Asianet Suvarna News Asianet Suvarna News

ಬಾಯ್​ಫ್ರೆಂಡ್​ನ ಹುಟ್ಟುಹಬ್ಬ ಮರೆತು ತೇಪೆಹಚ್ಚುವ ಕೆಲ್ಸ ಮಾಡಿದ ಮಲೈಕಾ ಅರೋರಾ ಸಕತ್​ ಟ್ರೋಲ್​

ಬಾಯ್​ಫ್ರೆಂಡ್​ ಅರ್ಜುನ್​ ಕಪೂರ್​ ಹುಟ್ಟುಹಬ್ಬ ಮರೆತು ತೇಪೆಹಚ್ಚುವ ಕೆಲ್ಸ ಮಾಡಿದ ಮಲೈಕಾ ಅರೋರಾ ಸಕತ್​ ಟ್ರೋಲ್​
 

Malaika Arora drops cryptic post on Arjun Kapoors birthday after skipping his midnight bash suc
Author
First Published Jun 28, 2024, 12:56 PM IST

ಬಾಲಿವುಡ್​ ಹಸಿಬಿಸಿ ಲೇಡಿ ಮಲೈಕಾ ಅರೋರಾ ಮತ್ತು ಅವರಿಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್​ ಕಪೂರ್​ ಡೇಟಿಂಗ್​ ವಿಷ್ಯ ಸಿನಿ ಪ್ರಿಯರಿಗೆ ತಿಳಿದಿರುವುದೇ. ಇವರಿಬ್ಬರೂ ಸದ್ಯ ಬ್ರೇಕಪ್​ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿಂದೆಯೂ ಈ ವಿಷಯ ಸಾಕಷ್ಟು ಸದ್ದು ಮಾಡಿತ್ತು. ನಂತರ ಇಬ್ಬರೂ ಒಟ್ಟಾಗಿ ಓಡಾಡಿದ್ದರು. ಇದೀಗ ಬ್ರೇಕಪ್​ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ನಾನು ನನ್ನ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ ಎಂದು ಮಲೈಕಾ ಸುದ್ದಿ ಹರಡುವವರ ವಿರುದ್ಧ ಗರಂ ಆಗಿಯೇ ಉತ್ತರಿಸಿದ್ದಾರೆ. ಅದೇನೇ ಇದ್ದರೂ, 50 ವರ್ಷದ ಮಲೈಕಾ ಮತ್ತು ಅರ್ಜುನ್​ ಕಪೂರ್​ ಸುದ್ದಿ ಸಿನಿ ಪ್ರಿಯರ ಬಾಯಲ್ಲಿ ಎಂದಿಗೂ ಹಾಟ್​ ಟಾಪಿಕ್ಕೇ. ವಯಸ್ಸು 50 ಆದರೂ  ಇಂದಿಗೂ ಮಲೈಕಾ ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ವಯಸ್ಸು 50 ಆದರೂ ಇಂದಿಗೂ, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್​ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್​ ಸೆನ್ಸ್​ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ.  

ಇದೀಗ ಅರ್ಜುನ್​ ಕಪೂರ್​ ಅವರ ಹುಟ್ಟುಹಬ್ಬವನ್ನೇ ಮರೆತ ಮಲೈಕಾ, ಅದಕ್ಕೆ ತೇಪೆ ಹಚ್ಚುವ ಕೆಲ್ಸ ಮಾಡಿ ಮತ್ತಷ್ಟು ಟ್ರೋಲ್​ಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಸೆಲೆಬ್ರಿಟಿಗಳಲ್ಲಿ ಹುಟ್ಟುಹಬ್ಬ ಎಂದರೆ ಅದರ ಗಮ್ಮತ್ತೇ ಬೇರೆ. ಸಾಮಾನ್ಯ ಜನರು ಹುಟ್ಟುಹಬ್ಬಕ್ಕೆ ಅದರಲ್ಲಿಯೂ ಒಂದು ಹಂತ ದಾಟಿದ ಮೇಲೆ ಸೆಲೆಬ್ರೇಟ್​ ಮಾಡುವವರು ತೀರಾ ಕಮ್ಮಿ. ಆದರೆ ಸದಾ ಟ್ರೆಂಡಿಂಗ್​ನಲ್ಲಿ ಇರಬೇಕು ಎನ್ನುವ ಕಾರಣಕ್ಕೆ, ಬಹುತೇಕ ಎಲ್ಲಾ ನಟ-ನಟಿಯರು ಹುಟ್ಟುಹಬ್ಬವನ್ನು ಗ್ರ್ಯಾಂಡ್​ ಆಗಿ ಸೆಲೆಬ್ರೇಟ್​ ಮಾಡುತ್ತಾರೆ. ಅವರಿಗೆ ಹತ್ತಿರ ಆದವರು ಪ್ರಚಾರದ ಹುಚ್ಚಿನಿಂದಾದರೂ ವಿಪರೀತ ಎನ್ನುವಷ್ಟರ ಮಟ್ಟಿಗೆ ಹರ್ಷ ವ್ಯಕ್ತಪಡಿಸಿ ಸದ್ದು ಮಾಡುತ್ತಾರೆ. ಅಂಥದ್ದರಲ್ಲಿ, ಮಲೈಕಾ ಕೇಳಬೇಕೆ? ಅದರಲ್ಲಿಯೂ  ಬ್ರೇಕಪ್​ ಸುದ್ದಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಬಾಯ್​ಫ್ರೆಂಡ್​ ಹುಟ್ಟುಹಬ್ಬ ಮಿಸ್​ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಮೊನ್ನೆ ಅಂದರೆ ಜೂನ್​ 26ರಂದು ಅರ್ಜುನ್​ ಕಪೂರ್​ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 50 ವರ್ಷದ ಮಲೈಕಾ ಅದನ್ನು ಮರೆತಿದ್ದಾರೆ.

ಬಗ್ಗಿ ಯೋಗ ಮಾಡುವಾಗ ಹಿಂಬದಿ ನೋಡಿ ಡಿವೋರ್ಸ್​ ಕೊಟ್ರಾ ಮಲೈಕಾ ಪತಿ? ಹಾಟ್​ ಬ್ಯೂಟಿ ಹೇಳಿದ್ದೇನು?

ಇದೀಗ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ, ತಾವು ಅರ್ಜುನ್​ ಕಪೂರ್​ ಹುಟ್ಟುಹಬ್ಬವನ್ನು ಮರೆತಿರುವುದನ್ನು ಮರೆಮಾಚಲು ಎರಡು ದಿನಗಳ ಬಳಿಕ, ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ಅವರು, "ನನ್ನ ಕಣ್ಣು ಮುಚ್ಚಿ ನನ್ನ ಬೆನ್ನು ತಿರುಗಿಸಿ ನಂಬುವ ಜನರನ್ನು ನಾನು ಇಷ್ಟಪಡುತ್ತೇನೆ" ಎಂದಿದ್ದಾರೆ. ಇದಕ್ಕಾಗಿ ಸಕತ್​ ಟ್ರೋಲ್​ಗೆ ಒಳಗಾಗಿದ್ದಾರೆ. ಗೊತ್ತು ಬಿಡಮ್ಮಾ ನಿಂದೆಲ್ಲಾ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಹಿಂದೆ ಅರ್ಬಾಜ್​ ಖಾನ್​ ಕೂಡ ನಿನ್ನನ್ನು ಕಣ್ಣು ಮುಚ್ಚಿಯೇ  ನಂಬಿದ್ದ. ಅವನಿಗೆ ಕೈಕೊಟ್ಟು ಚಿಕ್ಕವನ ಜೊತೆ ಓಡಿ ಬರ್ಲಿಲ್ವಾ? ಮದ್ವೆಯಾಗದೇ ದಶಕದಿಂದ ಒಟ್ಟಿಗೇ ಇಲ್ವಾ? ಈಗೆಲ್ಲಾ ಈ ನಖರಾ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. 

ಅಷ್ಟಕ್ಕೂ ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್​ ಕಪೂರ್​ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್​ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.

ಅರ್ಜುನ್ ಕಪೂರ್​ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...

Latest Videos
Follow Us:
Download App:
  • android
  • ios