Asianet Suvarna News Asianet Suvarna News

ಬಗ್ಗಿ ಯೋಗ ಮಾಡುವಾಗ ಹಿಂಬದಿ ನೋಡಿ ಡಿವೋರ್ಸ್​ ಕೊಟ್ರಾ ಮಲೈಕಾ ಪತಿ? ಹಾಟ್​ ಬ್ಯೂಟಿ ಹೇಳಿದ್ದೇನು?

ಡಿವೋರ್ಸಿಗಳನ್ನು ಸಮಾಜ ಹೇಗೆ  ನೋಡುತ್ತದೆ ಎಂದು ಹಾಸ್ಯದ ರೂಪದಲ್ಲಿ ಗರಂ ಆಗಿಯೇ ಬಾಲಿವುಡ್​ ಹಾಟ್​ ಬ್ಯೂಟಿ ಮಲೈಕಾ ಅರೋರಾ ಹೇಳಿದ್ದೇನು?
 

Actress Malaika Arora say in the form of comedy about how society sees divorcees suc
Author
First Published Jun 19, 2024, 11:03 AM IST

ಬಾಲಿವುಡ್​ ಹಸಿಬಿಸಿ ಲೇಡಿ ಮಲೈಕಾ ಅರೋರಾ ಮತ್ತು ಅವರಿಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್​ ಕಪೂರ್​ ಡೇಟಿಂಗ್​ ವಿಷ್ಯ ಸಿನಿ ಪ್ರಿಯರಿಗೆ ತಿಳಿದಿರುವುದೇ. ಇವರಿಬ್ಬರೂ ಸದ್ಯ ಬ್ರೇಕಪ್​ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿಂದೆಯೂ ಈ ವಿಷಯ ಸಾಕಷ್ಟು ಸದ್ದು ಮಾಡಿತ್ತು. ನಂತರ ಇಬ್ಬರೂ ಒಟ್ಟಾಗಿ ಓಡಾಡಿದ್ದರು. ಇದೀಗ ಬ್ರೇಕಪ್​ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ನಾನು ನನ್ನ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ ಎಂದು ಮಲೈಕಾ ಸುದ್ದಿ ಹರಡುವವರ ವಿರುದ್ಧ ಗರಂ ಆಗಿಯೇ ಉತ್ತರಿಸಿದ್ದಾರೆ. ಅದೇನೇ ಇದ್ದರೂ, 50 ವರ್ಷದ ಮಲೈಕಾ ಮತ್ತು ಅರ್ಜುನ್​ ಕಪೂರ್​ ಸುದ್ದಿ ಸಿನಿ ಪ್ರಿಯರ ಬಾಯಲ್ಲಿ ಎಂದಿಗೂ ಹಾಟ್​ ಟಾಪಿಕ್ಕೇ. ವಯಸ್ಸು 50 ಆದರೂ  ಇಂದಿಗೂ ಮಲೈಕಾ ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ವಯಸ್ಸು 50 ಆದರೂ ಇಂದಿಗೂ, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್​ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್​ ಸೆನ್ಸ್​ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ.  

 
ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್​ ಕಪೂರ್​ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್​ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.

ಅವನ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...

ಇದೀಗ ಇಂಟರೆಸ್ಟಿಂಗ್​ ವಿಷ್ಯವೊಂದನ್ನು ಮಲೈಕಾ ಕಾರ್ಯಕ್ರಮವೊಂದರಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದೇನೆಂದರೆ, ತಾವು ಅರ್ಬಾಜ್ ಖಾನ್ ಅವರನ್ನು ಡಿವೋರ್ಸ್​ ಆಗಿರುವುದೇ ದೊಡ್ಡ ತಪ್ಪು ಎನ್ನುವ ಅರ್ಥದಲ್ಲಿ ಟ್ರೋಲಿಗಳು ಮಾತನಾಡುತ್ತಾರೆ ಎಂದಿರುವ ಮಲೈಕಾ, 'ನಾನು ನಟಿ, ಅಮ್ಮ, ಮಹಿಳೆ. ಇದ್ಯಾವುದೂ ಜನರಿಗೆ ಬೇಡ. ಎಲ್ಲರಿಗೂ ನನ್ನ ಡಿವೋರ್ಸ್​ಗೆ ಚಿಂತೆ. ಬಹುಶಃ ನನ್ನ ಮನೆಯ ಎದುರಿಗಿರುವ ನೇಮ್​ಪ್ಲೇಟ್​ನಲ್ಲಿ ಕೂಡ ಮಲೈಕಾ ಅರೋರಾ- ವಿಚ್ಛೇದಿತೆ ಎಂದು ಬೋರ್ಡ್​ ಹಾಕಿದ್ರೆ ಎಲ್ಲರಿಗೂ ಖುಷಿಯಾಗತ್ತೇನೋ. ನಾನೂ ಲೈಫ್​ನಲ್ಲಿ ಸಾಕಷ್ಟು ಮುಂದುವರೆದಿದ್ದಾನೆ. ನನ್ನ ಮಾಜಿ ಪತಿ ಕೂಡ ಮುಂದುವರೆದಿದ್ದಾರೆ. ನೀವೂ ಸ್ವಲ್ಪ ಮುಂದುವರೆಯಿರಿ. ಬರೀ ಬೇರೆಯವರ ಡಿವೋರ್ಸ್​ ಬಗ್ಗೆ ಹೇಳ್ತಾ ಇರೋದನ್ನು ನಿಲ್ಲಿಸಿ' ಎಂದು ನಟಿ ಗರಂ ಆಗಿಯೇ ಹೇಳಿದ್ದಾರೆ.

ತಮ್ಮ ಡಿವೋರ್ಸ್​ ಬಗ್ಗೆ ಹೇಗೆಲ್ಲಾ ಜನ ಮಾತನಾಡುತ್ತಾರೆ ಎಂದು ತಮಾಷೆಯ ಧಾಟಿಯಲ್ಲಿ  ಸಿಟ್ಟಿನಿಂದಲೇ ಹೇಳಿದ ನಟಿ, 'ಡಿವೋರ್ಸ್​ ವಿಷಯದಲ್ಲಿ ನಾನು ಸಾಕಷ್ಟು ಸ್ಟಡಿ ಮಾಡಿಬಿಟ್ಟಿದ್ದೇನೆ. ನೋಡಿ... ನಾನು ಯೋಗ ಮಾಡುವಾಗ ಬಗ್ಗಿದೆ ಎಂದುಕೊಳ್ಳಿ. ನನ್ನ ಹಿಂಬದಿ ನೋಡಿ ಡಿವೋರ್ಸ್​ ಕೊಟ್ರಾ ಕೇಳ್ತಾರೆ. ನಾನು ಏನೋ ಬ್ರೇಕ್​ಫಾಸ್ಟ್​ ತಿನ್ನುತ್ತಿರುತ್ತೇನೆ ಅಂದುಕೊಳ್ಳಿ. ಒಹೊ ನಿನಗೆ ಬ್ರೇಕ್​ಫಾಸ್ಟ್​ ತಿನ್ನುವುದು ಹೆಚ್ಚು ಅಭ್ಯಾಸ, ಅದಕ್ಕಾಗಿಯೇ ಡಿವೋರ್ಸ್​  ಕೊಟ್ರಾ ಕೇಳ್ತಾರೆ. ನಾನು ನೀರು ಕುಡಿಯುತ್ತಿದ್ದೇನೆ ಅಂದುಕೊಳ್ಳಿ, ಒಹೊ ಡಿವೋರ್ಸ್​ ಆಗಿರುವುದಕ್ಕೆ ಅತ್ತೂ ಅತ್ತೂ ಡೀಹೈಡ್ರೇಟ್​ ಆಗಿ ಹೆಚ್ಚು ನೀರು ಕುಡಿಯುತ್ತಿದ್ದಾರಾ ಕೇಳುತ್ತಾರೆ. ನಾನು ಹಾಟ್​ ಫೋಟೋ ಶೇರ್​ ಮಾಡಿದರೆ, ನೋಡು ನೋಡಿ ಹಾಟ್​ ಡಿವೋರ್ಸ್​ ಲುಕ್​ ಅಂತ ತಮಾಷೆ ಮಾಡ್ತಾರೆ' ಎಂದಿದ್ದಾರೆ ಮಲೈಕಾ. ಒಟ್ಟಿನಲ್ಲಿ ಡಿವೋರ್ಸ್​ ಆದ ಮಹಿಳೆಯರಿಗೆ ಚುಚ್ಚಿ ಚುಚ್ಚಿ ಮಾತನಾಡುವ ಮೂಲಕ ಅವರು ವಿಚ್ಛೇದಿತರು ಎಂದು ನೆನಪು ಮಾಡಿಕೊಡುತ್ತಲೇ ಇರುತ್ತದೆ ಸಮಾಜ ಎಂದು ಬೇಸರದಿಂದಲೂ ನುಡಿದಿದ್ದಾರೆ. ಈ ಹಿಂದೆ ನಟಿ,   ತಮ್ಮ ಮತ್ತು ಅರ್ಜುನ್​ ಕಪೂರ್​ ವಯಸ್ಸು, ಸಂಬಂಧದ ಕುರಿತು ನಡೆಯುತ್ತಿರುವ ಟ್ರೋಲಿಂಗ್​ ಬಗ್ಗೆ ಗರಂ ಆಗಿದ್ದರು.   

ನನ್ನ ಹಿಂಬದಿ ಊಟದ ಟೇಬಲ್​ನಂತೆ ಕಂಡುಬಂದ್ರೆ ಏಳು ಮಂದಿಗೆ ಆಹಾರ ನೀಡ್ತೇನೆ... ನಿಮಗೇನ್ರೀ ಸಮಸ್ಯೆ ಎಂದ ಮಲೈಕಾ ಅರೋರಾ

Latest Videos
Follow Us:
Download App:
  • android
  • ios