ ನಮ್ಮನ್ನು ನಾವು ಮೊದಲು ಪ್ರೀತಿಸಬೇಕು ಎಂದಿದ್ದಾರೆ. 'ನನ್ನ ಮಗನ ಜೊತೆ ನಾನು ಚೆನ್ನಾಗಿರುವೆ. ನಾನು ಖುಷಿಯಾಗಿರುವುದನ್ನು ಆತ ನೋಡುತ್ತಿದ್ದಾನೆ. ಡಿವೋರ್ಸ್‌ ನಂತರ ನನ್ನ ಮಜಿ ಪತಿ ಜೊತೆ ನಾನು ಚೆನ್ನಾಗಿರುವೆ. ಜೀವನ ಬದಲಾಯಿಸಿಕೊಳ್ಳಬೇಕು ಎಂದು ನಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ನನಗೆ ಖುಷಿ ಇದೆ ನಾನು ಅದಕ್ಕೆ ಬದ್ದಳಾಗಿರುವೆ. ಎಲ್ಲಾ ಮಹಿಳೆಯರಿಗೂ ನಾನು ಒಂದೇ ಹೇಳುವುದು ಯಾವ ಕಾರಣಕ್ಕೂ ಹೆದರಿಕೊಳ್ಳಬೇಡಿ. ನಿಮ್ಮ ಮನಸ್ಸು ಹೇಳುವುದನ್ನು ಕೇಳಿಸಿಕೊಳ್ಳಿ. ನೀವು ಅಂದುಕೊಂಡಷ್ಟು ಜೀವನ ಸುಲಭವಲ್ಲ. ನೀವು ಎಲ್ಲರನ್ನೂ ಖುಷಿಯಾಗಿಡಲು ಆಗುವುದಿಲ್ಲ' ಎಂದು ಮಲೈಕಾ ಹೇಳಿದ್ದಾರೆ.

ಮಗನ ಬಿಡಲು ಏರ್ಪೋರ್ಟಿಗೆ ಬಂದ ಅರ್ಬಾಜ್-ಮಲೈಕಾ! ನಾಚಿಕೆಯಾಗೋಲ್ವಾ ಎಂದ್ರು ನೆಟ್ಟಿಗರು!

2019ರಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ತಮ್ಮ ರಿಲೇಷನ್‌ಶಿಪ್‌ನಲ್ಲಿ ಬಹಿರಂಗ ಪಡಿಸಿದ್ದರು. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ರಿಲೇಷನ್‌ಶಿಪ್‌ ಬಗ್ಗೆ ಅರ್ಜುನ್ ಮಾತನಾಡಿದ್ದಾರೆ. ಜೀವನದಲ್ಲಿ ಸಣ್ಣ ಸಣ್ಣ ಹೆಜ್ಜೆ ಇಟ್ಟು ಆನಂತರ ನಾವು ಪಬ್ಲಿಕ್‌ನಲ್ಲಿ ಓಡಾಡಬೇಕು ಅಂತ ನಿರ್ಧಾರ ಮಾಡಿಕೊಂಡಿದ್ದರಂತೆ. 'ನಾನು ಡಿಸ್ ಜಾಯಿಂಟ್ (ತಂದೆ ತಾಯಿ ದೂರ ಆಗಿರುವ ಫ್ಯಾಮಿಲಿ) ಕುಟುಂಬದಲ್ಲಿ ಬೆಳೆದಿರುವುದು. ಕಣ್ಣೇದುರು ನಡೆಯುತ್ತಿರುವ ವಿಚಾರಗಳನ್ನು ಒಪ್ಪಿಕೊಳ್ಳಲು ಮನಸ್ಸು ಇರಲಿಲ್ಲ ಆದರೆ ಬೇರೆ ದಾರಿಯೂ ನನಗೆ ಇರಲಿಲ್ಲ.  ಸುಮ್ಮನೆ ಮಲೈಕಾಳನ್ನು ಎಳೆಯುವುದುಕ್ಕೆ ಅಗುವುದಿಲ್ಲ. ಅಕೆ ಜೊತೆ ಇರಬೇಕು ಅನ್ನೋದು ನನ್ನ ಅಯ್ಕೆ ಅಗಿತ್ತು. ಈ ವಿಚಾರದ ಬಗ್ಗೆ ಎಲ್ಲರಿಗೂ ಅರ್ಥ ಮಾಡಿಸಲು ನನಗೆ ಆಗುತ್ತಿರಲಿಲ್ಲ. ಜನರು ಹೇಗೆ ಬೇಕಿದ್ದರೂ ಅರ್ಥ ಮಾಡಿಕೊಳ್ಳಲಿ ನಾವು ಇರುವುದು ಹೀಗೆ ಒಟ್ಟಿಗೆ ಇರುತ್ತೇನೆ ಅಂತ ಪಬ್ಲಿಕ್‌ನಲ್ಲಿ ಓಡಾಡಲು ಶುರು ಮಾಡಿದೆವು' ಎಂದಿದ್ದಾರೆ ಅರ್ಜುನ್.

Follow Us:
Download App:
  • android
  • ios